ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸಿಎಂ ಕಚೇರಿಯ ಚಹಾ-ತಿಂಡಿ ಖರ್ಚು 3.34 ಕೋಟಿ. ರೂ!

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಮಾರ್ಚ್ 29: ಮಹಾರಾಷ್ಟ್ರದ ಮುಖ್ಯಮಂತ್ರಿ ಕಚೇರಿಯ ಚಹಾ ಮತ್ತು ತಿಂಡಿಯ ಖರ್ಚು ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆರ್.ಟಿ.ಐ ಮೂಲಕ ಪಡೆದ ಮಾಹಿತಿಗಳನ್ನು ಆಧರಿಸಿ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಸಂಜಯ್ ನಿರುಪಮ್ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ನೀಡುವ ಚಹಾ ಮತ್ತು ತಿಂಡಿಯ ಖರ್ಚಿನಲ್ಲಿ ಶೇಕಡಾ 577 ಏರಿಕೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಲೆ ಇಷ್ಟಾ ಅನ್ನೋ ಚಿದಂಬರಂ ಪ್ರಶ್ನೆಗೆ ಟ್ವಿಟ್ಟಿಗರು ಕೊಟ್ರು ನೋಡಿ ಮಾರುತ್ತರ?ಬೆಲೆ ಇಷ್ಟಾ ಅನ್ನೋ ಚಿದಂಬರಂ ಪ್ರಶ್ನೆಗೆ ಟ್ವಿಟ್ಟಿಗರು ಕೊಟ್ರು ನೋಡಿ ಮಾರುತ್ತರ?

"ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಯಾವ ರೀತಿಯ ಚಹಾ ಕುಡಿಯುತ್ತಿದ್ದಾರೆ?" ಎಂದವರು ಸಿಟ್ಟಿನಿಂದ ಪ್ರಶ್ನಿಸಿದ್ದಾರೆ.

Did Maharashtra CMO spend Rs 3,34 crore on tea and snacks? Congress says yes

"2016ರಲ್ಲಿ ಚಹಾ ಮತ್ತು ತಿಂಡಿಗೆ 58 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಈ ಹಣ 2017-18ರಲ್ಲಿ ರೂ. 3.34 ಕೋಟಿಗೆ ಏರಿಕೆಯಾಗಿದೆ. ಒಟ್ಟಾರೆ ಟೀ ಮತ್ತು ಸ್ನಾಕ್ ಖರ್ಚಿನಲ್ಲಿ ಶೇಕಡಾ 577 ರಷ್ಟು ಏರಿಕೆ ಆಗಿರುವುದು ಆರ್.ಟಿ.ಐ ಮಾಹಿತಿಗಳಿಂದ ತಿಳಿದು ಬಂದಿದೆ," ಎಂದವರು ಆರೋಪಿಸಿದ್ದಾರೆ.

"ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರತಿದಿನ 18,591 ಲೋಟ ಚಹಾ ವಿತರಣೆ ಮಾಡಲಾಗುತ್ತಿದೆ. ದೇವೇಂದ್ರ ಫಡ್ನವೀಸ್ ಅವರು ಇದರಲ್ಲಿ ಯಾವ ರೀತಿಯ ಚಹಾ ಸೇವಿಸುತ್ತಾರೆ. ನಾವು ಗ್ರೀನ್ ಟೀ, ಯೆಲ್ಲೋ ಟೀ ಕೇಳಿದ್ದೇವೆ. ಬಹುಶಃ ದೇವೇಂದ್ರ ಫಡ್ನವೀಸ್ ಗೋಲ್ಡನ್ ಟೀ (ಚಿನ್ನದ ಚಹಾ) ಸೇವಿಸುತ್ತಿರಬಹುದು," ಎಂದವರು ಅಣಕವಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿದಿನ ರೈತರು ಸಾವನ್ನಪ್ಪುತ್ತಿರುವಾಗ ನನಗೆ ಈ ಚಹಾದ ದುಬಾರಿ ಖರ್ಚು ಅರ್ಥವಾಗುತ್ತಿಲ್ಲ ಎಂದು ನಿರುಪಮ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ನರೇಂದ್ರ ಮೋದಿ ತಾವೊಬ್ಬ ಚಾಯ್ ವಾಲಾ ಎನ್ನುತ್ತಾರೆ. ಆದರೆ ಇವರಲ್ಲಿ ಚಹಾದ ಹೆಸರಿನಲ್ಲಿ ಹಣ ಹೊಡೆಯುತ್ತಾರೆ ಎಂದವರು ಟೀಕಿಸಿದ್ದಾರೆ.

ಇದೇ ವೇಳೆ ಇಲ್ಲಿನ ಆಡಳಿತ ಕೇಂದ್ರ 'ಮಂತ್ರಾಲಯ'ದಲ್ಲಿ ಇಲಿ ಮತ್ತು ಹೆಗ್ಗಣ ಹಿಡಿಯುವ ಯೋಜನೆಯಲ್ಲೂ ಅಕ್ರಮ ನಡೆದಿದೆ ಎಂದು ಮುಂಬೈ ಕಾಂಗ್ರೆಸ್ ಮುಖ್ಯಸ್ಥರು ಆರೋಪಿಸಿದ್ದಾರೆ.

ಈ ಆರೋಪಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಮುಖ್ಯಮಂತ್ರಿಗಳ ಕಾರ್ಯಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

English summary
There appears to be a storm brewing in a teacup in Maharashtra with the Congress accusing the Chief Minister’s Office of inflating bills on tea and snacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X