ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾದ ಅತಿ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಕೊರೊನಾದಿಂದ ವ್ಯಕ್ತಿ ಸಾವು!

|
Google Oneindia Kannada News

ಮುಂಬೈ, ಏಪ್ರಿಲ್ 2: ಏಷ್ಯಾದ ಅತಿ ದೊಡ್ಡ ಕೊಳಗೇರಿ ಪ್ರದೇಶವಾದ ಮುಂಬೈನ ಧಾರಾವಿಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಕೋವಿಡ್-19 ನಿಂದ ಬಳಲುತ್ತಿದ್ದ 56 ವರ್ಷದ ಧಾರಾವಿ ನಿವಾಸಿ ಬುಧವಾರ ಸಾವನ್ನಪ್ಪಿದ್ದಾರೆ.

Recommended Video

ಡಿ ಬಾಸ್ ಮಾನವೀಯತೆಯನ್ನು ಮನಸಾರೆ ಹೊಗಳಿದ ಪ್ರತಾಪ್ ಸಿಂಹ | Oneindia Kannada

ಸ್ಲಂ ನಿವಾಸಿ ಯಾವುದೇ ಪ್ರಯಾಣದ ಹಿನ್ನಲೆ ಹೊಂದಿರಲಿಲ್ಲ. ಆದರೂ ಆತನಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು ಹೇಗೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇದೀಗ ಮೃತ ಸೋಂಕಿತ ವಾಸವಿದ್ದ ಕಟ್ಟಡವನ್ನು ಮೊಹರು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಮುಂಬೈ ಸ್ಲಂಗೂ ಕಾಲಿಟ್ಟ ಕೊರೊನಾ: ಮಾರಿ ಕಟ್ಟಿಹಾಕೋದಿನ್ನು ಅಸಾಧ್ಯನಾ?ಮುಂಬೈ ಸ್ಲಂಗೂ ಕಾಲಿಟ್ಟ ಕೊರೊನಾ: ಮಾರಿ ಕಟ್ಟಿಹಾಕೋದಿನ್ನು ಅಸಾಧ್ಯನಾ?

ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕಿತ ಮೃತಪಟ್ಟ ಮೇಲೆ, ಆತ ವಾಸವಿದ್ದ ಕಟ್ಟಡದಲ್ಲಿರುವವರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿದೆ.

Dharavi Resident Who Tested Positive For Coronavirus Dies

ಸೋಂಕಿತನ ಸಾವಿನ ಸುದ್ದಿ ತಿಳಿದ ಮೇಲೆ ಆ ಪ್ರದೇಶದಲ್ಲಿ ಸೇರಿದ್ದ ಜನಸಮೂಹವನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ಕೆಲವರು ಕಲ್ಲುತೂರಾಟ ನಡೆಸಿದರು. ಕಲ್ಲುತೂರಾಟ ನಡೆಸಿದವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಈವರೆಗೂ 335 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 39 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 14 ಮಂದಿ ಮೃತಪಟ್ಟಿದ್ದಾರೆ.

English summary
Dharavi Resident who tested positive for Coronavirus dies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X