ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಅಪ್ಪನ ಫೋಟೊ ಬಳಸಿ ಮತ ಕೇಳಿ: ಏಕನಾಥ್ ಶಿಂಧೆ ಬಣಕ್ಕೆ ಉದ್ಧವ್ ಠಾಕ್ರೆ ಎಚ್ಚರಿಕೆ

|
Google Oneindia Kannada News

ಮುಂಬೈ, ಜುಲೈ 26: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತೊಮ್ಮೆ ಹಾಲಿ ಸಿಎಂ ಏಕನಾಥ್ ಶಿಂಧೆ ಮತ್ತು ಬಂಡಾಯ ಶಿವಸೇನೆ ಬಣಗಳ ನಡುವಿನ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಶಿವ ಸೇನೆ ಪಕ್ಷದ ಬಿಲ್ಲು ಬಾಣದ ಚಿಹ್ನೆ ಬಳಸಲು ಏಕನಾಥ್ ಶಿಂಧೆ ಬಣದ ನಡುವೆ ಪೈಪೋಟಿ ನಡೆಯುತ್ತಿದೆ.

ಶಿಂಧೆ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉದ್ಧವ್ ಠಾಕ್ರೆ, ತನ್ನ ತಂದೆ ಬಾಳಾ ಠಾಕ್ರೆ ಫೋಟೋಗಳನ್ನು ಬಳಸಿ ಮತ ಭಿಕ್ಷೆ ಪಡೆದಿದ್ದಾರೆ ಎಂದು ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ತಂದೆಯ ಫೋಟೋಗಳನ್ನು ಬಳಸಿಕೊಂಡು ಮತ ಕೇಳಿ ನಮ್ಮ ತಂದೆಯ ಫೊಟೋಗಳನ್ನು ಬಳಸಿಕೊಂಡು ಅಲ್ಲ ಎಂದು ನೇರವಾಗಿಯೇ ಶಿಂಧೆ ಬಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Breaking:ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಬಣBreaking:ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಬಣ

ಶಿವಸೇನೆಯ ಮುಖವಾಣಿ ಸಾಮ್ನಾಗೆ ಸಂದರ್ಶನದಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ " ಶಿವಸೇನೆಯ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಚಿತ್ರಗಳನ್ನು ಬಳಸಿಕೊಂಡು "ಮತಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ". ಅವರು ನನಗೆ ದ್ರೋಹ ಮಾಡಿದ್ದಾರೆ, ಪಕ್ಷವನ್ನು ಒಡೆದಿದ್ದಾರೆ. ಅವರ ತಂದೆಯ ಚಿತ್ರಗಳನ್ನು ಬಳಸಿ ಮತ ಕೇಳಬೇಕು. ಶಿವಸೇನೆಯ ತಂದೆಯ ಚಿತ್ರಗಳನ್ನು ಬಳಸಿಕೊಂಡು ಮತ ಭಿಕ್ಷೆ ಬೇಡುವುದನ್ನು ನಿಲ್ಲಿಸಲಿ" ಎಂದು ಹೇಳಿದ್ದಾರೆ.

 ಆಸ್ಪತ್ರೆಯಲ್ಲಿದ್ದಾಗ ಸರ್ಕಾರ ಉರುಳಿಸಿದರು

ಆಸ್ಪತ್ರೆಯಲ್ಲಿದ್ದಾಗ ಸರ್ಕಾರ ಉರುಳಿಸಿದರು

ನನಗೆ ಅನಾರೋಗ್ಯ ಕಾಡುತ್ತಿದ್ದಾಗ ಪಕ್ಷದ ಜವಾಬ್ದಾರಿಯನ್ನು ಏಕನಾಥ್ ಶಿಂಧೆಗೆ ನೀಡಿದ್ದೆ. ಆದರೆ ಅಂತಹ ಸೂಕ್ಷ್ಮ ಸಮಯದಲ್ಲೂ ಅವರು ನನಗೆ ದ್ರೋಹ ಮಾಡಿದರು ಎಂದು ಆರೋಪಿಸಿದ್ದಾರೆ.
ಉದ್ಧವ್ ಠಾಕ್ರೆ ಅವರು ತಮ್ಮ ಬೆನ್ನುಮೂಳೆಯ ಸಮಸ್ಯೆಗಾಗಿ ಆಸ್ಪತ್ರೆಯಲ್ಲಿದ್ದಾಗ, ಬಂಡುಕೋರರು ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಸಕ್ರಿಯವಾಗಿ ಸಂಚು ರೂಪಿಸಿದರು ಎಂದು ಹೇಳಿದರು. ನವೆಂಬರ್ 2021 ರಲ್ಲಿ ಅವರ ಕುತ್ತಿಗೆ ಮತ್ತು ಬೆನ್ನುಮೂಳೆಯ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ, ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಒಂದು ವಾರದ ಅಂತರದಲ್ಲಿ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಶಿಂಧೆ V/s ಠಾಕ್ರೆ: ಶಿವಸೇನೆಯ ಆ 'ಬಿಲ್ಲು-ಬಾಣ'ಕ್ಕೆ ಯಾರು ಒಡೆಯ!?ಶಿಂಧೆ V/s ಠಾಕ್ರೆ: ಶಿವಸೇನೆಯ ಆ 'ಬಿಲ್ಲು-ಬಾಣ'ಕ್ಕೆ ಯಾರು ಒಡೆಯ!?

