• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್ ನಡುವೆ ಧೀರೂಭಾಯ್ ಅಂಬಾನಿ ಶಾಲೆ ತರಗತಿಗಳು ಆರಂಭ

|

ಮುಂಬೈ, ಮಾರ್ಚ್ 29: ಭಾರತದ ಪ್ರಮುಖ ಅಂತರರಾಷ್ಟ್ರೀಯ ಶಾಲೆಯಾದ ಧಿರುಭಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ (ಡಿಎಐಎಸ್) ತನ್ನ ವಿದ್ಯಾರ್ಥಿಗಳಿಗೆ ಲೈವ್ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದೆ. ಆನ್‌ಲೈನ್ ಮೀಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ವೀಡಿಯೊ ಕ್ಲಾಸ್‌ ರೂಮ್‌ಗೆ ಹಾಜರಾಗಲಿದ್ದಾರೆ ಮತ್ತು ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಪಡೆಯಲಿದ್ದು, ಲೈವ್‌ನಲ್ಲಿಯೇ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ.

ರಿಲಯನ್ಸ್ ಜಿಯೋ ಒದಗಿಸುವ ಬ್ಯಾಂಡ್‌ವಿಡ್ತ್ ಮತ್ತು ಸಂಪರ್ಕದೊಂದಿಗೆ ತರಗತಿಗಳನ್ನು ನಡೆಸಲು ಶಾಲೆಯು ಮೈಕ್ರೋಸಾಫ್ಟ್ ಟೀಮ್ಸ್‌ ವೇದಿಕೆಯಾಗಿ ಬಳಸುತ್ತಿದೆ. ಇದನ್ನೇ ಶಿಕ್ಷಕರು ಪರಸ್ಪರ ಸಹಯೋಗ ಮತ್ತು ಯೋಜನೆಗಾಗಿ ಬಳಸುತ್ತಿದ್ದಾರೆ. ಇದಲ್ಲದೆ, ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಯು ವೈಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಸಹ ಬಳಸುತ್ತದೆ.

ಕೊರೊನಾ: ವಾಟ್ಸಾಪ್ ಚಾಟ್‌ಬಾಟ್ ಕೈ ಜೋಡಿಸಿದ ರಿಲಯನ್ಸ್

ಆನ್‌ಲೈನ್ ಲೈವ್ ಟೀಚಿಂಗ್ 10ನೇ ಮತ್ತು 12ನೇ ವಿದ್ಯಾರ್ಥಿಗಳಿಗೆ ಇಂದಿನಿಂದ ಆರಂಭವಾಗಿದ್ದು, ಪೂರ್ಣ ದಿನದ ತರಗತಿಗಳು ನಡೆಯಿತು. ಮುಂದಿನ 4-5 ದಿನಗಳಲ್ಲಿ ಶಾಲೆಯು ಎಲ್ಲಾ ವಿದ್ಯಾರ್ಥಿಗಳಿಗೆ ಲೈವ್ ಆನ್‌ಲೈನ್ ತರಗತಿಗಳನ್ನು ವಿಸ್ತರಿಸಲಿದೆ. ನಿಗದಿಯಂತೆ, ಮಾರ್ಚ್ 13 ರಿಂದ 25 ರವರೆಗಿನ ವಿರಾಮದ ನಂತರ ಹೊಸ ಶೈಕ್ಷಣಿಕ ವರ್ಷದ ಅಧ್ಯಾಯನಕ್ಕಾಗಿ ಆನ್‌ಲೈನ್ ಶಾಲೆ ಇಂದು ಮತ್ತೆ ತೆರೆಯಲ್ಪಟ್ಟಿತು.

ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ

ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿ

ಆನ್‌ಲೈನ್ ಶಾಲೆ ಆರಂಭದ ಕುರಿತು ಶಾಲಾ ಮಕ್ಕಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರಾದ ನೀತಾ ಅಂಬಾನಿ (ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯ ಸ್ಥಾಪಕರು ಮತ್ತು ಅಧ್ಯಕ್ಷರು) ಇದು ಹೊಸ ಶೈಕ್ಷಣಿಕ ಪರ್ವವಾಗಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗವು ಸೃಷ್ಠಿಸಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್‌ ಶಾಲೆಗಳನ್ನು ಆರಂಭಿಸಲಾಗಿದೆ.

ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವ ತಯಾರಿ

ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವ ತಯಾರಿ

ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವ ತಯಾರಿಯಲ್ಲಿ ಶಾಲೆಯು ಎಲ್ಲಾ ತರಗತಿಯ ವಸ್ತುಗಳನ್ನು ಆನ್‌ಲೈನ್ ಬೋಧನೆಗೆ ಸೂಕ್ತವಾಗುವಂತೆ ಪರಿವರ್ತಿಸಿದೆ ಮತ್ತು ಕಳೆದ ಕೆಲವು ದಿನಗಳಿಂದ ತನ್ನ ಶಿಕ್ಷಕರಿಗೆ ಈ ಹೊಸ ಕಲಿಕೆಯ ಬಗ್ಗೆ ತರಬೇತಿ ನೀಡಿದೆ. ಎಲ್ಲಾ ತರಬೇತಿ ಮತ್ತು ಪೂರ್ವಸಿದ್ಧತಾ ಕಾರ್ಯಗಳಿಗಾಗಿ ಶಿಕ್ಷಕರು ತಮ್ಮ ಸ್ವಂತ ಮನೆಯಿಂದ ಆನ್‌ಲೈನ್‌ ಮೂಲಕ ಭಾಗವಹಿಸುತ್ತಿದ್ದರು.

ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ಲಾಕ್‌ಡೌನ್‌ನಿಂದಾಗಿ 138 ದೇಶಗಳಲ್ಲಿ ಅಂತರರಾಷ್ಟ್ರೀಯ ಮಂಡಳಿಯ ಪರೀಕ್ಷೆಗಳು ರದ್ದುಗೊಂಡಿವೆ, ಒಂದು ಶತಕೋಟಿಗೂ ಹೆಚ್ಚು ಮಕ್ಕಳು ಅಥವಾ ಸುಮಾರು 80 ಪ್ರತಿಶತದಷ್ಟು ಕಲಿಯುವವರು ಇದರಿಂದ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನಲೆಯ ವಿದ್ಯಾರ್ಥಿಗಳ ಒಟ್ಟಾರೆ ಯೋಗಕ್ಷೇಮದ ಬಗ್ಗೆ DAIS ಸಮಾನವಾಗಿ ಕಾಳಜಿ ವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ವರ್ಚುವಲ್ ಸ್ಕೂಲ್ ಪ್ಲಾಟ್‌ಫಾರ್ಮ್

ವರ್ಚುವಲ್ ಸ್ಕೂಲ್ ಪ್ಲಾಟ್‌ಫಾರ್ಮ್

"ನಮ್ಮ ರಾಷ್ಟ್ರವು 21 ದಿನಗಳ ಸಂಪೂರ್ಣ ಲಾಕ್‌ಡೌನ್‌ ಆಗಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಹೆಚ್ಚು ಜಾಗರೂಕರಾಗಿರಬೇಕು. ಮನೆಯಲ್ಲಿ ಉಳಿಯುವುದರೊಂದಿಗೆ ಆರೋಗ್ಯವಾಗಿರಿ ಮತ್ತು ಮುಖ್ಯವಾಗಿ ಶಾಂತವಾಗಿರಿ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆ ಎಲ್ಲ ಮಕ್ಕಳ ಸಮಗ್ರ ಯೋಗಕ್ಷೇಮಕ್ಕೆ ಬದ್ಧವಾಗಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ, ಈಗ ನಮ್ಮ ಮಕ್ಕಳಲ್ಲಿ ಭರವಸೆ ಮತ್ತು ಧೈರ್ಯವನ್ನು ತುಂಬುವ ಹಾಗೂ ಅನಿಶ್ಚಿತತೆಗಳನ್ನು ಎದುರಿಸಲು ಅವರಿಗೆ ಸಹಾಯ ಮಾಡಲು ಮತ್ತು ಕಠಿಣ ಸಮಯದಲ್ಲೂ ಹೇಗೆ ಮುಂದುವರಿಯುವುದು ಎಂದು ಅವರಿಗೆ ಕಲಿಸುವ ಸಮಯ. ನಮ್ಮ ಕ್ಯಾಂಪಸ್ ಮುಚ್ಚಲ್ಪಟ್ಟಿದ್ದರೂ, DAIS ನಮ್ಮ ವರ್ಚುವಲ್ ಸ್ಕೂಲ್ ಪ್ಲಾಟ್‌ಫಾರ್ಮ್ ಮೂಲಕ ನೇರ ಬೋಧನೆಯನ್ನು ಪ್ರಾರಂಭಿಸುತ್ತಿದೆ ಇದರಿಂದ ನಮ್ಮ ಮಕ್ಕಳು ತಮ್ಮ ಮನೆಗಳ ಸುರಕ್ಷತೆಯಲ್ಲಿ DAIS ಅನುಭವ ಮತ್ತು ಶಿಕ್ಷಣವನ್ನು ಪಡೆಯುತ್ತಾರೆ'' ಎಂದು ಅವರು ಹೇಳಿದರು.

