ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಶೀವಸೇನಾ ಕಚೇರಿ ಆರಂಭಕ್ಕೆ ಏಕನಾಥ್‌ ಶಿಂಧೆ ಬಣ ತಯಾರಿ?

|
Google Oneindia Kannada News

ಮುಂಬೈ, ಆಗಸ್ಟ್‌ 13: ಶಿವಸೇನೆ ಪಕ್ಷದ ಹಕ್ಕು ಸಾಧಿಸಲು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಯುತ್ತಿರುವ ಮಧ್ಯೆಯೇ ಶಿಂಧೆ ಪಾಳಯವು ಹೊಸ ಶಿವಸೇನಾ ಭವನ ಕಟ್ಟಲು ಜಾಗ ಹುಡುಕುತ್ತಿದೆ ಎನ್ನಲಾಗಿದೆ.

ಶಿವಸೇನಾ ಬಂಡಾಯ ಬಣವು ಪ್ರಧಾನ ಕಚೇರಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಹಲವರು ಹೇಳುತ್ತಾರೆ. ಶಿವಸೇನಾ ಭವನ ಮಾತ್ರವಲ್ಲದೆ ಎಲ್ಲೆಡೆ ಹೊಸ ಶಾಖೆಗಳು, ಸ್ಥಳೀಯ ಪಕ್ಷದ ಕಚೇರಿಗಳನ್ನು ತೆರೆಯಲು ಅವರು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಹೊಸ ಭವನಕ್ಕೆ ಇನ್ನೂ ಯಾವುದೇ ಸ್ಥಳವನ್ನು ನಿಗದಿಪಡಿಸಲಾಗಿಲ್ಲ. ಆದರೆ ಬಂಡಾಯ ಬಣ ಮುಂಬೈನ ದಾದರ್‌ನಲ್ಲಿರುವ ಶಿವಸೇನಾ ಭವನದ ಬಳಿ ಸ್ಥಳವನ್ನು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Breaking: ಮಹಾರಾಷ್ಟ್ರ ಸಂಪುಟ ವಿಸ್ತರಣೆ, 18 ಶಾಸಕರಿಂದ ಪ್ರಮಾಣ ವಚನBreaking: ಮಹಾರಾಷ್ಟ್ರ ಸಂಪುಟ ವಿಸ್ತರಣೆ, 18 ಶಾಸಕರಿಂದ ಪ್ರಮಾಣ ವಚನ

ಆದರೆ ಹೊಸದಾಗಿ ಸೇರ್ಪಡೆಗೊಂಡ ಮಹಾರಾಷ್ಟ್ರ ಸಚಿವ ಉದಯ್ ಸಮಂತ್ ಅವರು, ನೂತನ ಶಿವಸೇನಾ ಭವನದ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ದಾದರ್‌ನಲ್ಲಿ ಶಿವಸೇನಾ ಭವನ ಮಾಡಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಸಿಎಂ ಏಕನಾಥ್‌ ಶಿಂಧೆ ಸಾಮಾನ್ಯ ಜನರನ್ನು ಭೇಟಿ ಮಾಡಲು ನಾವು ಕೇಂದ್ರ ಕಚೇರಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಅಷ್ಟೇ. ನಾವು ಹಳೆಯ ಶಿವಸೇನಾ ಭವನವನ್ನು ಗೌರವಿಸುತ್ತೇವೆ ಮತ್ತು ಅದು ಹಾಗೆಯೇ ಉಳಿಯಲಿದೆ ಎಂದು ಅವರು ಹೇಳಿದರು.

 ಠಾಕ್ರೆ ಅವರ ಆದರ್ಶಗಳಿಂದ ದೂರ

ಠಾಕ್ರೆ ಅವರ ಆದರ್ಶಗಳಿಂದ ದೂರ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ತಮ್ಮ ಬಂಡಾಯ ಬಣವನ್ನು ನಿಜವಾದ ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತದ ಅನುಯಾಯಿಗಳು ಎಂದು ಕರೆಯುತ್ತಿದ್ದಾರೆ. ಮುಂದುವರಿದು ಉದ್ಧವ್ ಠಾಕ್ರೆ ನೇತೃತ್ವದ ಗುಂಪು ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಆದರ್ಶಗಳಿಂದ ದೂರ ಸರಿಯುತ್ತಿದೆ ಎಂದು ಆರೋಪಿಸಿದ್ದಾರೆ.

