• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಕೇಸ್: ಭಾರತಿ ಸಿಂಗ್ ನಂತರ ಆಕೆ ಪತಿ ಹರ್ಷ್ ಬಂಧನ

|

ಮುಂಬೈ, ನ. 22: ಬಾಲಿವುಡ್ ನಟ ಸುಶಾಂಗ್ ಸಿಂಗ್ ಸಾವು ಪ್ರಕರಣಕ್ಕೆ ಹೊಂದಿಕೊಂಡಂತೆ ಕಳೆದ ಜೂನ್ ತಿಂಗಳಿನಿಂದ ಆರಂಭವಾದ ಬಾಲಿವುಡ್ ಡ್ರಗ್ಸ್ ಸೇವನೆ, ಪೂರೈಕೆ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದೆ. ಹಾಸ್ಯನಟಿ ಭಾರತಿ ಸಿಂಗ್ ಬಂಧನದ ಬಳಿಕ ಆಕೆ ಪತಿ ಹರ್ಷ್ ಲಿಂಬಾಚಿಯಾ(33)ರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಟಾಂಡಪ್ ಕಾಮಿಡಿಯನ್ ಭಾರತಿ ಸಿಂಗ್ ಅವರ ಮುಂಬೈ ನಿವಾಸದ ಮೇಲೆ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಶನಿವಾರದಂದು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಹೊಂದಿರುವುದು ಪತ್ತೆಯಾಗಿತ್ತು.

ನಟಿ-ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರ ನಿರ್ಮಾಣ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿದ್ದು, ಎರಡೂ ಕಡೆಗಳಿಂದ 86.5 ಗ್ರಾಂಗಳಷ್ಟು ಗಾಂಜಾ ಪತ್ತೆಯಾಗಿದೆ, ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರು ಗಾಂಜಾ ಸೇವನೆ ಮಾಡುವುದನ್ನು ಒಪ್ಪಿಕೊಂಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆ 1986ರ ನಿಯಮಗಳ ಅಡಿ ಭಾರತಿ ಸಿಂಗ್ ಅವರನ್ನು ಬಂಧಿಸಲಾಗಿದೆ, ವಿಚಾರಣೆ ಜಾರಿಯಲ್ಲಿದೆ ಎಂದು ಎನ್ ಸಿಬಿ ಅಧಿಕಾರಿಗಳು ಹೇಳಿದ್ದಾರೆ.

15 ಗಂಟೆ ವಿಚಾರಣೆ ಬಳಿಕ ಬಂಧನ

15 ಗಂಟೆ ವಿಚಾರಣೆ ಬಳಿಕ ಬಂಧನ

ಭಾರತಿ ಸಿಂಗ್ ಅವರ ಪತಿ ಹರ್ಷ್ ಅವರನ್ನು ಮುಂಬೈನ ಎನ್ ಸಿಬಿ ಕಚೇರಿಯಲ್ಲಿ ಸತತವಾಗಿ 15 ಗಂಟೆಗಳ ವಿಚಾರಣೆಗೊಳಪಡಿಸಲಾಗಿತ್ತು. ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆ ಎಂದು ಹರ್ಷ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮುಂಬೈನಲ್ಲಿ ಇತ್ತೀಚೆಗೆ ಬಂಧಿಸಲಾದ ಇಬ್ಬರು ಡ್ರಗ್ಸ್ ಪೆಡ್ಲರ್ಸ್ ಮೂಲಕ ಭಾರ್ತಿ ಸಿಂಗ್ ಹೆಸರು ಈ ಪ್ರಕರಣದಲ್ಲಿ ತಗುಲಿಹಾಕಿಕೊಂಡಿದೆ. ಸುಶಾಂತ್ ಸಿಂಗ್ ಸಾವಿಗೂ ಸಿನಿಮಾ ಲೋಕದ ಡ್ರಗ್ಸ್ ಜಾಲಕ್ಕೂ ಇರುವ ನಂಟು ಕಂಡು ಹಿಡಿಯಲು ಯತ್ನಿಸುತ್ತಿರುವ ಪೊಲೀಸರು ಸತತ ದಾಳಿ, ಬಂಧನ, ವಿಚಾರಣೆ ನಡೆಸುತ್ತಿದ್ದಾರೆ.