ಆನ್‌ಲೈನ್‌ನಲ್ಲಿಯೇ ಪೋಷಕ-ಶಿಕ್ಷಕರ ಸಭೆ

ಆನ್‌ಲೈನ್‌ನಲ್ಲಿಯೇ ಪೋಷಕ-ಶಿಕ್ಷಕರ ಸಭೆ

"ನನ್ನ ಪ್ರೀತಿಯ ಮಕ್ಕಳೇ, ನಾವೆಲ್ಲರೂ ಶಾಲೆಯಲ್ಲಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ, ಆದರೆ ನಿಮ್ಮ ಸುರಕ್ಷತೆ, ನಿಮ್ಮ ಆರೋಗ್ಯ ಮತ್ತು ನಿಮ್ಮ ಯೋಗಕ್ಷೇಮಕ್ಕಿಂತ ಬೇರೆ ಯಾವುದೂ ನಮಗೆ ಮುಖ್ಯವಲ್ಲ. ನಿಮ್ಮ ಶಿಕ್ಷಕರು, ನಿಮ್ಮ ಸ್ನೇಹಿತರು ಮತ್ತು ಇಡೀ DAIS ಕುಟುಂಬ ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ ಎಂಬುದನ್ನು ನೆನಪಿಡಿ. ನಾವು ಈ ಹೋರಾಟವನ್ನು ಗೆಲ್ಲುತ್ತೇವೆ, ಮತ್ತು ಒಳ್ಳೆಯ ಸಮಯಗಳು ಮತ್ತೆ ಬರುತ್ತವೆ '' ಎಂದು ಅವರು ಉತ್ಸಾಹಭರಿತ, ಹೃತ್ಪೂರ್ವಕ ಸಂದೇಶದ ಮೂಲಕ ಮಕ್ಕಳಿಗೆ ಭರವಸೆ ನೀಡಿದರು.

ತರಗತಿಗಳನ್ನು ನಡೆಸುವುದರ ಜೊತೆಗೆ ಆನ್‌ಲೈನ್‌ನಲ್ಲಿಯೇ ಪೋಷಕ-ಶಿಕ್ಷಕರ ಸಭೆಗಳನ್ನು (ಪಿಟಿಎಂ) ಶಾಲೆಯು ನಿಗದಿಪಡಿಸಿದೆ. ಅಲ್ಲವೇ ಕೋವಿಡ್ ಸಂಬಂಧಿತ ಸಮಸ್ಯೆಗಳ ವಿರುದ್ಧ ಮುನ್ನೆಚ್ಚರಿಕೆಯಾಗಿ ಬಾಕಿ ಉಳಿದಿರುವ ಅಥವಾ ಮೊದಲೇ ಮುಂದೂಡಲ್ಪಟ್ಟ ಆ ತರಗತಿಗಳನ್ನು ಮತ್ತೆ ನಡೆಸಲಿದೆ.

English summary
Dhirubhai Ambani International School (DAIS) has started live online classes. A full-day schedule for students of Standard 10th and 12th, with teachers and students attending classes over video-conferencing facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X