India
 • search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಷ್ಟ್ರ ರಾಜಕೀಯ: ಬಹುಮತ ಸಾಬೀತಿಗೆ ಸೋಮವಾರ ಮುಹೂರ್ತ ಫಿಕ್ಸ್

|
Google Oneindia Kannada News

ಮುಂಬೈ, ಜುಲೈ 3: ಮಹಾರಾಷ್ಟ್ರದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಏಕನಾಥ್ ಶಿಂಧೆ-ಬಿಜೆಪಿ ಸರಕಾರಕ್ಕೆ ಜುಲೈ 4ರ ಸೋಮವಾರ ಬಹುಮತ ಸಾಬೀತಿಗೆ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಲೈ 3 ಭಾನುವಾರದಿಂದ ಎರಡು ದಿನಗಳ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ.

ಇದಕ್ಕೂ ಮೊದಲು ಸ್ಪೀಕರ್ ಆಯ್ಕೆ ಮಾಡಲಿದ್ದು, ಶಿವಸೇನೆ ಶಾಸಕ ಮತ್ತು ಉದ್ಧವ್ ಠಾಕ್ರೆ ಬೆಂಬಲಿಗ ರಾಜನ್ ಸಾಲ್ವಿ, ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪೀಕರ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ನೂತನ ಶಾಸಕ ರಾಹುಲ್ ನಾರ್ವೇಕರ್ ಎದುರಾಳಿಯಾಗಿ ಸ್ಪರ್ಧಿಸಿದ್ದಾರೆ.

Breaking; ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ Breaking; ಮುಂಬೈಗೆ ಬಂದ ರೆಬಲ್ ಶಾಸಕರು, ಸಿಎಂ & ಡಿಸಿಎಂ ಜೊತೆ ಸಭೆ

39 ಶಿವಸೇನೆ ಬಂಡಾಯ ಶಾಸಕರು ಸೇರಿದಂತೆ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿದ 50 ಶಾಸಕರು ಶನಿವಾರ ರಾತ್ರಿ ಗೋವಾದಿಂದ ಮುಂಬೈಗೆ ಚಾರ್ಟರ್ಡ್ ವಿಮಾನದಲ್ಲಿ ಆಗಮಿಸಿದ್ದಾರೆ. ವಿಧಾನಸಭೆ ಅಧಿವೇಶನದ ಮುನ್ನಾದಿನ, ಬಂದಿಳಿದ ಶಾಸಕರು ವಿಧಾನ ಭವನದ ಸಮೀಪವಿರುವ ದಕ್ಷಿಣ ಮುಂಬೈನಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದರು.

ಎನ್‌ಸಿಪಿ ನಾಯಕ ಶರದ್ ಪವಾರ್, ಉಪಸಭಾಪತಿ ನರಹರಿ ಜಿರ್ವಾಲ್ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಪರಿಗಣಿಸಲಾಗಿದ್ದರೂ ಸಹ ಸ್ಪೀಕರ್ ಆಗಿ ಕಾರ್ಯನಿರ್ವಹಿಸಬಹುದು ಎಂದು ಪ್ರತಿಪಾದಿಸಿದರು. ಫೆಬ್ರವರಿ 2021 ರಲ್ಲಿ ಕಾಂಗ್ರೆಸ್‌ನ ನಾನಾ ಪಟೋಲೆ ರಾಜೀನಾಮೆ ನೀಡಿದ ನಂತರ, ಸ್ಪೀಕರ್ ಸ್ಥಾನ ಖಾಲಿಯಾಗಿದೆ.

ಯಾವುದಯ್ಯ ನಿಜ ಶಿವಸೇನೆ; ಯಾರಿಗೆ ಒಲಿಯುವುದು ಪಕ್ಷದ ಹೊಣೆ!? ಯಾವುದಯ್ಯ ನಿಜ ಶಿವಸೇನೆ; ಯಾರಿಗೆ ಒಲಿಯುವುದು ಪಕ್ಷದ ಹೊಣೆ!?

ಸದನದ ಬಲಾಬಲ; 288 ಸದಸ್ಯ ಬಲದ ಸದನದಲ್ಲಿ 10 ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಶಾಸಕರು ಹಾಗೂ 106 ಬಿಜೆಪಿ ಶಾಸಕರು ಏಕನಾಥ್ ಶಿಂಧೆ ಅವರನ್ನು ಬೆಂಬಲಿಸಿದ್ದಾರೆ. ಶಿವಸೇನೆ 55, ಎನ್‌ಸಿಪಿ 53, ಕಾಂಗ್ರೆಸ್ 44, ಬಿಜೆಪಿ 106, ಬಹುಜನ ವಿಕಾಸ್ ಅಘಾಡಿ 3, ಸಮಾಜವಾದಿ 2, ಎಐಎಂಐಎಂ 2, ಪ್ರಹರ್ ಜನಶಕ್ತಿ 1, ಸಿಪಿಐ (ಎಂ) 1, ಪಿಡಬ್ಲ್ಯೂಪಿ 1, ಸ್ವಾಭಿಮಾನಿ ಪಕ್ಷ 1, ರಾಷ್ಟ್ರೀಯ ಸಮಾಜ ಪಕ್ಷ 1, ಜನಸುರಾಜ್ಯ ಶಕ್ತಿ ಪಕ್ಷ 1, ಕ್ರಾಂತಿಕಾರಿ ಶೆಟ್ಕರಿ ಪಕ್ಷ 1 ಸ್ಥಾನಗಳನ್ನು ಹೊಂದಿದೆ.

Eknath Shinde-BJP Government Will Face The Floor Test On July 4

ಮೇ ತಿಂಗಳಲ್ಲಿ ಶಿವಸೇನೆ ಶಾಸಕ ರಮೇಶ್ ಲಟ್ಕೆ ಅವರು ನಿಧನರಾದ ಕಾರಣ ಒಂದು ಸ್ಥಾನ ಖಾಲಿಯಾಗಿದೆ. ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಮಾಜಿ ಸಚಿವ ಛಗನ್ ಭುಜಬಲ್ ಇಬ್ಬರೂ ಎನ್‌ಸಿಪಿ ಸದಸ್ಯರಾಗಿದ್ದು, ಕೋವಿಡ್ -19 ಸೋಂಕು ಧೃಡವಾಗಿದೆ, ಪಕ್ಷದ ಇತರ ಇಬ್ಬರು ಶಾಸಕರಾದ ಅನಿಲ್ ದೇಶಮುಖ್ ಮತ್ತು ನವಾಬ್ ಮಲಿಕ್ ಪ್ರಸ್ತುತ ಜೈಲಿನಲ್ಲಿದ್ದಾರೆ.

   ಟೀಂ ಇಂಡಿಯಾ ನಾಯಕನಾಗಿದ್ದಕ್ಕೆ ರನ್ ಹೊಳೆ ಹರಿಸಿದ ಬುಮ್ರಾ | OneIndia Kannada
   English summary
   Shiv Sena-BJP government will face the floor test on July 4 during the special two-day session of the Legislative Assembly beginning here Sunday. An official said that the election for Speaker of the House will take place on Sunday following the start of House business at 11 am.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X