ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪೂರ್ಣ ಲಸಿಕೆ ಪಡೆದ ಬಳಿಕವೂ ವೈದ್ಯೆಗೆ ಎರಡು ಬಾರಿ ಕೊರೊನಾ ಸೋಂಕು

|
Google Oneindia Kannada News

ಮುಂಬೈ, ಜುಲೈ 27: ವೈದ್ಯೆಯೊಬ್ಬರಿಗೆ ಕೊರೊನಾ ಲಸಿಕೆ ಪಡೆದ ಬಳಿಕವೂ ಎರಡು ಬಾರಿ ಕೊರೊನಾ ಸೋಂಕು ತಗುಲಿರುವ ಘಟನೆ ವರದಿಯಾಗಿದೆ.

ಮುಂಬೈ ಮೂಲದ ವೈದ್ಯೆಗೆ ಇದುವರೆಗೂ ಒಟ್ಟು ಮೂರು ಬಾರಿ ಕೊರೊನಾ ಸೋಂಕು ತಗುಲಿದೆ, ಎರಡು ಡೋಸ್ ಲಸಿಕೆ ಪಡೆದ ಬಳಿಕವೂ ಎರಡು ಬಾರಿ ಸೋಂಕು ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಒಟ್ಟು 13 ತಿಂಗಳುಗಳಲ್ಲಿ 26ವರ್ಷದ ವೈದ್ಯೆ ಮೂರು ಬಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ, ಮನೆಯಲ್ಲಿ ತಂದೆ, ತಾಯಿ, ಸಹೋದರ ಎಲ್ಲರಿಗೂ ಸೋಂಕು ತಗುಲಿತ್ತು. ಅವರೂ ಕೂಡ ಎರಡೂ ಡೋಸ್‌ ಲಸಿಕೆಯನ್ನು ಪಡೆದಿದ್ದರು.

Mumbai Doctor Tests Covid Positive Thrice, Twice After Both Vaccine Doses

ಇದೀಗ ಇಡೀ ಕುಟುಂಬವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಅವರಿಗೆ ಕೊರೊನಾ ರೂಪಾಂತರಿ ತಗುಲಿದೆಯೇ ಎಂದು ಪರೀಕ್ಷೆ ಮಾಡಲಾಗುತ್ತಿದೆ.

ಡಾ. ಸೃಷ್ಟಿ ಅವರು ಮುಂಬೈನ ವೀರ ಸಾವರ್ಕರ್ ಆಸ್ಪತ್ರೆಯಲ್ಲಿ ಕೋವಿಡ್ ಡ್ಯೂಟಿಯಲ್ಲಿದ್ದರು. ಕಳೆದ ವರ್ಷ ಜೂನ್ 17ರಂದು ಅವರಿಗೆ ಮೊದಲ ಬಾರಿಗೆ ಸೋಂಕು ತಗುಲಿತ್ತು ಸೋಂಕಿನ ಲಕ್ಷಣಗಳು ಸೌಮ್ಯವಾಗಿತ್ತು.

ಅವರು ಮಾರ್ಚ್ 8ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು, ಏಪ್ರಿಲ್ 29ರಂದು ಎರಡನೇ ಡೋಸ್ ಪಡೆದಿದ್ದರು. ಅವರ ಜತೆಗೆ ಇಡೀ ಕುಟುಂಬದವರಿಗೂ ಲಸಿಕೆ ನೀಡಲಾಗಿತ್ತು.

ಒಂದು ತಿಂಗಳ ಬಳಿಕ ಮೇ 29ರಂದು ಸೃಷ್ಟಿ ಅವರಿಗೆ ಎರಡನೇ ಬಾರಿ ಕೊರೊನಾ ಸೋಂಕು ತಗುಲಿರುವುದು ತಿಳಿದುಬಂದಿತ್ತು. ಮನೆಯಲ್ಲೇ ಆರೈಕೆ ಮಾಡಿಕೊಂಡು ಗುಣಮುಖರಾಗಿದ್ದರು. ಮತ್ತೆ ಜುಲೈ 11ರಂದು ಮೂರನೇ ಬಾರಿ ಸೋಂಕಿಗೆ ಒಳಗಾಗಿದ್ದಾರೆ.

ಈ ಬಾರಿ ಮತ್ತೆ ಇಡೀ ಕುಟುಂಬಕ್ಕೆ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕೂ ಮಂದಿಗೆ ರೆಮ್‌ಡೆಸಿವಿರ್ ನೀಡಲಾಗುತ್ತಿದೆ.

"ಮೂರನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದಾಗ ತುಂಬಾ ಕಷ್ಟ ಅನುಭವಿಸಬೇಕಾಯಿತು, ನನ್ನ ತಾಯಿ ಹಾಗೂ ಸಹೋದರನಿಗೆ ಮಧುಮೇಹವಿದೆ, ತಂದೆಡೆ ಹೈಪರ್ ಟೆನ್ಷನ್ ಹಾಗೂ ಕೊಲೆಸ್ಟ್ರಾಲ್ ತೊಂದರೆಯಿದೆ'' ಎಂದು ವೈದ್ಯೆ ಹೇಳಿದ್ದಾರೆ.

English summary
Amid debate over the efficacy of Covid vaccines, particularly against newer and more aggressive variants of the coronavirus, a 26-year-old Mumbai doctor tested positive thrice in 13 months - twice after taking both doses of a vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X