ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಜಾನೆ 'ಮಹಾ' ಕ್ರಾಂತಿ: ಟ್ರೆಂಡಿಂಗ್ ಆಯ್ತು ಫಡ್ನವಿಸ್ ಟ್ವೀಟ್

|
Google Oneindia Kannada News

Recommended Video

ಟ್ರೋಲಿಗರಿಗೆ ಅಹಾರವಾದ ದೇವೇಂದ್ರ ಫಡ್ನವಿಸ್ ಟ್ವೀಟ್ | Oneindia Kannada

ರಾಜಕೀಯದಲ್ಲಿ ಶಾಶ್ವತ ಶತ್ರುಗಳಿಲ್ಲ, ಮಿತ್ರರೂ ಇಲ್ಲ ಎಂಬ ಮಾತತು ಎಂದಿನಿಂದಲೋ ಜನಜನಿತ. ಚುನಾವಣೆಗೆ ಮುಂಚೆ ವಾಚಾಮಗೋಚರ ಬೈದುಕೊಂಡವರೇ ಚುನಾವಣೆಯ ನಂತರ ಕುಚಿಕು ಸ್ನೇಹಿತರಾಗಬಹುದು! ಇದೀಗ ಮಹಾರಾಷ್ಟ್ರದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆ ಅಂಥದೊಂದು ಮಾತಿಗೆ ಪುಷ್ಠಿ ನೀಡಿದೆ.

ಇದೀಗ ಬಿಜೆಪಿ ಎನ್ ಸಿಪಿಯ ಅಜಿತ್ ಪವಾರ್ ಅವರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲು ಮುಂದಾಗಿದ್ದು, ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಈ ಕ್ಷಿಪ್ರ ಬೆಳವಣಿಗೆಯ ಹೊತ್ತಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು 2014 ರ ಸೆಪ್ಟೆಂಬರ್ 26 ರಂದು ಮಾಡಿದ್ದ ಟ್ವೀಟ್ ಇದೀಗ ಟ್ರೆಂಡಿಂಗ್ ಆಗಿದೆ.

LIVE Updates: ಬೆನ್ನಿಗೆ ಚೂರಿ ಇರಿದ ಬಿಜೆಪಿ-ಅಜಿತ್ ಪವಾರ್: ಶಿವಸೇನಾLIVE Updates: ಬೆನ್ನಿಗೆ ಚೂರಿ ಇರಿದ ಬಿಜೆಪಿ-ಅಜಿತ್ ಪವಾರ್: ಶಿವಸೇನಾ

"ಬಿಜೆಪಿ ಎಂದಿಗೂ, ಎಂದೆಂದಿಗೂ ಎನ್ ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ವದಂತಿಗಳೆಲ್ಲ ಸುಳ್ಳು. ನಾವು ವಿಧಾನಸಭೆಯಲ್ಲಿ ಎನ್ ಸಿಪಿಯ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ. ಆದರೆ ಮಿಕ್ಕವರೆಲ್ಲ ಆಗ ಮೌನವಾಗಿದ್ದರು" ಎಂಬ ದೇವೇಂದ್ರ ಫಡ್ನವಿಸ್ ಟ್ವೀಟ್ ಇದೀಗ ಟ್ರೋಲ್ ಹೈಕ್ಳಿಗೆ ಮೃಷ್ಟಾನ್ನ ಭೋಜನ ಬಡಿಸಿದೆ!

ಮಾತು ಮುರಿಯದ ಫಡ್ನವಿಸ್!

ಮಾತು ಮುರಿಯದ ಫಡ್ನವಿಸ್!

