ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ ಸೈಡ್ ರಿಪೋರ್ಟ್; ಏಕನಾಥ್ ಶಿಂಧೆ ಆಯ್ಕೆ, ಬಿಜೆಪಿ ಚಾಣಕ್ಯ ನೀತಿ!

|
Google Oneindia Kannada News

ಮುಂಬೈ, ಜೂನ್ 30: ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಿದೆ. ಮಹಾರಾಷ್ಟ್ರ ವಿಕಾಸ್ ಅಘಾಡಿಗೆ ಬೆಂಬಲವನ್ನು ವಾಪಸ್ ಪಡೆದಿದ್ದ ಶಿವಸೇನೆಯ ರೆಬಲ್ ಶಾಸಕರಿಗೆ ಜಾಕ್ ಪಾಟ್ ಹೊಡೆದಿದೆ. ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅಂದಾಜಿಸಿದ್ದ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿಯಾಗುವ ಯೋಗ ಒಲಿದು ಬಂದಿದೆ. ಶಿಂಧೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರ ಹಿಂದೆ ಬಿಜೆಪಿ ಚಾಣಕ್ಯ ನೀತಿ ಕೆಲಸ ಮಾಡಿದೆ. ಬಿಜೆಪಿಯ ಚಾಣಕ್ಯ ನೀತಿ ಏನು? ಅನ್ನೋದರ ರಿಪೋರ್ಟ್ ಇಲ್ಲಿದೆ

ಚುನಾವಣೆಯನ್ನು ಮಹಾಯುದ್ದದಂತೆ ಪರಿಗಣಿಸುವ ಬಿಜೆಪಿ ಮೇಜರ್ ಟ್ವಿಸ್ಟ್ ನೀಡಿದೆ. ರಾಜಕೀಯ ಪಡಸಾಲೆಯಲ್ಲಿ ಯಾರು ಚಿಂತಿಸದ ರೀತಿಯಲ್ಲಿ ಮಹಾನ್ ಪ್ಲಾನ್ ಮೂಲಕ ಮಹಾರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಜೊತೆಗೆ ಶಿವಸೇನೆಯ ಪಕ್ಷವನ್ನೇ ಆಪೋಷನ ತೆಗೆದುಕೊಳ್ಳಲು ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ.

ಬಿಜೆಪಿ ಚಾಣಕ್ಯ ನಡೆಯನ್ನು ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ನಿರೀಕ್ಷೆಯನ್ನೇ ಮಾಡಿರಲಿಲ್ಲ. ಏಕನಾಥ್ ಶಿಂಧೆಯನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುತ್ತಾರೆ ಎಂದು ಯಾರು ಸಹ ಊಹೆಯನ್ನು ಮಾಡಿರಲಿಲ್ಲ. ದೇವೇಂದ್ರ ಫಡ್ನವೀಸ್ ಸಿಎಂ ಆಗಲಿದ್ದಾರೆ ಎಂಬ ರಾಜಕೀಯ ಲೆಕ್ಕಾಚಾರವನ್ನು ಬದಲಾವಣೆ ಮಾಡಿ ಬಿಜೆಪಿ ಬೇರೆ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ಬಿಜೆಪಿಯ ಚಾಣಕ್ಯ ನೀತಿ ಕೆಲಸ ಮಾಡಿದೆ.

