ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಡ್ನವೀಸ್ ವಿಶಾಲ ಹೃದಯವಂತಿಕೆ ತೋರಿದ್ದಾರೆ ಎಂದ ಶಿಂಧೆ

|
Google Oneindia Kannada News

ಮುಂಬೈ, ಜೂ.30: ಬಂಡಾಯ ಶಾಸಕರ ಬಿಕ್ಕಟ್ಟಿನ ಅವಧಿ ಮುಗಿದು ಏಕನಾಥ್‌ ಶಿಂಧೆ ಮುಖ್ಯಮಂತ್ರಿ ಎಂದು ಘೋಷಿತವಾಗುತ್ತಿದ್ದಂತೆ ಶಿಂಧೆ ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ ಅವರು ವಿಶಾಲ ಹೃದಯವಂತಿಕೆ ತೋರಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.

ಶಿವಸೇನೆಯ ಬಂಡಾಯ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಎಂದು ಘೋಷಿತವಾಗಿರುವ ಏಕನಾಥ್ ಶಿಂಧೆ ಗುರುವಾರ ಬಿಜೆಪಿಯ ದೇವೇಂದ್ರ ಫಡ್ನವೀಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಅವರು ತಮ್ಮ ಸಂಖ್ಯೆ ಬಲಗಳ ಪ್ರಕಾರ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ದೊಡ್ಡ ಹೃದಯವಂತಿಕೆ ತೋರಿಸಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರ ಸಿಎಂ ಆಗಲ್ಲ ದೇವೇಂದ್ರ ಫಡ್ನವೀಸ್; ಲೆಕ್ಕಾಚಾರವೆಲ್ಲ ಉಲ್ಟಾ-ಪಲ್ಟಾ! ಮಹಾರಾಷ್ಟ್ರ ಸಿಎಂ ಆಗಲ್ಲ ದೇವೇಂದ್ರ ಫಡ್ನವೀಸ್; ಲೆಕ್ಕಾಚಾರವೆಲ್ಲ ಉಲ್ಟಾ-ಪಲ್ಟಾ!

ಬಾಳಾ ಠಾಕ್ರೆಯವರ ಶಿವಸೈನಿಕರನ್ನು ಬೆಂಬಲಿಸುವುದಾಗಿ ದೇವೇಂದ್ರ ಫಡ್ನವೀಸ್ ನನಗೆ ಹೇಳಿದ್ದರು. ಈ ವೇಳೆ ಅವರು ತಮ್ಮ ದೊಡ್ಡ ಹೃದಯವಂತಿಕೆಯನ್ನು ತೋರಿಸಿದ್ದಾರೆ. 120 ಶಾಸಕರನ್ನು ಹೊಂದಿರುವ ಯಾರೋ ಇದನ್ನು ಮಾಡುವುದಿಲ್ಲ. ಯಾರೂ ಕೂಡ ಮುಖ್ಯಸ್ಥರ ಹುದ್ದೆಯನ್ನು ಸಹ ಬಿಡುವುದಿಲ್ಲ. ಅಂತಹದ್ದರಲ್ಲಿ ಇದು ಮುಖ್ಯಮಂತ್ರಿ ಹುದ್ದೆಯಾಗಿದೆ ಎಂದು ಅವರು ಹೇಳಿದರು.

ಇನ್ ಸೈಡ್ ರಿಪೋರ್ಟ್; ಏಕನಾಥ್ ಶಿಂಧೆ ಆಯ್ಕೆ, ಬಿಜೆಪಿ ಚಾಣಕ್ಯ ನೀತಿ! ಇನ್ ಸೈಡ್ ರಿಪೋರ್ಟ್; ಏಕನಾಥ್ ಶಿಂಧೆ ಆಯ್ಕೆ, ಬಿಜೆಪಿ ಚಾಣಕ್ಯ ನೀತಿ!

ಮೋದಿ, ಶಾ, ಜೆಪಿ ನಡ್ಡಾಗೆ ಧನ್ಯವಾದ

ಮೋದಿ, ಶಾ, ಜೆಪಿ ನಡ್ಡಾಗೆ ಧನ್ಯವಾದ

ದೊಡ್ಡ ಅಭೂತಪೂರ್ವ ಘೋಷಣೆಯ ನಂತರ ಫಡ್ನವಿಸ್ ಅವರ ಪಕ್ಕದಲ್ಲಿ ಕೂತು ಮಾತನಾಡಿದ ಏಕನಾಥ್‌ ಶಿಂಧೆ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ದ್ರೋಹ ಬಗೆಯುವುದಿಲ್ಲ. ಬಾಳಾ ಠಾಕ್ರೆಯವರ ಶಿವಸೈನಿಕರನ್ನುನಂಬಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ಧನ್ಯವಾದ ಅರ್ಪಿಸಿದರು.

