• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಸ್ಲಿಂ ಕುಟುಂಬವನ್ನು ಪಿವಿಆರ್ ನಿಂದ ಹೊರ ಹಾಕಿದ್ದೇಕೆ?

By Mahesh
|

ಮುಂಬೈ, ನ.30: ಸಾಮಾಜಿಕ ಜಾಲ ತಾಣ, ಸಂಸತ್ತು ಸೇರಿದಂತೆ ದೇಶದ ಹಲವೆಡೆ ಅಸಹಿಷ್ಣುತೆಯ ಮಾತು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಕುಟುಂಬದ ನಡವಳಿಕೆಯಿಂದ ಬೇಸತ್ತು, ಸಾರ್ವಜನಿಕರು ಸಹಿಷ್ಣುತೆ ಮೀರಿ ವರ್ತಿಸಬೇಕಾದ ಘಟನೆ ನಡೆದಿದೆ.

ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ತಮಾಷಾ ಚಿತ್ರ ನೋಡಲು ಬಂದ ಕುಟುಂಬ ಮಾಡಿದ್ದು ತಮಾಷೆ ವಿಷಯವಲ್ಲ. ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದಕ್ಕೆ ಚಿತ್ರಮಂದಿರದಿಂದ ಹೊರ ಕಳಿಸಲಾಗಿದೆ.[ರಾಷ್ಟ್ರಗೀತೆಯನ್ನು ಸುತ್ತಿಕೊಂಡಿರುವ ವಿವಾದ ಒಂದೆ ಎರಡೆ?]

ರಣಬೀರ್ ಮತ್ತು ದೀಪಿಕಾ ನಟಿಸಿರುವ 'ತಮಾಷಾ' ಸಿನಿಮಾ ನೋಡಲು ಬಂದಿದ್ದ ಮುಸ್ಲಿಂ ಕುಟುಂಬದವರು ಪಿವಿಆರ್ ಹಾಲ್ ನಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಸೀಟಿನಿಂದ ಎದ್ದು ನಿಲ್ಲಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಇತರೆ ಪ್ರೇಕ್ಷಕರು, ಆ ಕುಟುಂಬವನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ಕುಟುಂಬ ಚಿತ್ರಮಂದಿರದಿಂದ ಹೊರಕ್ಕೆ ಹೋಗುವವರೆಗೂ ಚಿತ್ರ ಪ್ರದರ್ಶನ ಮಾಡಲು ಬಿಡುವುದಿಲ್ಲ ಎಂದು ಪ್ರೇಕ್ಷಕರು ಆಗ್ರಹಿಸಿದ್ದಾರೆ.[ರಾಷ್ಟ್ರಗೀತೆಯಲ್ಲಿರುವ 'ಅಧಿನಾಯಕ' ಪದ ಬದಲಿಸಿ]

ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ ಮುಸ್ಲಿಂ ಕುಟುಂಬದ ವಿರುದ್ಧ ಇತರೆ ಪ್ರೇಕ್ಷಕರು ಕೂಗಾಡುವ, ಬುದ್ಧಿವಾದ ಹೇಳುವ, ತೆಗೆದು ಕೆನ್ನೆಗೆ ಬಾರಿಸಿ ಬಿಡುತ್ತೇನೆ ಎನ್ನುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. 2.40 ನಿಮಿಷದ ವಿಡಿಯೋ ಕ್ಲಿಪ್ಪಿಂಗ್ ನನ್ನು ಯಾರು ತೆಗೆದಿದ್ದು ನಿಜಕ್ಕೂ ಅಲ್ಲಿ ನಡೆದಿದ್ದು ಏನು ಎಂಬುದಕ್ಕೆ ಸ್ಪಷ್ಟವಾದ ಪುರಾವೆಗಳಿಲ್ಲ. ಅದರೆ, ಯೂಟ್ಯೂಬ್, ಫೇಸ್ ಬುಕ್ ಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಟ್ವಿಟ್ಟರ್ ನಲ್ಲಿ ಎಂದಿನಂತೆ ಪರ ವಿರೋಧ ಸಂದೇಶಗಳು ಬರುತ್ತಿವೆ.