ಸಿಎಂ ಸ್ಥಾನ ಬಿಟ್ಟುಕೊಟ್ಟ ಹಿರಿಯಣ್ಣ

ಸಿಎಂ ಸ್ಥಾನ ಬಿಟ್ಟುಕೊಟ್ಟ ಹಿರಿಯಣ್ಣ

ಶಿವಸೇನೆಯ ಬಂಡಾಯ ಶಾಸಕರ ನಾಯಕನಾಗಿದ್ದ ಏಕನಾಥ್ ಶಿಂಧೆ ಮಹಾರಾಷ್ಟ್ರದ ಸಿಎಂ ಆಗಲಿದ್ದಾರೆ. ಮಹಾರಾಷ್ಟ್ರದಲ್ಲಿ ಸದಾ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಅಣ್ಣ ತಮ್ಮರ ಪಕ್ಷದಂತಿದ್ದವು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ದೂರಾದ ಶಿವಸೇನೆ ಕಾಂಗ್ರೆಸ್, ಎನ್‌ಸಿಪಿ ಜೊತೆ ಸೇರಿಕೊಂಡು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಎರಡು ವರ್ಷದ ಬಳಿಕ ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಎದ್ದು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಸಾರಲಾಯಿತು. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲಾಯಿತು. ಇದೀಗ ಶಿಂಧೆ ಬಣಕ್ಕೆ ಬಿಜೆಪಿಯೇ ಬೆಂಬಲ ನೀಡಿದೆ. ಆ ಮೂಲಕ ಹಿರಿಯಣ್ಣನ ಸ್ಥಾನದಲ್ಲಿ ನಿಂತು ಪಕ್ಷದಿಂದ ಬಂಡೆದ್ದ ನಾಯಕ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ.

ಹಿಂದೂ ಸಾಮ್ರಾಜ್ಯಕ್ಕೆ ಏಕಾಧಿಪತಿ

ಹಿಂದೂ ಸಾಮ್ರಾಜ್ಯಕ್ಕೆ ಏಕಾಧಿಪತಿ

ಮಹಾರಾಷ್ಟ್ರ ಮರಾಠಿಗರ ಆಸ್ಮಿತೆ. ಶಿವಾಜಿಯ ತವರು ನೆಲದಲ್ಲಿ ಹಿಂದೂ ಸಾಮ್ರಾಜ್ಯ, ಹಿಂದೂ ಮತಗಳನ್ನು ಕ್ರೋಢಿಕರಣ ಮಾಡುತ್ತದೆ. ಸದಾ ಬಾಳಠಾಕ್ರೆ ಇರುವ ತನಕ ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತಿದ್ದವು. ಉದ್ದವ್ ಠಾಕ್ರೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಫಲಿತಾಂಶದ ಬಳಿಕ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್, ಎನ್‌ಸಿಪಿ ಜೊತೆ ಕೈಜೋಡಿಸಿ ಮುಖ್ಯಮಂತ್ರಿಯಾಗಿಬಿಟ್ಟರು. ಇದು ಬಿಜೆಪಿಗೆ ಕುದಿ ಮೌನಕ್ಕೆ ಕಾರಣವಾಗಿತ್ತು. 48 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಮಹಾರಾಷ್ಟ್ರ ಕೈತಪ್ಪಿದ್ದು ಬಿಜೆಪಿಗೆ ಶೇಮ್ ಎನ್ನುವಂತಾಗಿತ್ತು. ಅದಕ್ಕಾಗಿಯೇ ಬಂಡೆದ್ದ ಶಿಂಧೆಗೆ ಸಹಕಾರವನ್ನು ನೀಡಿ ಇಡೀ ಪಕ್ಷವನ್ನೇ ಹೈಜಾಕ್ ಮಾಡುವ ತಂತ್ರವನ್ನು ಹೆಣೆಯಲಾಗಿದೆ. ಇದರಿಂದಾಗಿಯೇ ಮೂರನೇ ಎರಡರಷ್ಟು ಶಿವಸೇನೆ ಶಾಸಕರು ಹೊರಬಂದಿದ್ದಾರೆ.