Breaking: ಏಕನಾಥ್ ಶಿಂಧೆ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆBreaking: ಏಕನಾಥ್ ಶಿಂಧೆ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ

 ಅನರ್ಹತೆಯ ಅರ್ಜಿ ಸುಪ್ರೀಂನಲ್ಲಿ ಬಾಕಿ

ಅನರ್ಹತೆಯ ಅರ್ಜಿ ಸುಪ್ರೀಂನಲ್ಲಿ ಬಾಕಿ

ರಾಷ್ಟ್ರೀಯ ಪಕ್ಷ ಬಿಜೆಪಿಯೊಂದಿಗೆ ಸೇರಿಕೊಂಡು ರಾಜ್ಯದಲ್ಲಿ ಹೊಸ ಸರ್ಕಾರವನ್ನು ರಚಿಸಿದ ಏಕನಾಥ್‌ ಶಿಂಧೆ, ಇದು ದ್ವಿವ್ಯಕ್ತಿ ಸರ್ಕಾರ ವಿರುದ್ಧ ಟೀಕೆಗಳನ್ನು ಹೆಚ್ಚಾದ ಕಾರಣ ತಮ್ಮ ಸಂಪುಟವನ್ನು ವಿಸ್ತರಿಸಿದರು. ಅವರ ವಿರುದ್ಧದ ಅನರ್ಹತೆಯ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಇದಕ್ಕೂ ಮುಂಚೆ ಬಂಡಾಯ ಶಾಸಕರಿಗೆ ಸಚಿವ ಸ್ಥಾನದ ಪ್ರಮಾಣ ವಚನ ಬೋಧಿಸುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕೊಲೆ ಎಂದು ಠಾಕ್ರೆ ಬಣ ಪ್ರತಿಪಾದಿಸಿದೆ.

 ಚುನಾವಣಾ ಚಿಹ್ನೆ ಉಳಿಸಿಕೊಳ್ಳಲು ಹೋರಾಟ

ಚುನಾವಣಾ ಚಿಹ್ನೆ ಉಳಿಸಿಕೊಳ್ಳಲು ಹೋರಾಟ

ಏಕನಾಥ್‌ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 41 ದಿನಗಳ ನಂತರ ತಮ್ಮ ಬಂಡಾಯ ಶಿವಸೇನಾ ಗುಂಪು ಮತ್ತು ಬಿಜೆಪಿಯಿಂದ ತಲಾ ಒಂಬತ್ತು ಜನ ಒಟ್ಟು 18 ಮಂದಿ ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ಇಬ್ಬರು ಸದಸ್ಯರ ಸಚಿವಾಲಯವನ್ನು ವಿಸ್ತರಿಸಿದ್ದಾರೆ. ಈಗ ಉದ್ದವ್‌ ಠಾಕ್ರೆ ಬಣವು ತಮ್ಮ ಪಕ್ಷದ ಚುನಾವಣಾ ಚಿಹ್ನೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಏಕೆಂದರೆ ಏಕನಾಥ್‌ ಶಿಂಧೆ ಪಾಳಯವು ಅದರ ಮೇಲೆಯೂ ಹಕ್ಕು ಸಾಧಿಸಿದೆ. ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಬಣಕ್ಕೆ ಪಕ್ಷದ ಚುನಾವಣಾ ಚಿಹ್ನೆಯಾದ "ಬಿಲ್ಲು ಮತ್ತು ಬಾಣ" ದ ಮೇಲಿನ ತನ್ನ ಹಕ್ಕನ್ನು ಸಾಧಿಸುವ ದಾಖಲೆಗಳನ್ನು ಸಲ್ಲಿಸಲು ಇನ್ನೂ 15 ದಿನಗಳ ಕಾಲಾವಕಾಶ ನೀಡಿದೆ ಎಂದು ವರದಿಯಾಗಿದೆ.

 ಮಹಾ ವಿಕಾಸ್ ಅಘಾಡಿ ಸರ್ಕಾರ ಪತನ

ಮಹಾ ವಿಕಾಸ್ ಅಘಾಡಿ ಸರ್ಕಾರ ಪತನ

ಏಕನಾಥ್‌ ಶಿಂಧೆ ಮತ್ತು ಇತರ 39 ಸೇನಾ ಶಾಸಕರು ಜೂನ್‌ನಲ್ಲಿ ಶಿವಸೇನಾ ಪಕ್ಷದ ನಾಯಕತ್ವ ಅಂದರೆ ಉದ್ದವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದರು. ಇದು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾಯಿತು. ಮಹಾ ವಿಕಾಸ್ ಅಘಾಡಿ ಬಣವು ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಒಳಗೊಂಡಿತ್ತು. ಇದರ ನೇತೃತ್ವವನ್ನು ಠಾಕ್ರೆ ಹೊಂದಿದ್ದರು.

Recommended Video

ಮೀಡಿಯಾಗಳ ಮುಂದೆ ಗ್ರೇಟ್ ಖಲಿ ದಿಢೀರ್ ಕಣ್ಣೀರು!! ಖಲಿಗೆ ಕಾಡ್ತಿರೋ ನೋವು ಏನು? | *India | OneIndia Kannada

English summary
The Shinde camp is said to be looking for a new Shiv Sena Bhawan amid the ongoing battle in the Supreme Court to claim the right of the Shiv Sena party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X