ಎಲ್ಲೆಲ್ಲಿ ರಾಷ್ಟ್ರಗೀತೆ ಮೊಳಗುತ್ತದೆ

ಎಲ್ಲೆಲ್ಲಿ ರಾಷ್ಟ್ರಗೀತೆ ಮೊಳಗುತ್ತದೆ

ಮೆಟ್ರೋಪಾಲಿಟನ್ ನಗರಗಳಲ್ಲಿ ಪುಣೆ, ಮುಂಬೈ ಹಾಗೂ ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುತ್ತದೆ.

ಮುಸ್ಲಿಂ ಕುಟುಂಬ ಮಾಡಿದ್ದು ತಪ್ಪೇ?

ಮುಸ್ಲಿಂ ಕುಟುಂಬ ಮಾಡಿದ್ದು ತಪ್ಪೇ?

ಕಾನೂನಿನ ಪ್ರಕಾರ ಮುಸ್ಲಿಂ ಕುಟುಂಬ ಮಾಡಿದ್ದರಲ್ಲಿ ತಪ್ಪೇನಿಲ್ಲ. 2005ರ ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿ ಬಾರಿ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಂತು ಗೌರವ ಸೂಚಿಸಬೇಕಾಗಿಲ್ಲ. ಇದು ವೈಯಕ್ತಿಕ ವಿಚಾರವಾಗಿದ್ದು, ಕ್ರೈಂ ಆಗುವುದಿಲ್ಲ.

ಈ ಬಗ್ಗೆ ಸರಿಯಾದ ಸ್ಪಷ್ಟನೆ ಅಗತ್ಯ

ದೇಶ, ರಾಷ್ಟ್ರಗೀತೆಗೆ ಗೌರವ ಸೂಚಿಸುವುದು ಆದ್ಯ ಕರ್ತವ್ಯ. ಅದರೆ, ಈ ವಿಷಯದಲ್ಲಿ ಜಾತಿ ಧರ್ಮ ಮುಂದೆ ತಂದು ಕಿರಿಕಿರಿ ಮಾಡಬಾರದು.

ನೀವು ಭಾರತೀಯರಾದರೇ ಗೌರವ ಸೂಚಿಸಿ

ನೀವು ಭಾರತೀಯರಾದರೇ, ಸಾರ್ವಜನಿಕ ಸ್ಥಳದಲ್ಲಿ ರಾಷ್ಟ್ರಗೀತೆ ಕೇಳಿ ಬಂದರೆ ಗೌರವ ಸೂಚಿಸಬೇಕು ಅಷ್ಟೇ

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಏಕೆ ಹಾಡಬೇಕು?

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಏಕೆ ಹಾಡಬೇಕು? ಈ ನಿಯಮ ಸರಿ ಎನಿಸುವುದಿಲ್ಲ. ಮನರಂಜನೆ ತಾಣದಲ್ಲಿ ಬಲವಂತವಾಗಿ ರಾಷ್ಟ್ರಪ್ರೇಮ ಉಕ್ಕಿಸುವುದು ಸರಿಯೇ?

ರಿಪಬ್ಲಿಕ್ ಡೇ ಪರೇಡ್ ನಲ್ಲಿ ಹಾಡಿದಂತೆ ಆಗುತ್ತದೆ

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಮೊಳಗುವುದು ರಿಪಬ್ಲಿಕ್ ಡೇ ಪರೇಡ್ ನಲ್ಲಿ ಹಾಡಿದಂತೆ ಆಗುತ್ತದೆ

rn

ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ್ದಾರೆ ಎನ್ನಲಾದ ವಿಡಿಯೋ

ಮುಸ್ಲಿಂ ಕುಟುಂಬ ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ್ದಾರೆ ಎನ್ನಲಾದ ವಿಡಿಯೋ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A video where a Muslim family was being asked to leave a PVR Theater hall in Kurla, Mumbai for not standing up during the National Anthem has become viral social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more