ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನಾಯಕರಿಂದ ರಕ್ಷಿಸಿ: ಅತೃಪ್ತ ಶಾಸಕರಿಂದ ಪೊಲೀಸ್ ದೂರು

|
Google Oneindia Kannada News

ಮುಂಬೈ, ಜುಲೈ 15: ಮುಂಬೈನಲ್ಲಿ ನೆಲೆಸಿರುವ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ಪೋವಾಯ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ದೂರು ನೀಡಿರುವ ಅತೃಪ್ತ ಶಾಸಕರು, ನಮಗೆ ಕೆಲವು ಕಾಂಗ್ರೆಸ್ ಮುಖಂಡರಿಂದ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಎಂಟಿಬಿ ನಾಗರಾಜು ಆಗಮನ: ಅತೃಪ್ತ ಶಾಸಕರು ಹೇಳಿದ್ದೇನು?ಎಂಟಿಬಿ ನಾಗರಾಜು ಆಗಮನ: ಅತೃಪ್ತ ಶಾಸಕರು ಹೇಳಿದ್ದೇನು?

ನಾವು ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಆಗಲಿ ಮತ್ತಾವುದೇ ಕರ್ನಾಟಕದ ಕಾಂಗ್ರೆಸ್ ಮುಖಂಡರ ಅಥವಾ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರನ್ನು ಭೇಟಿ ಆಗುವ ಮನಸ್ಥಿತಿಯಲ್ಲಿ ಇಲ್ಲ ಹಾಗಾಗಿ ಅವರು ನಮ್ಮನ್ನು ಭೇಟಿ ಆಗದಂತೆ ಅವರಿಂದ ರಕ್ಷಣೆ ಕೊಡಿ ಎಂದು ಅತೃಪ್ತ ಶಾಸಕರು ದೂರಿನಲ್ಲಿ ನೀಡಿದ್ದಾರೆ.

Dissident MLAs who were in Mumbai, gave police complaint

ಇಂದು ಹಿರಿಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಮುಂಬೈಗೆ ಭೇಟಿ ನೀಡುವ ಸಾಧ್ಯತೆ ಇದೆ, ಇದನ್ನು ಮೊದಲೇ ಅರಿತ ಅತೃಪ್ತರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ಈ ಮೊದಲೂ ಡಿ.ಕೆ.ಶಿವಕುಮಾರ್ ಅವರು ಮುಂಬೈಗೆ ಬಂದಾಗಲೂ ಅತೃಪ್ತರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು.

ಆನೇಕಲ್ : ಕಾಂಗ್ರೆಸ್ಸಿಗರ ಸಂಧಾನ ನಂತರ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ ಆನೇಕಲ್ : ಕಾಂಗ್ರೆಸ್ಸಿಗರ ಸಂಧಾನ ನಂತರ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ

ರಿನೈಸೆನ್ಸ್‌ ಹೊಟೆಲ್ ಬಳಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಇನ್ನಷ್ಟು ಬಂದೋಬಸ್ತ್‌ ಅನ್ನು ಇಂದು ಆಯೋಜಿಸಲಾಗುತ್ತದೆ.

English summary
Congress-JDS dissident MLAs who were in Mumbai gave police complaint. They stated in complaint that we did not want to meet anybody, some Congress leaders threatened us so please keep them out of us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X