ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಬಿಟ್ ಕಾರ್ಡ್ ವಂಚನೆ: ಉಗ್ರರ ದಾಳಿಯ ಮತ್ತೊಂದು ರೂಪ?

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಉಗ್ರರು ಸೈಬರ್ ವಾರ್ ನಡೆಸುವ ಮೂಲಕ ಭಾರತೀಯ ಬ್ಯಾಂಕ್​ ಗಳಿಗೆ ಆತಂಕ ಮೂಡಿಸುವ ಸಾಧ್ಯತೆಯಿದೆ

By Mahesh
|
Google Oneindia Kannada News

ಮುಂಬೈ, ಅಕ್ಟೋಬರ್ 23: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಉಗ್ರರು ಸೈಬರ್ ವಾರ್ ನಡೆಸುವ ಮೂಲಕ ಭಾರತೀಯ ಬ್ಯಾಂಕ್​ ಗಳಿಗೆ ಆತಂಕ ಮೂಡಿಸುವ ಸಾಧ್ಯತೆಯಿದೆ ಎಂದು ಸಿಇಆರ್​ಟಿ-ಇನ್ ಹಾಗೂ ಮುಂಬೈ ಕ್ರೈಂ ವಿಭಾಗದ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಡ್ ಮಾಹಿತಿ ಕಳವು ಪ್ರಕರಣ ನಡೆಸಿರುವ ಮುಂಬೈ ಪೊಲೀಸರು, ಭಾರಿ ಪ್ರಮಾಣದಲ್ಲಿ ಮಾಲ್​ವೇರ್​ಗಳನ್ನು ಬ್ಯಾಂಕ್ ಜಾಲಕ್ಕೆ ಹರಿಬಿಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

Debit card

ಈ ಸಂಬಂಧ ಎಲ್ಲ ಬ್ಯಾಂಕ್​ಗಳಿಗೂ ಅಕ್ಟೋಬರ್ 7ರಂದೇ ಇಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, ಇದರಿಂದ ಮಹತ್ವದ ಮಾಹಿತಿ ಮತ್ತು ದತ್ತಾಂಶಗಳು ಉಗ್ರರ ಪಾಲಾಗುವ ಅಪಾಯವಿದೆ ಎಂದು ಸಿಇಆರ್​ಟಿ-ಇನ್ ವರದಿಯನ್ನು ಉಲ್ಲೇಖಿಸಿ ಎಚ್ಚರಿಸಿದ್ದಾರೆ.

ಟ್ರೋಜನ್ ವೈರಸ್​ಗಳನ್ನು ಹರಿಬಿಡುವ ಪ್ರಯತ್ನಗಳು ಜೂನ್ ಅಥವಾ ಜುಲೈನಲ್ಲಿ ನಡೆದಿದೆ ಎನ್ನಲಾಗಿದ್ದು, 32 ಲಕ್ಷ ಕಾರ್ಡ್ ಮಾಹಿತಿ ಕಳವು ಆಗಿದೆ ಎಂಬ ವರದಿ ಬಂದಿದೆ. ಆದರೆ, ಈ ಸಂಖ್ಯೆ 65 ಲಕ್ಷಕ್ಕೂ ಅಧಿಕವಾಗಿರಬಹುದು ಎಂದು ಸಿಇಆರ್​ಟಿ-ಇನ್ ಹೇಳಿದೆ. ಪಾಕಿಸ್ತಾನದ ಹ್ಯಾಕರ್​ಗಳು ಭಾರತದ 7 ಸಾವಿರ ವೆಬ್​ಸೈಟ್​ಗಳ ಮೇಲೆ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಏಜೆನ್ಸೀಸ್)

English summary
Mumbai Police (crime branch) cyber cell, ministry of finance and the government’s cybersecurity arm Computer Emergency Response Team-India (CERT-In) are investigating the data breach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X