ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆ ಈಡೇರುವವರೆಗೂ ಜಿಎಸ್‌ಟಿ ಪಾವತಿಸಬೇಡಿ: ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ

|
Google Oneindia Kannada News

ಥಾಣೆ, ಜುಲೈ 31: ಬೇಡಿಕೆಗಳು ಈಡೇರುವವರೆಗೂ ಜಿಎಸ್‌ಟಿ ಪಾವತಿಸಬೇಡಿ ಎಂದು ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದಾರೆ.

ತಮ್ಮ ಬೇಡಿಕೆಗಳನ್ನು ಆಡಳಿತಗಾರರು ಈಡೇರಿಸುವವರೆಗೂ ವ್ಯಾಪಾರಿಗಳು ಜಿಎಸ್‌ಟಿ ಪಾವತಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ಅಸೋಸಿಯೇಷನ್ ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ಶುಕ್ರವಾರ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರಕ್ಕೆ ತಮ್ಮ ಸಂದೇಶವನ್ನು ತಿಳಿಸಲು ಈ ವಿಷಯದ ಕುರಿತು ಹೋರಾಟವನ್ನು ಆರಂಭಿಸಲು ಅವರಿಗೆ ಸಲಹೆ ನೀಡಿದ್ದಾರೆ.

ಲಕ್ನೋ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಧರಣಿಲಕ್ನೋ ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಸಹೋದರ ಪ್ರಹ್ಲಾದ್ ಮೋದಿ ಧರಣಿ

ವ್ಯಾಪಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮನೆ ಬಾಗಿಲಿಗೆ ಬರಲು ಹೋರಾಟ ನಡೆಸಬೇಕೆಂದು ಅವರು ಕರೆ ನೀಡಿದರು. ದೇಶಾದ್ಯಂತ 6.50 ಲಕ್ಷ ನ್ಯಾಯ ಬೆಲೆ ಅಂಗಡಿಗಳ ಮಾಲೀಕರನ್ನು ತಾನು ಪ್ರತಿನಿಧಿಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಅಧಿಕಾರಿಗಳು ಈಡೇರಿಸುವವರೆಗೂ ಜಿಎಸ್ ಟಿಯನ್ನು ವ್ಯಾಪಾರಿಗಳು ಪಾವತಿಸಬಾರದು ಎಂದರು.

Dont Pay GST Till Demands Are Met, PMs Brother Tells Traders On Protest

ಕೋವಿಡ್-19 ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ನಿಂದ ತೀವ್ರ ರೀತಿಯ ಹೊಡೆತಕ್ಕೊಳಗಾಗಿರುವ ವ್ಯಾಪಾರಿಗಳನ್ನು ಪ್ರಹ್ಲಾದ್ ಮೋದಿ ಥಾಣೆಯಲ್ಲಿ ಭೇಟಿಯಾದರು. ಇ- ಕಾಮರ್ಸ್ ಪ್ಲಾಟ್ ಫಾರಂ ತೀವ್ರ ಹದೆಗೆಟ್ಟಿರುವುದರೊಂದಿಗೆ ಈ ವಲಯವು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಕಾರಣಕೋವಿಡ್-19 ನಿಯಮ ಉಲ್ಲಂಘನೆಗಾಗಿ ತಮ್ಮ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕಾಗಿದೆ ಎಂದು ಉಲ್ಹಾಸ್‌ನಗರ ಮತ್ತು ಅಂಬರ್ನಾಥ್‌ನ ವಿವಿಧ ವ್ಯಾಪಾರಿಗಳು ಪ್ರಹ್ಲಾದ್ ಮೋದಿಯವರಿಗೆ ತಿಳಿಸಿದರು.

ಮುಂಬೈನ ಹೊರವಲಯದಲ್ಲಿರುವ ಎರಡು ಟೌನ್‌ಶಿಪ್‌ಗಳಲ್ಲಿ ಜೀನ್ಸ್ ತೊಳೆಯುವ ಘಟಕಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುವಂತೆ ಅವರು ಪ್ರಹ್ಲಾದ್ ಮೋದಿ ಅವರನ್ನು ಒತ್ತಾಯಿಸಿದರು.

