ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನನಷ್ಟ ಮೊಕದ್ದಮೆ: ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನವಾಬ್

|
Google Oneindia Kannada News

ಮುಂಬೈ ನವೆಂಬರ್ 17: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ತಂದೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳೊಂದಿಗೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ಕಚ್ರುಜಿ ವಾಂಖೆಡೆ(Dhyandev Kachruji Wankhede) ಅವರು ತಮ್ಮ ಕುಟುಂಬಕ್ಕೆ ಮಾನಹಾನಿ ಮಾಡಿದ ಆರೋಪದ ಮೇಲೆ ನವಾಬ್ ಮಲಿಕ್ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಮೀರ್ ವಾಂಖೆಡೆ ಅವರು ಸರ್ಕಾರಿ ನೌಕರಿ ಪಡೆಯಲು ಜಾತಿ ಪ್ರಮಾಣಪತ್ರವನ್ನು ನಕಲಿ ಮಾಡಿದ್ದಾರೆ ಎಂದು ನವಾಬ್ ಮಲಿಕ್ ಆರೋಪ ಸುಳ್ಳು ಎಂದು ಸಮೀರ್ ತಂದೆ ಕೋರ್ಟ್ ಮೆಟ್ಟಿಲೇರಿದ್ದರು.

ಕಳೆದ ವಾರ ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠದ ಮುಂದೆ ಮಾನನಷ್ಟ ಮೊಕದ್ದಮೆಯನ್ನು ಸುದೀರ್ಘವಾಗಿ ವಾದಿಸಲಾಯಿತು. ನವೆಂಬರ್ 12 ರ ವಿಚಾರಣೆಯ ನಂತರ ಸಮೀರ್ ವಾಂಖೆಡೆ ನವಾಬ್ ಮಲಿಕ್ ವಿರುದ್ಧ ತಡೆಯಾಜ್ಞೆ ಕೋರಿದ ಬಗ್ಗೆ ಪೀಠವು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಆದೇಶವನ್ನು ಈಗಾಗಲೇ ಕಾಯ್ದಿರಿಸಿರುವುದರಿಂದ ನವಾಬ್ ಮಲಿಕ್ ಪರ ವಕೀಲರು ತಾಂತ್ರಿಕವಾಗಿ ನ್ಯಾಯಾಧೀಶರಿಂದ ವಿಶೇಷ ಅನುಮತಿ ಪಡೆಯದೆ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಸಾಧ್ಯವಾಗುವುದಿಲ್ಲ.

Defamation case: Nawab applied to the Bombay High Court

ಈ ಬಗ್ಗೆ ನವಾಬ್ ಮಲಿಕ್ ಅವರ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಗುರುವಾರ ನ್ಯಾಯಮೂರ್ತಿ ಜಾಮ್ದಾರ್ ಅವರ ವಿಚಾರಣೆ ನಡೆಯಲಿದೆ. ಗುರುವಾರ ಮಧ್ಯಾಹ್ನ 2.15 ಕ್ಕೆ ನ್ಯಾಯಮೂರ್ತಿ ಜಾಮ್ದಾರ್ ಅವರ ಕೊಠಡಿಯಲ್ಲಿ ಹಾಜರಾಗಬೇಕು ಎಂದು ಮಲಿಕ್ ಸಮೀರ್ ವಾಂಖೆಡೆ ಅವರ ವಕೀಲರಿಗೆ ತಿಳಿಸಿದ್ದಾರೆ. ಮೂರು ಗಂಟೆಗಳ ಕಾಲ ವಾದಿಸಿ ಸಮೀರ್ ವಾಂಖೆಡೆ ಪರ ವಕೀಲರು ನವಾಬ್ ಮಲಿಕ್ ಯಾವುದೇ ಮಾನಹಾನಿಕರ ವಿಷಯಗಳನ್ನು ಪ್ರಕಟಿಸುವುದನ್ನು ವಿರೋಧಿಸುವ ಸಾಧ್ಯತೆಯಿದೆ.

