ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ ಶಿರಡಿ ಸಾಯಿ ಬಾಬಾ ದೇವಸ್ಥಾನದ ಹುಂಡಿಗೆ 16 ಕೋಟಿ

|
Google Oneindia Kannada News

ಮುಂಬೈ, ಜನವರಿ.03: ಹೊಸ ವರ್ಷದ ದಿನವೇ ಶಿರಡಿಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಒಂದೇ ದಿನ ಕೋಟಿ ಕೋಟಿ ರುಪಾಯಿ ದಕ್ಷಿಣೆ ದೇವರ ಹುಂಡಿಗೆ ಬಿದ್ದಿದೆ. ಸಾಯಿ ಬಾಬಾ ಮಂದಿರದಲ್ಲಿ ಸೇರಿದ ಭಕ್ತರು ನೀಡಿದ ಕಾಣಿಗೆಯೇ ಇದೀಗ ಸಾಕಷ್ಟು ಸುದ್ದಿಯಾಗಿದೆ.

ಮಹಾರಾಷ್ಟ್ರದ ಶಿರಡಿಯಲ್ಲಿ ಹೊಸ ವರ್ಷದ ದಿನದಂದು ದೇವರ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಒಂದೇ ದಿನ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ 8 ಲಕ್ಷ ಮಂದಿ ಭಕ್ತರು ತೆರಳಿದ್ದರು ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ತೆಂಗಿನ ಕಾಯಿ ಗಣೇಶತೆಂಗಿನ ಕಾಯಿ ಗಣೇಶ" ಚತುರ್ಥಿ ದಿನದಿಂದ ಭಕ್ತರಿಗೆ ದರ್ಶನ

ಇನ್ನು, ಜನವರಿ.01ರಂದು ದೇವಸ್ಥಾನದ ಹುಂಡಿಗೆ ಬಿದ್ದ ಕಾಣಿಕೆ ಸೇರಿದಂತೆ ಒಟ್ಟಾರೆ 16 ಕೋಟಿ 93 ಲಕ್ಷ ರುಪಾಯಿ ಸಂಗ್ರಹವಾಗಿದೆ ಎಂದು ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ಮಾಹಿತಿ ನೀಡಿದೆ. ಒಂದೇ ದಿನ ಇಷ್ಟೊಂದು ಮೊತ್ತ ಸಂಗ್ರಹವಾಗಿದ್ದು, ಹೊಸ ದಾಖಲೆಯಾಗಿದೆ.

Devotees Donate 16 Crore For Shiradi Sai Baba Temple.

ಹಣದ ಜೊತೆಗೆ ಚಿನ್ನ-ಬೆಳ್ಳಿಯ ಕಾಣಿಕೆ:

ಶಿರಡಿ ಸಾಯಿ ಬಾಬಾ ಮಂದಿರದ ಕಾಣಿಕೆ ಹುಂಡಿಯಲ್ಲಿ ಕಳೆದ ಜನವರಿ.01ರಂದು ಒಂದೇ ದಿನ 9 ಕೋಟಿ 54 ಲಕ್ಷ ರೂಪಾಯಿ ಕಾಣಿಕೆ ಬಂದಿದೆ. 42 ಲಕ್ಷ ರುಪಾಯಿ ಮೌಲ್ಯದ 1.25 ಕೆಜಿಯಷ್ಟು ಚಿನ್ನ ಹಾಗೂ 5 ಲಕ್ಷ ರುಪಾಯಿ ಮೌಲ್ಯದ 17 ಕೆಜಿ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

English summary
Devotees Donate 16 Crore For Shiradi Sai Baba Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X