ಏಕನಾಥ್‌ ಶಿಂಧೆ ಅಧಿಕಾರದ ಲಾಲಸೆ ಹೊಂದಿಲ್ಲ

ಏಕನಾಥ್‌ ಶಿಂಧೆ ಅಧಿಕಾರದ ಲಾಲಸೆ ಹೊಂದಿಲ್ಲ

ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವದ ಕಲ್ಪನೆ ಮತ್ತು ದಿವಂಗತ ಶಿವಸೇನೆಯ ಹಿರಿಯ ನಾಯಕ ಆನಂದ್ ದಿಘೆ ಅವರ ಬೋಧನೆಗಳನ್ನು ಮುಂದುವರಿಸಲು ಬಂಡಾಯ ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಮತ್ತೊಮ್ಮೆ ಹೇಳಿದರು. ಏಕನಾಥ್‌ ಶಿಂಧೆ ಅವರು ಅಧಿಕಾರ ಅಥವಾ ಸ್ಥಾನದ ಲಾಲಸೆಯನ್ನು ಹೊಂದಿಲ್ಲ. ಅವರೊಂದಿಗಿನ ತಮ್ಮ 50 ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಿದ್ಧಾಂತ ಮತ್ತು ಅಭಿವೃದ್ಧಿಯ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದಾರೆ ಎಂದು ಪುನರುಚ್ಚರಿಸಿದರು. ಇದನ್ನು ಮಹಾ ವಿಕಾಸ್ ಅಘಾಡಿ ಸರ್ಕಾರದ ಭಾಗವಾಗಿರುವ ಇತರ ಪಕ್ಷಗಳು ಕೈಬಿಟ್ಟಿವೆ ಎಂದು ಶಿಂಧೆ ಹೇಳಿದರು.

ನಾನು ಹೊರಗಿನಿಂದ ಬೆಂಬಲ ನೀಡುತ್ತೇನೆ

ನಾನು ಹೊರಗಿನಿಂದ ಬೆಂಬಲ ನೀಡುತ್ತೇನೆ

ಬಂಡಾಯ ಶಾಸಕರು ಶಿವಸೇನೆಯನ್ನು ಸರಿಪಡಿಸಬೇಕು ಮತ್ತು ತಮ್ಮ ಮಿತ್ರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಪದೇ ಪದೇ ವಿನಂತಿಸಿದರು. ಆದರೆ ಕೇಳಲಿಲ್ಲ ಎಂದು ಶಿಂಧೆ ಹೇಳಿದರು. ಪ್ರಮಾಣವಚನ ಸ್ವೀಕಾರಕ್ಕೆ ಕೆಲವೇ ಗಂಟೆಗಳ ಮೊದಲು ದೇವೇಂದ್ರ ಫಡ್ನವೀಸ್ ಅವರು ಅಚ್ಚರಿಯ ಘೋಷಣೆ ಮಾಡಿ ತಾನು ಸರ್ಕಾರದ ಮುಖ್ಯಸ್ಥನಾಗುವುದಿಲ್ಲ ಆದರೆ ಹೊರಗಿನಿಂದ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.

ಏಕನಾಥ್‌ ಶಿಂಧೆ ಸಿಎಂ ಆಗಿ ಪ್ರಮಾಣವಚನ

ಏಕನಾಥ್‌ ಶಿಂಧೆ ಸಿಎಂ ಆಗಿ ಪ್ರಮಾಣವಚನ

ನಾನು ಮುಖ್ಯ ಸ್ಥಾನದಿಂದ ಹೊರಗುಳಿಯುತ್ತೇನೆ ಹಾಗೂ ಅದು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುತ್ತೇನೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದರು. ಏಕನಾಥ್‌ ಶಿಂಧೆ ಸಂಜೆ 7:30 ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಘೋಷಿಸಿದರು. ಬೇರೆ ಯಾವುದೇ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಶಿಂಧೆ ಅವರ ಗುಂಪಿಗೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದೆ. ಶಿವಸೇನಾ ಬಂಡಾಯ ಶಾಸಕರು, ಬಿಜೆಪಿ ಶಾಸಕರು ಮತ್ತು ಕೆಲವು ಸ್ವತಂತ್ರರು ಸಂಪುಟ ವಿಸ್ತರಣೆಯ ಸಮಯದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಫಡ್ನವೀಸ್ ತಿಳಿಸಿದ್ದಾರೆ.

Recommended Video

ಕೊನೇಕ್ಷಣದಲ್ಲಿ ಮಹಾ ಬದಲಾವಣೆ: ಏಕನಾಥ್ ಶಿಂದೆಗೆ CM ಪಟ್ಟ ಬಿಟ್ಕೊಟ್ಟ ದೇವೇಂದ್ರ ಫಡ್ನವಿಸ್ | Oneindia Kannada

English summary
As the rebel legislators crisis ends and Eknath Shinde is declared the chief minister, Shinde has taken a deep interest in BJP's Devendra Fadnavis. My thanks to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X