ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡುವು ಮುಗಿದರೂ ಸರಿಯೇ, ಮಹಾರಾಷ್ಟ್ರಕ್ಕೆ ದೇವೇಂದ್ರ ಫಡ್ನವಿಸ್ ಸಿಎಂ!

|
Google Oneindia Kannada News

ಮುಬೈ, ನವೆಂಬರ್ 07: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ನೀಡಿದ ಗಡುವು ನಾಳೆಯೇ ಮುಕಾಯವಾಗಲಿದ್ದು, ಸರ್ಕಾರ ರಚನೆಯಾಗದೆ ಇದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುತ್ತದೆ ಎನ್ನಲಾಗಿತ್ತು.

ಆದರೆ ಕೆಲವು ಮೂಲಗಳ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ಕೋಡಲೇ ಹೇರದೆ, ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರೇ ಮುಂದುವರಿಯಲಿದ್ದಾರೆ. ಆದರೆ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವಂತಿಲ್ಲ!

ದೇವೇಂದ್ರ ಫಡ್ನವೀಸ್ ಅಕ್ಷರಶಃ 'ಏಕಾಂಗಿ' ಆಗುತ್ತಿರುವ ಹಿಂದೆ ಉದ್ದೇಶಪೂರ್ವಕ ನಡೆ?ದೇವೇಂದ್ರ ಫಡ್ನವೀಸ್ ಅಕ್ಷರಶಃ 'ಏಕಾಂಗಿ' ಆಗುತ್ತಿರುವ ಹಿಂದೆ ಉದ್ದೇಶಪೂರ್ವಕ ನಡೆ?

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕುರಿತು ಬಿಜೆಪಿ-ಶಿವಸೇನೆ ನಡುವೆ ಒಮ್ಮತ ಏರ್ಪಡದ ಕಾರಣ ಗುರುವಾರ ಬಿಜೆಪಿ ನಾಯಕರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕಶೋರಿ ಅವರನ್ನು ಭೇಟಿಯಾಗಿದ್ದರು. ಕಶೋರಿ ಅವರು ಅಡ್ವೋಕೇಟ್ ಜನರಲ್ ರಿಂದ ಕಾನೂನು ಸಲಹೆ ಪಡೆದಿದ್ದು, ಕಾನೂನಾತ್ಮಕ ಸಾಧ್ಯತೆಗಳ ಕುರಿತು ಚರ್ಚೆ ನಡೆಯುತ್ತಿರುವ ಕಾರಣ ಸರ್ಕಾರ ರಚನೆಗೆ ವಿಳಂಬವಅಗುತ್ತಿದೆ. ಅದ್ದರಿಂದ ರಾಷ್ಟ್ರಪತಿ ಆಳ್ವಿಕೆಯನ್ನು ಕೂಡಲೇ ಜಾರಿಗೆ ತರುವ ಅಗತ್ಯವಿಲ್ಲ. ಅಲ್ಲಿಯವರೆಗೆ ದೇವೇಂದ್ರ ಫಡ್ನವಿಸ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Devendra Fadnavis Will remain In Office

ಹೊಟೆಲ್ ನತ್ತ ಶಿವಸೇನೆ ಶಾಸಕರು, 'ಮಹಾ' ರಾಜಕೀಯದಲ್ಲಿ ಭಾರೀ ತಿರುವು

ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿದೆ.

English summary
Maharashtra Assembly Elections 2019: Devendra Fadnavis Will remain In Office
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X