ನರೇಂದ್ರ ಮೋದಿಯಾಗಲೀ ಅಥವಾ ಯಾರೇ ಆಗಲಿ, ಅವರು ನಿಮ್ಮ ಮಾತನ್ನು ಕೇಳಬೇಕು. ನಮ್ಮ ಮಾತನ್ನು ಕೇಳುವವರೆಗೂ ಜಿಎಸ್ ಟಿ ಪಾವತಿಸುವುದಿಲ್ಲ ಎಂದು ಮೊದಲು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಿರಿ, ನಾವು ಪ್ರಜಾಪ್ರಭುತ್ವದಲ್ಲಿದ್ದೇವೆ, ಗುಲಾಮಗಿರಿಯಲ್ಲಿ ಇಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸಹೋದರ ಮತ್ತು ಆಲ್‌ಇಂಡಿಯಾ ಫೇರ್ ಪ್ರೈಸ್ ಶಾಪ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ವ್ಯಾಪಾರಿಗಳಿಗೆ ತಮ್ಮ ಬೇಡಿಕೆಗಳನ್ನು ಸರ್ಕಾರದ ಮೂಲಕ ಈಡೇರಿಸುವವರೆಗೂ ಜಿಎಸ್‌ಟಿ ಪಾವತಿಸದಂತೆ ಆಗ್ರಹಿಸಿದ್ದಾರೆ.

ಈ ವಿಷಯದಲ್ಲಿ ಆಂದೋಲವನ್ನು ಆರಂಭಿಸಬೇಕು ಎಂದು ಕರೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರಕ್ಕೆ ತಮ್ಮ ಸಂದೇಶವನ್ನು ತಿಳಿಸಲು ಪ್ರಹ್ಲಾದ್ ಮೋದಿ ಅವರು ಉದ್ಯಮಿಗಳ ಕೂಟದ ನೇತೃತ್ವವಹಿಸಿ, ನಮ್ಮ ಆಂದೋಲನವು ಎಷ್ಟು ಪ್ರಭಾವಶಾಲಿಯಾಗಬೇಕೆಂದರೆ ಉದ್ಧವ್ ಮತ್ತು ನರೇಂದ್ರ ಮೋದಿ ನಿಮ್ಮ ಮನೆ ಬಾಗಿಲಿಗೆ ಬರುವಂತಾಗಬೇಕೆಂದು ಹೇಳಿದರು.

ಅದೇ ಸಂದರ್ಭದಲ್ಲಿ ಪ್ರಹ್ಲಾದ್ ಮೋದಿ ಅವರು ದೇಶಾದ್ಯಂತ 6.50 ಲಕ್ಷ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಪ್ರತಿನಿಧಿ ಎಂದು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕ ಮತ್ತು ಅದರಿಂದ ಉಂಟಾದ ಲಾಕ್‌ಡೌನ್‌ನಿಂದ ಪ್ರಭಾವಿತರಾಗಿರುವ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ವ್ಯಾಪಾರಿಗಳನ್ನು ಪ್ರಹ್ಲಾದ್ ಭೇಟಿ ಮಾಡಿ ಸರ್ಕಾರದ ವಿರುದ್ಧ ಅಂದೋಲನಕ್ಕೆ ಕರೆ ನೀಡಿದರು.

ವ್ಯಾಪಾರಸ್ಥರಿರುವುದು ಪ್ರಜಾಪ್ರಭುತ್ವ ದೇಶದಲ್ಲಿ ವಿನಃ ಸವಾಧಿಕಾರಿ ದೇಶದಲ್ಲಿ ಅಲ್ಲ. ನರೇಂದ್ರ ಮೋದಿಯಾಗಲೀ ಅಥವಾ ಬೇರೆಯವರಾಗಲೀ ನಿಮ್ಮ ಮಾತನ್ನು ಕೇಳಬೇಕಾಗಿದೆ.

