ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಡೆಲ್ಟಾ ಪ್ಲಸ್" ರೂಪಾಂತರದಿಂದ 3ನೇ ಅಲೆ; ಆರೋಗ್ಯ ಇಲಾಖೆ ಎಚ್ಚರಿಕೆ

|
Google Oneindia Kannada News

ಮುಂಬೈ, ಜೂನ್ 17: ದೇಶದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ "ಡೆಲ್ಟಾ ಪ್ಲಸ್" ತಳಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಬುಧವಾರ ತಜ್ಞರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕುರಿತು ವರದಿ ಪ್ರಸ್ತುತಪಡಿಸಿದ್ದಾರೆ. ಡೆಲ್ಟಾ ಪ್ಲಸ್ ತಳಿಯಿಂದಾಗಿ ಅಂದಾಜು ಎಂಟು ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಶೇ 10ರಷ್ಟು ಮಕ್ಕಳಿಗೆ ಈ ಸೋಂಕು ತಗುಲುವ ಅಪಾಯವಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮುಂದೆ ಓದಿ...

 ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ

ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ

ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೇ ಅಲೆಯ ನಿಯಂತ್ರಣಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯ ನೇಮಿತ ಕಾರ್ಯಪಡೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದರೆ ಒಂದು ತಿಂಗಳು ಅಥವಾ ಎರಡು ತಿಂಗಳ ಅಂತರದಲ್ಲೇ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ವೈದ್ಯರು, ವೈದ್ಯಕೀಯ ವ್ಯವಸ್ಥೆಗಳನ್ನು ಸೂಕ್ತವಾಗಿ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಡೆಲ್ಟಾ ನಂತರ ಭಾರತದಲ್ಲಿ ಮತ್ತೊಂದು ಹೊಸ ರೂಪಾಂತರ ಪತ್ತೆಡೆಲ್ಟಾ ನಂತರ ಭಾರತದಲ್ಲಿ ಮತ್ತೊಂದು ಹೊಸ ರೂಪಾಂತರ ಪತ್ತೆ

 ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ

ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ

ಡೆಲ್ಟಾ ರೂಪಾಂತರದಿಂದ ದೇಶದಲ್ಲಿ ಕೊರೊನಾ ಎರಡನೇ ಅಲೆ ಭೀಕರ ರೂಪ ತಾಳಿತ್ತು. ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಅತ್ಯಧಿಕವಾಗಿತ್ತು. ರಾಜ್ಯದಲ್ಲಿ ಮೊದಲ ಅಲೆಯಲ್ಲಿ 19 ಲಕ್ಷ ಮಂದಿಗೆ ಸೋಂಕು ತಗುಲಿದ್ದರೆ, ಎರಡನೇ ಅಲೆಯಲ್ಲಿ 40 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇದೀಗ ಡೆಲ್ಟಾ ಪ್ಲಸ್ ರೂಪಾಂತರ ಡೆಲ್ಟಾ ರೂಪಾಂತರಕ್ಕಿಂತ ಅಪಾಯಕಾರಿಯಾಗಿದ್ದು, ಎಂಟು ಲಕ್ಷ ಮಂದಿ ಸೋಂಕಿಗೆ ತುತ್ತಾಗಬಹುದು. ಅದರಲ್ಲಿ 10% ಮಕ್ಕಳು ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದಿದ್ದಾರೆ.

 ಡೆಲ್ಟಾ ಪ್ಲಸ್ ರೂಪಾಂತರ; ಆತಂಕ ಬೇಡ ಎಂದಿದ್ದ ತಜ್ಞರು

ಡೆಲ್ಟಾ ಪ್ಲಸ್ ರೂಪಾಂತರ; ಆತಂಕ ಬೇಡ ಎಂದಿದ್ದ ತಜ್ಞರು

ಬುಧವಾರವಷ್ಟೇ ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಮಾಹಿತಿ ನೀಡಿದ್ದ ತಜ್ಞರು, ಆತಂಕ ಪಡುವುದು ಬೇಡ ಎಂದಿದ್ದರು.

'ಡೆಲ್ಟಾ ಪ್ಲಸ್' ರೂಪಾಂತರಿ ಬಗ್ಗೆ ಆತಂಕ ಬೇಡ ಎಂದ ತಜ್ಞರು'ಡೆಲ್ಟಾ ಪ್ಲಸ್' ರೂಪಾಂತರಿ ಬಗ್ಗೆ ಆತಂಕ ಬೇಡ ಎಂದ ತಜ್ಞರು

ದೇಶದಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ಎರಡನೇ ಅಲೆಗೆ ಡೆಲ್ಟಾ ರೂಪಾಂತರಿ ಕಾರಣವಾಗಿತ್ತು. ಇದರ ಬೆನ್ನಲ್ಲೇ ಡೆಲ್ಟಾ ಪ್ಲಸ್ ಅಥವಾ ಎವೈ.1 ಎಂಬ ರೂಪಾಂತರಿ ತಳಿ ಪತ್ತೆಯಾಗಿದೆ. ಆದರೆ ಸದ್ಯದ ಮಟ್ಟಿಗೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದರು.

Recommended Video

Weather forecast ಧಾರಾಕಾರ ಮಳೆ ಜನ ಜೀವನ ಅಸ್ತವ್ಯಸ್ತ !! | Oneindia Kannada

"ಡೆಲ್ಟಾ ಪ್ಲಸ್ ಅಥವಾ AY.1 ರೂಪಾಂತರ ವೇಗವಾಗಿದೆ"

ಡೆಲ್ಟಾ ನಂತರ ಕಂಡುಬಂದಿರುವ ಈ ಸೋಂಕಿನ ರೂಪಾಂತರವನ್ನು ಡೆಲ್ಟಾ ಪ್ಲಸ್ ಅಥವಾ AY.1 ರೂಪಾಂತರ ಎಂದು ಗುರುತಿಸಲಾಗಿದೆ. "ಇದು ಡೆಲ್ಟಾ ರೂಪಾಂತರವೇ ಆದ್ದರಿಂದ ಇದು ಕೂಡ ವೇಗವಾಗಿ ಪಸರಿಸಬಹುದು ಹಾಗೂ ಇದರಲ್ಲಿಯೂ ಮಾನವನ ಜೀವಕೋಶಕ್ಕೆ ಹಾನಿತರುವ ಲಕ್ಷಣಗಳು ಕಂಡುಬಂದಿವೆ," ಎಂದು ದೆಹಲಿ ಸಿಎಸ್‌ಐಆರ್ ಜೆನೋಮಿಕ್ ಇನ್‌ಸ್ಟಿಟ್ಯೂಟ್ ತಜ್ಞ ವಿನೋದ್ ಸ್ಕಾರಿಯಾ ತಿಳಿಸಿದ್ದಾರೆ.

English summary
“Delta plus” variant of the coronavirus could stoke a third wave in Maharashtra warns state health department on thursday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X