ಫಡ್ನವಿಸ್ ಎಂದಿಗೂ ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ. ಅವ್ರು ಮಾತು ಮುರಿಯುವುದಿಲ್ಲ ಎಂಬುದನ್ನು ಕೇಳಿದ್ದೆ. ಬಿಜೆಪಿ ಅಂಥ ಸಿದ್ಧಾಂತಗಳನ್ನು ಎಂದಿಗೂ ಮರೆಯುವುದಿಲ್ಲ. ಅದಕ್ಕೆ ಇಲ್ಲಿದೆ ಸಾಕ್ಷಿ ಎಂದು ಪಿಶು ಎಂಬುವವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೆ ಡಿಸಿಎಂ ಸ್ಥಾನ ಪಡೆದ ಅಜಿತ್ ಪವಾರ್ ವ್ಯಕ್ತಿಚಿತ್ರಮಹಾರಾಷ್ಟ್ರದಲ್ಲಿ ಮತ್ತೆ ಡಿಸಿಎಂ ಸ್ಥಾನ ಪಡೆದ ಅಜಿತ್ ಪವಾರ್ ವ್ಯಕ್ತಿಚಿತ್ರ

ಹಗರಣ ಬಯಲು ಮಾಡಿದ್ದ ಫಡ್ನವಿಸ್

ಹಗರಣ ಬಯಲು ಮಾಡಿದ್ದ ಫಡ್ನವಿಸ್

ಮಹಾರಾಷ್ಟ್ರ ನೀರಾವರಿ ಹಗರಣವನ್ನು ದೇವೇಂದ್ರ ಫಡ್ನವಿಸ್ ಬಯಲು ಮಾಡುವಾಗ ಅಂದಿನ ರಾಜ್ಯ ಜಲ ಸಂಪನ್ಮೂಲ ಇಲಾಖೆಯ ನೇತೃತ್ವ ವಹಿಸಿದ್ದು ಅಜಿತ್ ಪವಾರ್. ಇದೀಗ ಅದೇ ವ್ಯಕ್ತಿಯೊಂದಿಗೆ ಫದ್ನವಿಸ್ ಸರ್ಕಾರ ರಚಿಸಿ, ಡಿಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದು ರಾಫ್ಲ್ ರಿಪಬ್ಲಿಕ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಅವರ ಮಾತಿಗೆ ವಿಧೇಯರಾಗಿದ್ದಾರೆ!

ಅವರ ಮಾತಿಗೆ ವಿಧೇಯರಾಗಿದ್ದಾರೆ!

"ಈ ವ್ಯಕ್ತಿ ನಮ್ಮ ಮಹಾರಾಷ್ಟ್ರ ಮುಖ್ಯಮಂತ್ರಿ. ಅವರು ಎಂದಿಗೂ ತಮ್ಮ ಮಾತಿಗೆ ಬದ್ಧರಾಗಿದ್ದಾರೆ" - ಪ್ರೀತಿ ಶರ್ಮಾ ಮೆನಾನ್

ಮಹಾರಾಷ್ಟ್ರ ಬೆಳವಣಿಗೆ: ಅಜಿತ್ ಪವಾರ್ ನಡೆಗೆ ಶರದ್ ಪವಾರ್ ಏನಂದ್ರು?ಮಹಾರಾಷ್ಟ್ರ ಬೆಳವಣಿಗೆ: ಅಜಿತ್ ಪವಾರ್ ನಡೆಗೆ ಶರದ್ ಪವಾರ್ ಏನಂದ್ರು?

ಅನಿರೀಕ್ಷಿತ ಬೆಳವಣಿಗೆ

ಅನಿರೀಕ್ಷಿತ ಬೆಳವಣಿಗೆ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕುರಿತು ಸಾಕಷ್ಟು ಮೈತ್ರಿ ಕಾಂಬಿನೇಷನ್ ಗಳ ವದಂತಿ ಇತ್ತಾದರೂ ಶುಕ್ರವಾರ ಸಂಜೆಯ ಹೊತ್ತಿಗೆ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬುದು ಬಹುತೇಕ ಖಚಿತವಾಗಿತ್ತು. ಆದರೆ ಬೆಳಿಗ್ಗೆ ಇದ್ದಕ್ಕಿದ್ದಂತೆ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಎನ್ ಸಿಪಿ ಮುಖಂಡ ಅಜಿತ್ ಪವಾರ ಬೆಂಬಲದ ಮೇರೆಗೆ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದರು.

English summary
Maharashtra Political Development: Devendra Fadnavis's Old Tweet on NCP Trending On Twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X