ಮೊದಲು ನೀವು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದು ಸರ್ಕಾರ ನಮ್ಮ ಮಾತನ್ನು ಕೇಳದ ಹೊರತು ನಾವು ಜಿಎಸ್‌ಟಿಯನ್ನು ಪಾವತಿಸುವುದಿಲ್ಲ ಎಂದು ಹೇಳಿ ಎಂದು ವ್ಯಾಪಾರಸ್ಥರಿಗೆ ಹೇಳಿದ್ದಾರೆ.

ಲಕ್ನೋ ಏರ್‌ಪೋರ್ಟ್‌ನಲ್ಲಿ ಧರಣಿ ಕುಳಿತಿದ್ದ ಪ್ರಹ್ಲಾದ್ ಮೋದಿ: ಬಂಧನಕ್ಕೊಳಗಾದ ತಮ್ಮ ಬೆಂಬಲಿಗರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಲಖನೌದಲ್ಲಿ ಧರಣಿ ಕುಳಿತು ಒಮ್ಮೆ ಸುದ್ದಿಯಾಗಿದ್ದರು.

ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಳಿತ ಪ್ರಹ್ಲಾದ್​ ಮೋದಿ, ಲಖನೌ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಅವರ ಬೆಂಬಲಿಗರನ್ನು ಬಿಡುಗಡೆ ಮಾಡದಿದ್ದರೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಪ್ರಹ್ಲಾದ್​ ಮೋದಿಯವರು ಅಖಿಲ ಭಾರತ ನ್ಯಾಯೋಚಿತ ಬೆಲೆ ಮಾರಾಟಗಾರರ ಒಕ್ಕೂಟದ (ಎಐಎಫ್‌ಪಿಎಸ್‌ಡಿಎಫ್) ಉಪಾಧ್ಯಕ್ಷರಾಗಿದ್ದಾರೆ.

ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ಮಾಡುವುದು ಸಾಮಾನ್ಯ, ಅಸಮಾಧಾನ ಹೊರಹಾಕುವುದು ಕೂಡ ಅಸಹಜವೇನಲ್ಲ ಆದರೆ ದೇಶದ ಪ್ರಧಾನಿ ಸಹೋದರನೇ ವ್ಯವಸ್ಥೆ ವಿರುದ್ಧ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿತ್ತು.

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆಯುತ್ತಿದ್ದ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ತೆರಳುತ್ತಿದ್ದರು. ಇಲ್ಲಿಗೆ ಬಂದು ನೋಡಿದ್ದಾಗ ನನ್ನನ್ನು ಕರೆದೊಯ್ಯಬೇಕಿದ್ದ ಬೆಂಬಲಿಗರನ್ನು ಪೊಲೀಸರು ತಡೆದಿದ್ದು ತಿಳಿದುಬಂದಿತ್ತು. ಅವರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದರು.

Recommended Video

ಕಷ್ಟಕ್ಕೆ ಸ್ಪಂದಿಸೋ ಹೆಮ್ಮೆಯ ನಾಯಕ ಜಮೀರ್! | Oneindia Kannada

ಯಾಕಾಗಿ ಬೆಂಬಲಿಗರನ್ನು ಬಂಧಿಸಲಾಗಿದೆ ಎನ್ನುವ ವರದಿಯನ್ನು ನೀಡದಿದ್ದರೆ ಸುಪ್ರೀಂಕೋರ್ಟ್‌ಗೆ ತೆರಳುವುದಾಗಿ ತಿಳಿಸಿದ್ದಾರೆ.ಆದರೆ ಪೊಲೀಸ್ ಅಧಿಕಾರಿಗಳು ಅದನ್ನು ಅಲ್ಲಗಳೆದಿದ್ದು ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದ್ದರು. ಪ್ರಹ್ಲಾದ್ ಮೋದಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

English summary
Prahlad Modi, Prime Minister Narendra Modi's brother and vice-president of All-India Fair Price Shop Association, today asked traders not to pay GST till their demands are met by authorities and advised them to launch an agitation over the issue to convey their message to the Maharashtra government and the Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X