ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಸ್ತಿ 1.10 ಕೋಟಿ ರೂ.ಗೆ ಹರಾಜು

|
Google Oneindia Kannada News

ಮುಂಬೈ, ಡಿಸೆಂಬರ್ 02: ಭೂಗತ ಪಾತಕಿ ದಾವೂದ್‌ನ ಮಹಾರಾಷ್ಟ್ರದ ರತ್ನಗಿರಿಯಲ್ಲಿದ್ದ ಆಸ್ತಿ 1.10 ಕೋಟಿಗೆ ಹರಾಜುಹಾಕಲಾಗಿದೆ. 30 ಗುಂಟೆಯ ಪ್ಲಾಟ್ ಹಾಗೂ 50 ಗುಂಟೆಯಲ್ಲಿರುವ ಕಟ್ಟಡ ಹೆಸರಾಂತ ಬಿಡ್ಡರ್ ರವೀಂದ್ರ ಕಾಟೆಯವರ ಪಾಲಾಗಿದೆ.

ಒಂದು ಗುಂಟೆ ಸುಮಾರು 1809 ಚದರಡಿ ಇರುತ್ತದೆ. ಆ ಆಸ್ತಿಗೆ 1,09,15,500 ಹರಾಜು ಕೂಗಲಾಗಿತ್ತು, ರವೀಂದ್ರ ಕಾಟೆ ಅದನ್ನು 1,10,01,051 ಕೋಟಿ ರೂ ಖರೀದಿಸಿದ್ದಾರೆ.

ದಾವೂದ್ ಗ್ಯಾಂಗ್ ಜೊತೆ ಕೇರಳದ ಚಿನ್ನದ ಸ್ಮಗ್ಲರ್ಸ್ ನಂಟು ದಾವೂದ್ ಗ್ಯಾಂಗ್ ಜೊತೆ ಕೇರಳದ ಚಿನ್ನದ ಸ್ಮಗ್ಲರ್ಸ್ ನಂಟು

ಈ ಆಸ್ತಿಯು ಹೈವೇ ಬಳಿ ಇದೆ ಎಂದು ಹೆಚ್ಚುವರಿ ಆಯುಕ್ತ ಸಫೀಮಾ ಆರ್‌ಎನ್ ಡಿಸೋಜಾ ತಿಳಿಸಿದ್ದಾರೆ. ನವೆಂಬರ್‌ನಲ್ಲಿಯೇ ಹರಾಜು ಕರೆಯಬೇಕಿತ್ತು ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಡಿಸೆಂಬರ್‌ನಲ್ಲಿ ಕರೆಯಲಾಯಿತು ಎಂದು ಹೇಳಿದ್ದಾರೆ.

Dawood Ibrahims Properties Fetch Rs 1.10 Crore In Auction

ಖೇದ್ ತೆಹ್ಸಿಲ್‌ನಲ್ಲಿರುವ ಬೇರೆ ಆಸ್ತಿಗಳನ್ನು ಕೂಡ ಮುಂಬರುವ ದಿನಗಳಲ್ಲಿ ಹರಾಜು ಕರೆಯಲಾಗುವುದು. ಈ ಆಸ್ತಿಯನ್ನು ಇ-ಹರಾಜು ಕರೆಯಲಾಗಿತ್ತು. ಹೆಚ್ಚು ದರ ನಿಗದಿಪಡಿಸಿರುವ ಕಾರಣ ದಾವೂದ್ ಆಪ್ತ ಇಬ್ರಾಹಿಂದ ಮಿರ್ಚಿ ಅವರ ಆಸ್ತಿಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.

ಕೊರೊನಾ ಸೋಂಕಿನಿಂದಾಗಿ ರಿಯಲ್ ಎಸ್ಟೇಟ್ ಸಂಪೂರ್ಣವಾಗಿ ಬಿದ್ದಿದೆ. ಮಿರ್ಚಿ ಆಸ್ತಿಗೆ ಮತ್ತೊಮ್ಮೆ ಹರಾಜು ಕರೆಯಲಾಗುತ್ತದೆ ಎಂದು ಡಿಸೋಜಾ ತಿಳಿಸಿದ್ದಾರೆ.

English summary
Three properties of fugitive gangster Dawood Ibrahim in Maharashtra's Ratnagiri district were sold in an auction for over Rs 1 crore, an official said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X