ಮಾದಕ ವಸ್ತು ಪ್ರಮಾಣ ಹಾಗೂ ಜೈಲುಶಿಕ್ಷೆ

ಮಾದಕ ವಸ್ತು ಪ್ರಮಾಣ ಹಾಗೂ ಜೈಲುಶಿಕ್ಷೆ

1000 ಗ್ರಾಂ ತನಕ ಗಾಂಜಾ ಹೊಂದಿದ್ದರೆ ಅದನ್ನು ಅಲ್ಪ ಪ್ರಮಾಣ ಮಾದಕ ವಸ್ತು ಹೊಂದಿರುವ ಆರೋಪದ ಪಟ್ಟಿಗೆ ಸೇರಿಸಲಾಗುತ್ತದೆ. ಈ ಆರೋಪ ಸಾಬೀತಾದರೆ 10,000 ರು ತನಕ ದಂಡ, 6 ತಿಂಗಳು ತನಕ ಜೈಲುಶಿಕ್ಷೆಯಾಗಲಿದೆ.

 20 ವರ್ಷ ತನಕ ಜೈಲು ಶಿಕ್ಷೆ

20 ವರ್ಷ ತನಕ ಜೈಲು ಶಿಕ್ಷೆ

ವಾಣಿಜ್ಯ ಉದ್ದೇಶಿತ ಪ್ರಮಾಣ 20 ಕೆಜಿಗೂ ಅಧಿಕ ದಾಸ್ತಾನು ಹೊಂದಿದ್ದರೆ, 20 ವರ್ಷ ತನಕ ಜೈಲು ಶಿಕ್ಷೆ ವಿಧಿಸಬಹುದು. 1000 ಗ್ರಾಂನಿಂದ 20 ಕೆಜಿ ತನಕ ಎಷ್ಟೇ ಪ್ರಮಾಣದ ಮಾದಕ ವಸ್ತು ಹೊಂದಿದ್ದರೆ 10 ವರ್ಷ ಶಿಕ್ಷೆಯಾಗಲಿದೆ.

ಜನಪ್ರಿಯ ನಟ, ನಟಿಯ ಮೇಲೆ ನಿಗಾ

ಜನಪ್ರಿಯ ನಟ, ನಟಿಯ ಮೇಲೆ ನಿಗಾ

ರಿಯಾಲಿಟಿ ಟಿವಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿರುವ ಕಾಮಿಡಿಯನ್ ಭಾರ್ತಿ ಸಿಂಗ್ ಅವರು ನಿರೂಪಕಿಯಾಗಿ ಕೂಡಾ ಮಿಂಚಿದ್ದಾರೆ. ಡ್ರಗ್ಸ್ ಕೇಸಿನಲ್ಲಿ ನಟ, ನಟಿಯರು ಹಾಗೂ ಡ್ರಗ್ಸ್ ಪೆಡ್ಲರ್ಸ್ ನಡುವಿನ ವಾಟ್ಸಾಪ್ ಚಾಟ್ ಮುಖ್ಯವಾಗಿದೆ. ಸುಶಾಂತ್ ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಗೆ ಜೈಲು ದರ್ಶನವಾಗಲು ಇದೇ ಚಾಟ್ ಹಿಸ್ಟರಿ ಕಾರಣವಾಗಿದ್ದನ್ನು ಮರೆಯುವಂತಿಲ್ಲ. ರಿಯಾ ಸದ್ಯ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ಬಾಲಿವುಡ್ ತಾರೆಯರ ಮೇಲೆ ಪೊಲೀಸರು ಹಾಗೂ ಎನ್ ಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದು, ತನಿಖೆ ಮುಂದುವರೆಸಿದ್ದಾರೆ.

English summary
Haarsh Limbachiyaa, husband of comedian Bharti Singh, arrested by Narcotics Control Bureau (NCB). Singh was arrested yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X