ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕು ಕಟ್ಟಿಕೊಳ್ಳಲು ಮಹಾ ಮುಖ್ಯಮಂತ್ರಿ ಬಂಪರ್ ಗಿಫ್ಟ್!

|
Google Oneindia Kannada News

ಮುಂಬೈ, ನವೆಂಬರ್ 25: ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಉಳಿಯುತ್ತೋ ಇಲ್ಲವೋ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಶ್ವಾಸಮತ ಸಾಬೀತು ಪಡಿಸುತ್ತಾರೋ ಇಲ್ಲವೋ. ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಏನು ಬರುತ್ತೋ ಏನೋ. ಇಷ್ಟೆಲ್ಲ ಗೊಂದಲಗಳ ಮಧ್ಯೆ ನೂತನ ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಕೆಲಸ ಶುರು ಮಾಡಿದ್ದಾರೆ.

ನವೆಂಬರ್.24ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ಇದೀಗ ಫುಲ್ ಆಕ್ಟಿವ್ ಆಗಿದ್ದಾರೆ. ಮುಂಬೈನಲ್ಲಿ ಸಾಲು ಸಾಲು ಸಭೆಗಳನ್ನು ನಡೆಸುತ್ತಿರುವ ಸಿಎಂ, ಸಂಕಷ್ಟದಲ್ಲಿರುವ ರೈತರಿಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೊಂದು ಬೆಳವಣಿಗೆ: ರಾಜ್ಯಪಾಲರಿಗೆ ಸಂಕಟಮಹಾರಾಷ್ಟ್ರದಲ್ಲಿ ಮತ್ತೊಂದು ಬೆಳವಣಿಗೆ: ರಾಜ್ಯಪಾಲರಿಗೆ ಸಂಕಟ

ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಗೆ ರೈತರು ಬೆಳೆದ ವರ್ಷದ ಬೆಳೆ ಕೊಚ್ಚಿ ಹೋಗಿದೆ. ಅದೆಷ್ಟೋ ಲಕ್ಷ ಲಕ್ಷ ಜನರ ಬದುಕು ಬೀದಿಗೆ ಬಂದು ನಿಂತಿದೆ. ಇದರ ಮಧ್ಯೆ ನಡೆದ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಇಷ್ಟುದಿನ ಸರ್ಕಾರವೇ ಇರಲಿಲ್ಲ. ಕಷ್ಟ ಕಷ್ಟ ಎಂದು ಜನರು ಅಂಗಲಾಚುತ್ತಿದ್ದರೂ ಜನರ ಕಷ್ಟ ಕೇಳಲು ಒಬ್ಬರೇ ಒಬ್ಬರು ತಯಾರು ಇರಲಿಲ್ಲ.

ರೈತರಿಗೆ ಬಂಪರ್ ಕೊಡುಗೆ ಕೊಟ್ಟ ಮಹಾ ಸಿಎಂ

ರೈತರಿಗೆ ಬಂಪರ್ ಕೊಡುಗೆ ಕೊಟ್ಟ ಮಹಾ ಸಿಎಂ

ಅಕಾಲಿಕ ಮಳೆಗೆ ಮಹಾರಾಷ್ಟ್ರದಲ್ಲಿ ಜನರ ಬದುಕು ತತ್ತರಿಸಿದ್ದು, ಕಷ್ಟಪಟ್ಟು ಬೆಳೆದ ಬೆಳೆಯೆಲ್ಲ ಮಳೆಗೆ ಕೊಚ್ಚಿ ಹೋಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 5 ಸಾವಿರದ 387 ಕೋಟಿ ರೂಪಾಯಿ ಬೆಳೆ ಪರಿಹಾರವನ್ನು ಘೋಷಿಸಿದ್ದಾರೆ. ಮಳೆಯಿಂದ ಹಾಳಾದ ಬೆಳೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದು, ಆದಷ್ಟು ಬೇಗ ರೈತರಿಗೆ ಪರಿಹಾರ ಧನ ನೀಡಲು ಸಿಎಂ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪರಿಹಾರ ನಿಧಿ ಚೆಕ್ ಗೆ ಮುಖ್ಯಮಂತ್ರಿಯ ಮೊದಲ ಸಹಿ

ಪರಿಹಾರ ನಿಧಿ ಚೆಕ್ ಗೆ ಮುಖ್ಯಮಂತ್ರಿಯ ಮೊದಲ ಸಹಿ

ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ದೇವೇಂದ್ರ ಫಡ್ನವೀಸ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ವಾಪಸ್ ಆಗುತ್ತಿದ್ದಂತೆ ಅವರು ಮುಖ್ಯಮಂತ್ರಿ ಪರಿಹಾರ ನಿಧಿ ಚೆಕ್ ಗೆ ಮೊದಲು ಸಹಿ ಹಾಕಿದರು.

ಫಡ್ನವಿಸ್ -ಪವಾರ್ ನಡುವೆ ತಡರಾತ್ರಿ ಚರ್ಚೆ ನಡೆದಿದ್ದೇಕೆ?ಫಡ್ನವಿಸ್ -ಪವಾರ್ ನಡುವೆ ತಡರಾತ್ರಿ ಚರ್ಚೆ ನಡೆದಿದ್ದೇಕೆ?

ಪರಿಹಾರದ ಚೆಕ್ ನೀಡಿದ ಮುಖ್ಯಮಂತ್ರಿ

ಪರಿಹಾರದ ಚೆಕ್ ನೀಡಿದ ಮುಖ್ಯಮಂತ್ರಿ

ಮಳೆಯಿಂದ ಬದುಕನ್ನೇ ಕಳೆದುಕೊಂಡಿದ್ದ ಸಂತ್ರಸ್ತರಿಗೆ ನೆರವು ನೀಡಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂದಾದರು. ಮಂತ್ರಾಲಯದಿಂದ ವಾಪಸ್ ಆಗುತ್ತಿದ್ದಂತೆ ಪರಿಹಾರದ ಚೆಕ್ ಗೆ ಸಹಿ ಹಾಕಿದ ಸಿಎಂ, ಅದನ್ನು ಸಂತ್ರಸ್ತ ಮಹಿಳೆಗೆ ವಿತರಿಸಿದರು. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ನಲ್ಲಿ ಬರೆಯಲಾಗಿದೆ.

ಚುನಾವಣೆಗೂ ಮೊದಲೇ 10 ಸಾವಿರ ಕೋಟಿ

ಚುನಾವಣೆಗೂ ಮೊದಲೇ 10 ಸಾವಿರ ಕೋಟಿ

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೂ ಮೊದಲೇ ಬಂಪರ್ ಕೊಡುಗೆ ನೀಡಿದ್ದರು. ಕಳೆದ ನವೆಂಬರ್ ನಲ್ಲೇ ಮಳೆಹಾನಿ ಸಂತ್ರಸ್ತರ ನೆರವಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 10 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿದ್ದರು.

ಮಂಗಳವಾರ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಭವಿಷ್ಯ ನುಡಿಯಲಿರುವ ಸುಪ್ರೀಂಮಂಗಳವಾರ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಭವಿಷ್ಯ ನುಡಿಯಲಿರುವ ಸುಪ್ರೀಂ

English summary
Devendra Fadnavis Got Down To Work. Sanctioned Rs 5,380 Crore As Relief For Farmers Affected By Unseasonal Rains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X