ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶಾಂತ್ ಸಿಂಗ್ ಸಾವು: ಮನಿ ಲಾಂಡರಿಂಗ್ ಕೇಸ್ ದಾಖಲಿಸಿದ ಇಡಿ

|
Google Oneindia Kannada News

ಮುಂಬೈ, ಜುಲೈ 31: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಮತ್ತೊಂದು ಮಹತ್ವದ ಬದಲಾವಣೆ ಪಡೆದುಕೊಂಡಿದೆ. ಸುಶಾಂತ್ ಕೇಸ್‌ಗೆ ಜಾರಿ ನಿರ್ದೇಶನಾಲಯ ಪ್ರವೇಶ ಮಾಡಿದ್ದು, ಮನಿ ಲಾಂಡರಿಂಗ್ ಕೇಸ್ ದಾಖಲಿಸಿದೆ ಎಂದು ಮಾಹಿತಿ ಹೊರಬಿದ್ದಿದೆ.

ನಟಿ ರಿಯಾ ಚಕ್ರವರ್ತಿ ಮತ್ತು ಇತರರು ತನ್ನ ಮಗನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಸುಶಾಂತ್ ಸಿಂಗ್ ಅವರ ತಂದೆ ಆರೋಪಿಸಿದ್ದರು. ಈ ದೂರಿನ ಅನ್ವಯ ಬಿಹಾರ ಪೊಲೀಸರು, ರಿಯಾ ಚಕ್ರವರ್ತಿ ಮತ್ತು ಇತರರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಇದೀಗ, ಬಿಹಾರ ಪೊಲೀಸರು ಸಲ್ಲಿಸಿರುವ ಎಫ್ ಐ ಆರ್ ವರದಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿಕೊಂಡಿದೆ.

ಸುಶಾಂತ್ ಸಿಂಗ್ ಕೇಸ್‌: ಪೊಲೀಸರ ವಿಚಾರಣೆಗೆ ಹಾಜರಾದ ಖ್ಯಾತ ನಿರ್ಮಾಪಕಸುಶಾಂತ್ ಸಿಂಗ್ ಕೇಸ್‌: ಪೊಲೀಸರ ವಿಚಾರಣೆಗೆ ಹಾಜರಾದ ಖ್ಯಾತ ನಿರ್ಮಾಪಕ

ರಜಪೂತ್ ಅವರ ಹಣ ಮತ್ತು ಅವರ ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ಇಡಿ ತನಿಖೆ ನಡೆಸಲಿದೆ. ಇಡಿ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ರಿಯಾ ಚಕ್ರವರ್ತಿ ಮತ್ತು ಇತರರನ್ನು ಮುಂದಿನ ವಾರ ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ed Files Money Laundering Case In Connection With Death Of Actor Sushant Singh Rajput

ಇನ್ನು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್ ಇಂದು ಬೆಳಗ್ಗೆಯಷ್ಟೇ ಈ ಬಗ್ಗೆ ಟ್ವೀಟ್ ಮಾಡಿದ್ದರು. 'ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಬಗ್ಗೆ ಸಾರ್ವಜನಿಕ ಭಾವನೆ ಇದೆ. ಆದರೆ ರಾಜ್ಯ ಸರ್ಕಾರದ ಹಿಂಜರಿಕೆಯನ್ನು ಗಮನಿಸಿದರೆ, ಕನಿಷ್ಠ ಜಾರಿ ನಿರ್ದೇಶನಾಲಯ ಅಡಿ ಇಸಿಐಆರ್ ನೋಂದಾಯಿಸಬಹುದು. ಇದರಿಂದ ದುರುಪಯೋಗ ಮತ್ತು ಮನಿ ಲಾಂಡರಿಂಗ್ ಆಯಾಮದ ಸತ್ಯಾಸತ್ಯತೆ ಹೊರ ಬೀಳುತ್ತೆ' ಎಂದಿದ್ದರು.

ದೇವೇಂದ್ರ ಫಡ್ನಾವಿಸ್ ಟ್ವೀಟ್ ಬೆನ್ನಲ್ಲೆ ಜಾರಿ ನಿರ್ದೇಶನಾಲಯ ಸುಶಾಂತ್ ಪ್ರಕರಣದಲ್ಲಿ ಇಸಿಐಆರ್ (ECIR- Enforcement Case Information Report ) ದಾಖಲಿಸಿಕೊಂಡಿದೆ ಎಂಬ ಅಂಶ ಲಭ್ಯವಾಗಿದೆ.

ಸಾಮಾನ್ಯ ಅಪರಾಧ ಕಾನೂನಿನ ಪ್ರಕಾರ ಸ್ಥಳೀಯ ಪೊಲೀಸರು ನಡೆಸಿದ ತನಿಖೆಯಿಂದ ಇಡಿ ತನಿಖೆ ಭಿನ್ನವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟ ಸುಶಾಂತ್ ಕೊಲೆಯಾಗಿದ್ದಾರೆ, ಸ್ವಾಮಿ ನೀಡಿದ 26 ಕಾರಣನಟ ಸುಶಾಂತ್ ಕೊಲೆಯಾಗಿದ್ದಾರೆ, ಸ್ವಾಮಿ ನೀಡಿದ 26 ಕಾರಣ

ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಸಿಂಗ್ ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಮುಂಬೈ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ.

English summary
Enforcement Directorate registers an Enforcement Case Information Report (ECIR) in Sushant Singh Rajput death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X