ಶಿವಸೇನೆ ಪಕ್ಷ ಮುಂದೆ ಬಿಜೆಪಿಯಲ್ಲಿ ವಿಲೀನ ಸಾಧ್ಯತೆ

ಶಿವಸೇನೆ ಪಕ್ಷ ಮುಂದೆ ಬಿಜೆಪಿಯಲ್ಲಿ ವಿಲೀನ ಸಾಧ್ಯತೆ

ಶಿಂಧೆಯಿಂದ ಶಿವಸೇನೆ ಪಕ್ಷವೇ ಹೈಜಾಕ್ ಆಗಿದೆ ಶಿವಸೇನೆಯ ಬಹುತೇಕ ಶಾಸಕರು ಮತ್ತು ಸಂಸದರು ಶಿಂಧೆಗೆ ಜೈಕಾರವನ್ನು ಹಾಕಿದ್ದಾರೆ. ಹಿಂದೂ ಮತಗಳು ಒಡೆಯದೇ ಬಿಜೆಪಿಗೆ ಸೆಳೆಯುವ ತಂತ್ರ ಇದಾಗಿದೆ. ಶಿವಸೇನೆ ಪಕ್ಷಕ್ಕೆ ಶಿಂಧೆಯೇ ಅಧಿಪತಿಯಾಗುವ ಎಲ್ಲಾ ಸಾಧ್ಯತೆಗಳಿದ್ದೂ ಶಿವಸೇನೆ ಪಕ್ಷ ತಮ್ಮದೇ ಎಂದು ಹಕ್ಕು ಮಂಡಿಸುವ ಮತ್ತು ಕಾನೂನು ಹೋರಾಟವು ನೆಡೆಯಲಿದೆ. ಬಂಡಾಯ ಶಿವಸೇನೆ ಶಾಸಕರು ಮುಂದೆ ಬಿಜೆಪಿಯ ಜೊತೆಯಲ್ಲಿ ತಮ್ಮ ಪಕ್ಷವನ್ನೇ ವಿಲೀನ ಮಾಡುವ ತಂತ್ರವೂ ಅಡಗಿದೆ ಎಂಬ ಮಾತು ರಾಜಕೀಯದಲ್ಲಿ ಕೇಳಿಬರ್ತಿದೆ.

ಸಿಎಂ ಹುದ್ದೆ ಶಿಂಧೆ ಕೈಗೆ, ರಿಮೋಟ್ ಬಿಜೆಪಿ ಕೈಗೆ

ಸಿಎಂ ಹುದ್ದೆ ಶಿಂಧೆ ಕೈಗೆ, ರಿಮೋಟ್ ಬಿಜೆಪಿ ಕೈಗೆ

ಮಹಾರಾಷ್ಟ್ರದಲ್ಲಿ ಶಿವಸೇನೆ ಮುಖ್ಯಮಂತ್ರಿ ಸ್ಥಾನವನ್ನು ಕಸಿದ ಕಳಂಕವನ್ನು ಬಿಜೆಪಿ ನಿವಾರಿಸಿಕೊಂಡಿದೆ. ಶಿವಸೇನೆ ಬಂಡಾಯ ನಾಯಕನಿಗೆ ಪಟ್ಟವನ್ನು ಕಟ್ಟಿ ಸಿಂಪಥಿಯನ್ನು ತನ್ನೆಡೆ ಬರುವಂತೆ ಮತ್ತು ತ್ಯಾಗಮಯಿ ಪಟ್ಟಕ್ಕೆ ಬಿಜೆಪಿ ಬಂದು ಕುಳಿತಿದೆ. ಅದೇನಾದರೂ ಸಿಎಂ ಹುದ್ದೆಯನ್ನು ಶಿಂಧೆಗೆ ಬಿಟ್ಟುಕೊಟ್ಟಿರುವ ಬಿಜೆಪಿ ರಿಮೋಟ್ ಹಿಡಿದುಕೊಂಡಿದೆ. ಬಿಜೆಪಿ ಯಾವ ರೀತಿಯಲ್ಲಿ ಶಿಂಧೆಯನ್ನು ಆಟವಾಸುತ್ತೋ, ಬಿಟ್ಟು ಹಿಡಿಯುವ ರಾಜಕೀಯ ಮಾಡಿದೆಯೇ ಮುಳ್ಳನ್ನು ಮುಳ್ಳಿಂದ ತೆಗೆದು ಸುಂದರ ಹೂವಿನ ಸಾಮ್ರಾಜ್ಯ ವಶಕ್ಕೆ ಪಡೆದಿದೆಯೇ ಅನ್ನೋದು ಕೆಲವು ದಿನದ ಆಡಳಿತದ ಬಳಿಕ ತಿಳಿಯಲಿದೆ.

English summary
Eknath Shinde will take oath as Maharashtra Chief Minister at 7:30 PM, Here is the inside report on why BJP Announced him as CM Candidate. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X