ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮಾ ಕೋರೆಗಾಂವ್: ದೆಹಲಿ ವಿವಿ ಪ್ರಾಧ್ಯಾಪಕ ಸೇರಿ 8 ಮಂದಿ ವಿರುದ್ಧ ಚಾರ್ಜ್‌ಶೀಟ್

|
Google Oneindia Kannada News

ಮುಂಬೈ, ಅಕ್ಟೋಬರ್ 09: ಎರಡು ವರ್ಷದ ಹಿಂದೆ ನಡೆದ ಭೀಮಾ-ಕೋರೆಗಾಂವ್‌ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಎಂಟು ಆರೋಪಿಗಳ ವಿರುದ್ಧ ವಿಶೇಷ ಕೋರ್ಟ್ ಗೆ ಇಂದು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಎನ್‌ಐಎ ವಕ್ತಾರೆ ಮತ್ತು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಸೋನಿಯಾ ನಾರಂಗ್ ಅವರು ತಿಳಿಸಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆ ಹಿಂದೆ ಸರ್ಕಾರ ಉರುಳಿಸುವ ಸಂಚು: ಪೊಲೀಸರ ವರದಿಸಿಎಎ ವಿರೋಧಿ ಪ್ರತಿಭಟನೆ ಹಿಂದೆ ಸರ್ಕಾರ ಉರುಳಿಸುವ ಸಂಚು: ಪೊಲೀಸರ ವರದಿ

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ.
2018ರ ಜನವರಿ 1ರಂದು ಭೀಮಾ-ಕೋರೆಗಾಂವ್‌ ಯುದ್ಧದ 200ನೇ ವರ್ಷದ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರದಲ್ಲಿ ಒಬ್ಬ ಮೃತಪಟ್ಟು, 30 ಪೊಲೀಸರು ಗಾಯಗೊಂಡಿದ್ದರು.

Delhi Professor Among 8 Named In Bhima Koregaon Chargesheet

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹನಿ ಬಾಬು, ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ, ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ, ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕ ಆನಂದ್ ತೇಲ್ತುಂಬ್ಡೆ, ಜ್ಯೋತಿ ಜಗ್ತಾಪ್, ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

ಭಾರತದ ಒಳಗೆ ಮತ್ತು ಹೊರಗೆ ನಿಷೇಧಿತವಾಗಿರುವ ಮಾವೋವಾದಿ ಮತ್ತಿತರ ಸಂಘಟನೆಗಳ ಜೊತೆ ಸಂಪರ್ಕ ಇದ್ದು ಮದ್ದುಗುಂಡು, ಶಸ್ತ್ರಾಸ್ತ್ರಗಳ ಸರಬರಾಜು ಮಾಡುತ್ತಿದ್ದ ಮಾವೋವಾದಿಗಳ ವ್ಯವಸ್ಥಿತ ಜಾಲ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ತಮ್ಮ ಮುನ್ನೆಲೆಯ ಸಂಘಟನೆಗಳ ನೆರವಿನಿಂದ ನಗರ ಕ್ರಾಂತಿ ಮಾಡಲು ಮಾವೋವಾದಿಗಳು ಅಳವಡಿಸಿಕೊಂಡಿರುವ ರಣತಂತ್ರವೂ ಬೆಳಕಿಗೆ ಬಂದಿದೆ. ಇದರ ಜೊತೆಗೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಾವೋವಾದಿ ಚಟುವಟಿಕೆಗಳನ್ನ ನಡೆಸಲು ಮಾವೋವಾದಿ ಕಾರ್ಯಕರ್ತರ ಪಡೆ ಹಾಗೂ ಬೆಂಬಲಿಗರ ಮಧ್ಯೆ ಇರುವ ಹಣಕಾಸು ವ್ಯವಸ್ಥೆ ಕೂಡ ಅನಾವರಣಗೊಂಡಿದೆ" ಎಂದು ತನ್ನ ಚಾರ್ಜ್​ಶೀಟ್​ನಲ್ಲಿ ಎನ್​ಐಎ ಆರೋಪಿಸಿದೆ.

English summary
Eight people including prominent activists Anand Teltumbde, Gautam Navlakha and Delhi University associate professor Hany Babu were named by the National Investigation Agency (NIA) on Friday in a chargesheet into the 2018 violence in Maharashtra's Koregaon Bhima.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X