ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಸಹೋದರನ ಹೆಸರಲ್ಲಿದ್ದ ಫ್ಲಾಟ್ ಜಪ್ತಿ ಮಾಡಿದ ಇ.ಡಿ

|
Google Oneindia Kannada News

ಮುಂಬೈ, ಏಪ್ರಿಲ್ 12 : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಭೂಗತಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಸಹಚರನ ಹೆಸರಿನಲ್ಲಿದ್ದ 55 ಲಕ್ಷ ಮೌಲ್ಯದ ಫ್ಲಾಟ್ ಅನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವುದಾಗಿ ತಿಳಿಸಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿರುವ ಕಸ್ಕರ್ ಸಹಚರನ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿ ಈ ಫ್ಲಾಟ್ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಮ್ತಾಜ್ ಶೈಕ್‌ಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸ್ಥಿರ ಆಸ್ತಿಯ ವಿವರವನ್ನು ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಇ.ಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಥಾಣೆಯಲ್ಲಿರುವ ರಿಯಲ್‌ ಎಸ್ಟೇಟ್‌ ಡೆವಲಪರ್‌ ಸುರೇಶ್‌ ದೇವಿಚಂದ್ ಮೆಹ್ತಾರನ್ನು ಬೆದರಿಸಿ ಈ ಫ್ಲಾಟ್ ಅನ್ನು ಕಸ್ಕರ್ ಹಾಗೂ ಆತನ ಸಹಚರರು ಸುಲಿಗೆ ಮಾಡಿದ್ದಾರೆ ಅಂತ ಜಾರಿ ನಿರ್ದೇಶನಾಲಯ ಆರೋಪ ಮಾಡಿದೆ. ಇನ್ನು ದೇವಿಚಂದ್‌ ಮೆಹ್ತಾ, ದರ್ಶನ್‌ ಎಂಟರ್‌ ಪ್ರೈಸಸ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡು ವ್ಯವಹಾರ ನಡೆಸುತ್ತಿದ್ದರು. ಆದ್ರೆ ಭೂಗತ ಪಾತಕಿ ದಾವೂದ್ ಜೊತೆ ನಿಕಟ ಸಂಬಂಧ ಹೊಂದಿದ್ದ ಆರೋಪಿಗಳಾದ ಇಕ್ಬಾಲ್ ಕಸ್ಕರ್, ಮುಮ್ತಾಜ್ ಶೈಕ್‌ ಮತ್ತು ಇಸಾರ್ ಆಲಿ ಜಮೀದ್‌ ಸೈಯದ್‌ ಮೆಹ್ತಾರಿಂದ ಫ್ಲಾಟ್ ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಅಂತ ಇ.ಡಿ ಹೇಳಿದೆ.

 ಮನಿ ಲಾಂಡ್ರಿಂಗ್: ದಾವೂದ್ ಸೋದರ ಇಕ್ಬಾಲ್ ಕಸ್ಕರ್ 'ಇಡಿ' ವಶಕ್ಕೆ ಮನಿ ಲಾಂಡ್ರಿಂಗ್: ದಾವೂದ್ ಸೋದರ ಇಕ್ಬಾಲ್ ಕಸ್ಕರ್ 'ಇಡಿ' ವಶಕ್ಕೆ

ಇಷ್ಟೇ ಅಲ್ಲದೆ ಆರೋಪಿಗಳು ಮೆಹ್ತಾರಿಂದ 10 ಲಕ್ಷ ರೂಪಾಯಿಯ ನಾಲ್ಕು ಚೆಕ್‌ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಆ ಹಣವನ್ನು ತೆಗೆದುಕೊಳ್ಳಲು ಮಾತ್ರ ಮೂರು ಬೇರೆ ಬೇರೆ ಬ್ಯಾಂಕ್‌ ಖಾತೆಗಳನ್ನು ಆರೋಪಿಗಳು ಬಳಸಿದ್ದು, ಮತ್ತಿತರ ಯಾವುದೇ ಹಣಕಾಸಿನ ವ್ಯವಹಾರ ನಡೆಸಿಲ್ಲ. ಈ ಮೂಲಕ ಬಳಕೆದಾರನನ್ನು ತಿಳಿಯುವಿಕೆಯನ್ನು ತಪ್ಪಿಸಲು ಆರೋಪಿಗಳು ಈ ಕ್ರಮವನ್ನು ಅನುಸರಿಸಿದ್ದಾರೆ ಅಂತ ಇ.ಡಿ ತಿಳಿಸಿದೆ.

ED attaches Thane flat of associate of Dawoods brother

ಇನ್ನು ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಆರೋಪಿಗಳ ವಿರುದ್ದ 2017 ಸೆಪ್ಟಂಬರ್‌ನಲ್ಲಿ ಥಾಣೆ ಪೊಲೀಸರು ಆರೋಪಿಗಳ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು. ಸದ್ಯ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಈಗಾಗಲೇ ಇಡಿ ಬಂಧನದಲ್ಲಿರುವ ಇಕ್ಬಾಲ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. (ಪಿಟಿಐ)

English summary
The ED on Tuesday said it has attached a flat worth Rs 55 lakh, held in the name of an associate of fugitive gangster Dawood Ibrahim's brother Iqbal Kaskar, in Maharashtra's Thane in connection with a money laundering probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X