• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಭಯದಿಂದ ದಾವೂದ್ ಮನೆ ಬದಲಾಯಿಸ್ತಾ ಇದ್ದ: ಕಸ್ಕರ್

By ವಿಕಾಸ್ ನಂಜಪ್ಪ
|

ಮುಂಬೈ, ಸೆ. 22: ಭಾರತದಲ್ಲಿ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ದಾವೂದ್ ಇಬ್ರಾಹಿಂಗೆ ಆತಂಕ ಶುರುವಾಗಿದ್ದು ನಿಜ, ಭಯದಿಂದ ಮನೆ ಬದಲಾಯಿಸುತ್ತಾ ಇದ್ದ. ದಾವೂದ್ ಗೆ ನೀಡಿದ್ದ ಭದ್ರತೆಯನ್ನು ದ್ವಿಗುಣಗೊಳಿಸಲಾಯಿತು ಎಂದು ದಾವೂದ್ ತಮ್ಮ ಇಕ್ಬಾಲ್ ಕಸ್ಕರ್ ವಿಚಾರಣೆ ವೇಳೆ ಹೇಳಿದ್ದಾನೆ.

ದಾವೂದ್ ತಮ್ಮ ಇಕ್ಲಾಬ್ ಬಿಚ್ಚಿಟ್ಟ ರಹಸ್ಯಗಳ ವಿವರ

ಇಕ್ಬಾಲ್ ನೀಡಿದ ದಾವೂದ್ ಮನೆ ವಿಳಾಸಗಳು, ದಾವೂದ್ ಬಳಸುತ್ತಿದ್ದ ಅಲಿಯಾಸ್ ಹೆಸರುಗಳ ವಿವರ ಎಲ್ಲವೂ ಸರಿಯಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ವಿಶ್ವಸಂಸ್ಥೆಗೆ ಕಳಿಸಿ ದೃಢಪಡಿಸಿಕೊಂಡ ಮಾಹಿತಿಯನ್ನೇ ಇಕ್ಬಾಲ್ ಹೇಳಿದ್ದಾನೆ.

1993ರ ಮಾರ್ಚ್ 12ರಂದು 260 ಜನರ ಬಲಿಗೆ ಕಾರಣವಾದ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಯಾರನ್ನೂ ನಂಬುವುದಿಲ್ಲ. ಮನೆಯವರು, ಆಪ್ತರ ಜತೆ ಫೋನ್ ಮಾತುಕತೆ ಕೂಡಾ ತೀರಾ ಕಡಿಮೆ. ಆತನ ಕುರಿತು ನಾವು ಪೊಲೀಸರಿಗೆ ಮಾಹಿತಿ ನೀಡುತ್ತೇವೆಂದು ದಾವೂದ್‌ ಫೋನ್‌ನಲ್ಲಿ ಮಾತನಾಡಲ್ಲ ಎಂದು ಕಸ್ಕರ್‌ ಹೇಳಿದ್ದಾನೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡ್ರಗ್ಸ್ ಡೀಲಿಂಗ್ ಗೂ ದಾವೂದ್ ಕೈ ಹಾಕಿದ್ದಾನೆ. ಪಶ್ಚಿಮ ಮತ್ತು ಪೂರ್ವ ಆಫ್ರಿಕಾದ ರಾಷ್ಟ್ರಗಳಲ್ಲಿ ಡಿ-ಕಂಪನಿ ಹೂಡಿಕೆ ಮಾಡಿದೆ. ಲ್ಯಾಟಿನ್ ಅಮೆರಿಕಾಕ್ಕೂ ಕಂಪನಿ ಕಾಲಿಟ್ಟಿದೆ.

ಎನ್ ಸಿಪಿ ನಾಯಕರಿಗೆ ಭೀತಿ: ಬಿಲ್ದರ್ ಗಳಿಗೆ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುವ ಪ್ರಕರಣದ ಆರೋಪಿಯಾಗಿರುವ ಕಸ್ಕರ್ ವಿಚಾರಣೆ ವೇಳೆ ಎನ್ ಸಿಪಿ ನಾಯಕರ ಹೆಸರುಗಳು ಕೇಳಿ ಬಂದಿವೆ. ಎನ್ ಸಿಪಿ ಮುಖಂಡರು ಮಧ್ಯವರ್ತಿಗಳ ರೀತಿ ವರ್ತಿಸುತ್ತಿದ್ದರು ಎಂದು ಹೇಳಿದ್ದಾನೆ.

ಇಬ್ಬರು ಎನ್ ಸಿಪಿ ನಾಯಕರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹವಾಲಾ ಹಣ ಬಳಕೆ, ರಾಜಕಾರಣಿಗಳ ನೆರವು, ದಾವೂದು ಸಂಚು ಎಲ್ಲದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಥಾಣೆ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ಹೇಳಿದ್ದಾರೆ.

English summary
He has moved his location four times since Narendra Modi became the Prime Minister, Iqbal Kaskar said about his brother, Dawood Ibrahim. While confirming that he was in Pakistan, Kaskar arrested in an extortion case said that since 2014, Dawood’s security too has been enhanced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X