ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ ಗ್ಯಾಂಗ್ ಮನಿ ಲಾಂಡ್ರಿಂಗ್ ಗೂ ಬೆಂಗಳೂರಿನ ಮಹಿಳೆಗೂ ಲಿಂಕ್: ಇಡಿ

|
Google Oneindia Kannada News

ಮುಂಬೈ, ಅಕ್ಟೋಬರ್ 22: ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿನ ಆಸ್ತಿ ಪಾಸ್ತಿ ಕಾಯುತ್ತಿದ್ದ ಇಕ್ಬಾಲ್ ಮಿರ್ಚಿಗೆ ನೆರವಾಗುತ್ತಿದ್ದ ವಂಚಕರನ್ನು ಬಂಧಿಸುವ ಮೂಲಕ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವು ತನಿಖೆಯನ್ನು ತೀವ್ರಗೊಳಿಸಿದೆ. ಬೆಂಗಳೂರು ಮೂಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

45 ವರ್ಷ ವಯಸ್ಸಿನ ರಿಂಕು ದೇಶಪಾಂಡೆ ಎಂಬ ಮಹಿಳೆಯನ್ನು ಮನಿಲಾಂಡ್ರಿಂಗ್ (ಪಿಎಂಎಲ್ ಎ) ಪ್ರಕರಣದಲ್ಲಿ ಬಂಧಿಸಲಾಗಿದೆ. ವಿಚಾರಣೆಗಾಗಿ ಇಡಿ ಕಚೇರಿಗೆ ಬಂದಿದ್ದ ಮಹಿಳೆಯು ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ದಾವೂದ್ ಜೊತೆ ನಂಟು ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೆಲ್ ಗೆ ಸಮನ್ಸ್ದಾವೂದ್ ಜೊತೆ ನಂಟು ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೆಲ್ ಗೆ ಸಮನ್ಸ್

ಇಕ್ಬಾಲ್ ಮಿರ್ಚಿ ಹೊಂದಿರುವ ಬೇನಾಮಿ ಆಸ್ತಿಗಳ ದಾಖಲೆ ಪತ್ರಗಳನ್ನು ನಕಲು ಮಾಡುವಲ್ಲಿ ಮಹಿಳೆ ಮಹತ್ವದ ಪಾತ್ರ ವಹಿಸಿದ್ದಾಳೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ನಾಲ್ಕನೇ ಆರೋಪಿಯ ಬಂಧನವಾಗಿದೆ. ಇತ್ತೀಚೆಗೆ ಇಕ್ಬಾಲ್ ಮಿರ್ಚಿ ಆಪ್ತ ಹುಮಾಯುನ್ ಮರ್ಚಂಟ್ ನನ್ನು ಬಂಧಿಸಲಾಗಿತ್ತು.

ED arrests woman in Iqbal Mirchi money laundering case

ಇದಕ್ಕೂ ಮುನ್ನ ಹರೂನ್ ಅಲೀಂ ಯೂಸುಫ್ ಹಾಗೂ ರಂಜೀತ್ ಸಿಂಗ್ ಬಿಂದ್ರಾ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಎನ್ಸಿಪಿಯ ಹಿರಿಯ ಮುಖಂಡ ಪ್ರಫುಲ್ ಪಟೇಲ್ ಅವರನ್ನು ಕಳೆದ ವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಲಾಗಿತ್ತು.

2005ರಲ್ಲಿ ದಾವೂದ್ ಸಹಚರ ಇಕ್ಬಾಲ್ ಮಿರ್ಚಿ ಈ ಕಟ್ಟಡವನ್ನು ಪ್ರಫುಲ್ ಪಟೇಲ್ ಗೆ ಮಾರಿದ್ದಾನೆ. ಇಕ್ಬಾಲ್ ಪತ್ನಿ ಹಜ್ರಾ ಮೆಮೊನ್ ಹೆಸರಿನಲ್ಲಿದ್ದ ಮತ್ತೊಂದು ಆಸ್ತಿ ಕೂಡಾ ಪಟೇಲ್ ಪಾಲಾಗಿದೆ. ಈ ಕಟ್ಟಡಗಳ ಮಾಲೀಕತ್ವ ಪಡೆದ ಬಳಿಕ ಪುನರ್ ವಿನ್ಯಾಸಗೊಳಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.

2013ರಲ್ಲಿ ಲಂಡನ್ನಿನಲ್ಲಿ ಮಿರ್ಚಿ ಮೃತಪಟ್ಟಿದ್ದು, ದಾವೂದ್ ಇಬ್ರಾಹಿಂನ ಬಲಗೈ ಬಂಟರ ಪೈಕಿ ಒಬ್ಬನೆನಿಸಿದ್ದ. ಮಾದಕ ದ್ರವ್ಯ ಸಾಗಣೆ, ಬೆದರಿಕೆ, ಆಸ್ತಿ ಕಬಳಿಕೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಮುಂಬೈನ ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಕಾಲ ಕಾಲಕ್ಕೆ ಬೆದರಿಕೆ ಕರೆ ಮಾಡಿ ಹಫ್ತಾ ವಸೂಲಿ ಈತನ ಕಸುಬಾಗಿತ್ತು.

English summary
The Enforcement Directorate (ED) on Tuesday arrested a woman in connection with its money laundering probe against late gangster Iqbal Mirchi for allegedly forging documents, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X