• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ

|
   ಸಲ್ಮಾನ್ ಖಾನ್ ಗೆ ಮರಣ ದಂಡನೆ ವಿಧಿಸಿದ್ಯಂತೆ ಸೋಪು ಕೋರ್ಟ್..? | Salman Khan

   ಮುಂಬೈ, ಸೆಪ್ಟೆಂಬರ್ 25: ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಲಾಗಿದೆ. ಸ್ಟೂಡೆಂಟ್ ಆರ್ಗನೈಸೇಷನ್ ಆಫ್ ಪಂಜಾಬ್ ಯೂನಿವರ್ಸಿಟಿಯ ಫೇಸ್ ಬುಕ್ ಪುಟದಲ್ಲಿ ಸೆಪ್ಟೆಂಬರ್ ಹದಿನಾರನೇ ತಾರೀಕು ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ವೈರಲ್ ಆದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

   ಸಲ್ಮಾನ್, ಯೋಚನೆ ಮಾಡು. ಭಾರತೀಯ ಕಾನೂನಿನಿಂದ ನೀನು ರಕ್ಷಿಸಿಕೊಳ್ಳಬಹುದು. ಆದರೆ ವಿಷ್ಣೋಯ್ ಸಮಾಜ್ ಮತ್ತು ಸೋಪು ಪಾರ್ಟಿ ನಿನಗೆ ಮರಣದಂಡನೆ ವಿಧಿಸಿದೆ. ಸೋಪು ಕೋರ್ಟ್ ನಲ್ಲಿ ನೀನು ಆರೋಪಿ. ಹೆಣ್ಣುಮಕ್ಕಳನ್ನು ಗೌರವಿಸು; ಪ್ರಾಣಿಗಳನ್ನು ರಕ್ಷಿಸು; ಡ್ರಗ್ಸ್ ಬೇಡ ಹಾಗೂ ಬಡವರಿಗೆ ಸಹಾಯ ಮಾಡು ಎಂದು ಪೋಸ್ಟ್ ನ ಒಕ್ಕಣೆ ಇದೆ.

   ಕೃಷ್ಣಮೃಗ ಹತ್ಯೆ ಪ್ರಕರಣ: ಸಲ್ಮಾನ್ ಖಾನ್ ಗೆ ಮತ್ತೆ ನೆಮ್ಮದಿ ಸುದ್ದಿ

   ಸಲ್ಮಾನ್ ಖಾನ್ ವಿರುದ್ಧದ ಹುಲ್ಲೇಕರ (ಬ್ಲ್ಯಾಕ್ ಬಕ್) ಹತ್ಯೆ ಪ್ರಕರಣದ ವಿಚಾರಣೆಯು ಸೆಪ್ಟೆಂಬರ್ ಇಪ್ಪತ್ತೇಳರಂದು ನಿಗದಿಯಾಗಿದ್ದು, ಅದಕ್ಕೆ ಮುಂಚಿತವಾಗಿ ಈ ರೀತಿ ಪೋಸ್ಟ್ ಹಾಕಲಾಗಿದೆ. ಪೊಲೀಸರು ಬಹಳ ಎಚ್ಚರಿಕೆಯಿಂದ ಇದ್ದಾರೆ. ಈ ಹಿಂದೆ ವಿಚಾರಣೆಗೆ ಬಂದಾಗಲೂ ಸರಿಯಾದ ಭದ್ರತೆ ನೀಡಲಾಗಿದೆ. ಇನ್ನು ಫೇಸ್ ಬುಕ್ ಪೋಸ್ಟ್ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಯಾದವ್ ತಿಳಿಸಿದ್ದಾರೆ.

   ಸಲ್ಮಾನ್ ಖಾನ್ ಗೆ ಹುಲ್ಲೇಕರ ಹತ್ಯೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಯಾಗಿದ್ದು, ಸದ್ಯ ಜಾಮೀನಿನ ಮೇಲೆ ಇದ್ದಾರೆ. ಕಳೆದ ಬಾರಿ ವಿಚಾರಣೆ ವೇಳೆ ಕೋರ್ಟ್, ಸೆಪ್ಟೆಂಬರ್ ಇಪ್ಪತ್ತೇಳನೇ ತಾರೀಕು ಕೋರ್ಟ್ ಮುಂದೆ ಸಲ್ಮಾನ್ ಖಾನ್ ಹಾಜರಾಗದಿದ್ದಲ್ಲಿ ಜಾಮೀನು ರದ್ದು ಆಗಬಹುದು ಎಂದು ಹೇಳಿತ್ತು.

   English summary
   Death threat to Hindi actor Salman Khan on face book post. Police investigating this case.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X