 ಬಂಡಾಯ ಶಾಸಕರು ದೇಶದ್ರೋಹಿಗಳು ಎಂದ ಠಾಕ್ರೆ

ಬಂಡಾಯ ಶಾಸಕರು ದೇಶದ್ರೋಹಿಗಳು ಎಂದ ಠಾಕ್ರೆ

ಸಂದರ್ಶನದಲ್ಲಿ, ಮಹಾರಾಷ್ಟ್ರದ ಮಾಜಿ ಸಿಎಂ, "ನನ್ನ ಸರ್ಕಾರ ಹೋಯಿತು, ಮುಖ್ಯಮಂತ್ರಿ ಸ್ಥಾನ ಹೋಯಿತು, ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ ನನ್ನ ಸ್ವಂತ ಜನರೇ ದೇಶದ್ರೋಹಿಗಳಾದರು. ನನ್ನ ಶಸ್ತ್ರಚಿಕಿತ್ಸೆಯಿಂದ ನಾನು ಚೇತರಿಸಿಕೊಳ್ಳುತ್ತಿರುವಾಗ ಅವರು ನನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದರು." ಎಂದಿದ್ದಾರೆ.
ಬಂಡಾಯ ಶಿವಸೇನೆ ನಾಯಕರನ್ನು "ದೇಶದ್ರೋಹಿಗಳು" ಎಂದು ಕರೆದ ಠಾಕ್ರೆ, ಹೊಸ ಎಲೆಗಳಿಗೆ ದಾರಿ ಮಾಡಿಕೊಡಲು ಮರಗಳಿಂದ ಬೀಳುವ ಕೊಳೆತ ಎಲೆಗಳಿಗೆ ಹೋಲಿಸಿದರು.

 ಶಿವಸೇನೆ ಪಕ್ಷದ ಗುರುತಿಗಾಗಿ ಕಿತ್ತಾಟ

ಶಿವಸೇನೆ ಪಕ್ಷದ ಗುರುತಿಗಾಗಿ ಕಿತ್ತಾಟ

ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ವಿರುದ್ಧ ಬಂಡೆದ್ದ ಶಿವಸೇನೆ ಶಾಸಕರು ಏಕನಾಥ್ ಶಿಂಧೆ ನಾಯಕತ್ವದಲ್ಲಿ ಸರ್ಕಾರವನ್ನು ಬೀಳಿಸುವಲ್ಲಿ ಯಶಸ್ವಿಯಾದರು. ಉದ್ದವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ನಂತರ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಶಿಂಧೆ ಬಣ ಸರ್ಕಾರ ರಚನೆ ಮಾಡಿದೆ. ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಶಿಂಧೆ ಬಣ ತನ್ನನ್ನು ತಾನು ನಿಜವಾದ ಶಿವಸೇನೆ ಎಂದು ಹೇಳಿಕೊಂಡಿದೆ. ಇದೇ ಈಗ ಉದ್ಧವ್ ಠಾಕ್ರೆ ಮತ್ತು ಶಿಂಧೆ ಬಣದ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

 ಚುನಾವಣೆಯಲ್ಲಿ ಜನ ನಿರ್ಧರಿಸುತ್ತಾರೆ

ಚುನಾವಣೆಯಲ್ಲಿ ಜನ ನಿರ್ಧರಿಸುತ್ತಾರೆ

ಶಿವಸೇನೆಯ ಕೆಲವು ಕಾರ್ಯಕರ್ತರು ಮತ್ತು ನಾಯಕರ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದೆ ನನಗೆ ಮುಳುವಾಯಿತು ಎಂದು ಅವರು ಹೇಳಿದ್ದಾರೆ. ನಿಜವಾದ ಶಿವಸೇನೆ ಯಾವುದು ಎನ್ನುವ ಪ್ರಶ್ನೆಗೆ ಅದನ್ನು ಜನರೇ ನಿರ್ಧರಿಸಲಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಚುನಾವಣೆ ನಡೆಯಲಿ ಜನ ಯಾರಿಗೆ ಬೆಂಬಲಿಸುತ್ತಾರೆ ಎಂದು ತಿಳಿಯುತ್ತದೆ. ಆಗ ಎಲ್ಲರಿಗೂ ನಿಜವಾದ ಶಿವಸೇನೆ ಯಾವುದು ಎಂದು ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

Recommended Video

5G ಭಾರತದಲ್ಲಿ ಬರ್ತಾ ಇದೆ , ಹಕ್ಕುಗಳಿಗಾಗಿ ಇಂದು ದೊಡ್ಡ ಮಟ್ಟದಲ್ಲಿ ಹರಾಜು | *India | OneIndia Kannada

English summary
Former Maharashtra Chief Minister Uddhav Thackeray said that Shinde has been “begging for votes” using the images of his father and founder of Shiv Sena, Balasaheb Thackeray. Thackeray compared rebels to “rotten leaves” that fall off the trees to make way for new leaves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X