ಧ್ಯಾನ್‌ದೇವ್ ಅವರು ವಿಡಿಯೋಗಳು, ಸಾಮಾಜಿಕ ಜಾಲತಾಣದಲ್ಲಿ ಬರೆದ ಪೋಸ್ಟ್‌ಗಳನ್ನು ಮಾಡುವ ಮತ್ತು ಅವರ ಕುಟುಂಬ ಸದಸ್ಯರ ಬಗ್ಗೆ ಯಾವುದೇ ರೀತಿಯಲ್ಲಿ ಮಾನಹಾನಿಕರ ವಿಷಯಗಳನ್ನು ಪ್ರಕಟಿಸುವುದನ್ನು ನಿರ್ಬಂಧಿಸುವ ಶಾಶ್ವತ ತಡೆಯಾಜ್ಞೆಯನ್ನು ಬಯಸಿದ್ದಾರೆ. ಜೊತೆಗೆ ವಾಂಖೆಡೆ ಕುಟುಂಬದ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ನವಾಬ್ ಮಲಿಕ್ ಅವರಿಂದ 1.25 ಕೋಟಿ ರೂಪಾಯಿ ಪರಿಹಾರವನ್ನು ಧ್ಯಾನ್‌ದೇವ್ ಕೋರಿದ್ದಾರೆ. ಮುಂಬೈ ಕ್ರೂಸ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ವಿರುದ್ಧದ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳ ಸುಳಿಯಲ್ಲಿ ಸಿಲುಕಿದ್ದಾರೆ.

ಎನ್ ಸಿಪಿ ಸಚಿವ ನವಾಬ್ ಮಲಿಕ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿರುವ ಧ್ಯಾನದೇವ್ ವಾಂಖೆಡೆ, ತಮ್ಮ, ತಮ್ಮ ಕುಟುಂಬ ಸದಸ್ಯರ ವಿರುದ್ಧ ಮತ್ತು ತಮ್ಮ ಜಾತಿ ವಿರುದ್ಧ ಸುಳ್ಳು ಮತ್ತು ನಿಂದನಕಾರಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬೈಯ ಒಶಿವಾರ ವಿಭಾಗೀಯ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಕಳೆದ ವಾರ ದೂರು ನೀಡಿರುವ ಧ್ಯಾನದೇವ್ ವಾಂಖೆಡೆ ಸಚಿವ ನವಾಬ್ ಮಲಿಕ್ ವಿರುದ್ಧ ಎಸ್ ಸಿ/ಎಸ್ ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಎನ್‌ಸಿಪಿ ನಾಯಕ ಮಲಿಕ್ ತನ್ನ ಮತ್ತು ತಮ್ಮ ಕುಟುಂಬ ಸದಸ್ಯರು ವಿರುದ್ಧ, ತಮ್ಮ ಜಾತಿಯ ವಿರುದ್ಧ ವಿವಿಧ ಮಾಧ್ಯಮ ವೇದಿಕೆಗಳಲ್ಲಿ "ಸುಳ್ಳು ಮತ್ತು ಅವಹೇಳನಕಾರಿ" ಟೀಕೆಗಳನ್ನು ಮಾಡಿದ್ದಾರೆ. ನಾವು ಪರಿಶಿಷ್ಟ ಜಾತಿಗೆ ಸೇರಿದ ಮಹಾರ್ ಸಮುದಾಯಕ್ಕೆ ಸೇರಿದವರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಚಿವ ನವಾಬ್ ಮಲಿಕ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 503 (ಅಪರಾಧ ಬೆದರಿಕೆ) ನಡಿ ಎಫ್‌ಐಆರ್ ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Recommended Video

Rohit Sharma 9 ವರ್ಷಗಳ ಮುಂಚೆಯೇ ಈ ಬಗ್ಗೆ ಹೇಳಿದ್ದರು | Oneindia Kannada

ಮಲಿಕ್ ತನ್ನ ವೈಯಕ್ತಿಕ ದ್ವೇಷದ ಕಾರಣದಿಂದ ತನ್ನ ಮಗಳು ಯಾಸ್ಮೀನ್ ಅವರನ್ನು ಆನ್‌ಲೈನ್‌ನಲ್ಲಿ ಹಿಂಬಾಲಿಸುವ ಮಟ್ಟಕ್ಕೆ ಹೋಗಿದ್ದಾರೆ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಆಕೆಯ ವೈಯಕ್ತಿಕ ಫೋಟೋಗಳನ್ನು ಅಕ್ರಮವಾಗಿ ಬಳಸಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಸಚಿವ ನವಾಬ್ ಮಲಿಕ್ ಅವರ ಅಳಿಯನನ್ನು ಈ ವರ್ಷದ ಜನವರಿಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ ಸೆಪ್ಟೆಂಬರ್ ನಲ್ಲಿ ಜಾಮೀನು ನೀಡಲಾಗಿತ್ತು. ಹೀಗಾಗಿ ಮಲಿಕ್ ತನ್ನ ಎಲ್ಲಾ ಅಧಿಕಾರಗಳನ್ನು ಬಳಸಿಕೊಂಡು ತನ್ನ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸುಳ್ಳು, ನಿಂದನಕಾರಿ ಆರೋಪ ಮಾಡುತ್ತಿದ್ದಾರೆ ಎಂದು ಧ್ಯಾನದೇವ್ ವಾಂಖೆಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

English summary
Nawab Malik approaches Bombay HC with additional documents related to Sameer Wankhede.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X