ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿ ಹರಾಜು ಪ್ರಕ್ರಿಯೆ ಶುರು

By Mahesh
|
Google Oneindia Kannada News

ಮುಂಬೈ, ಡಿ. 09: ಭೂಗತ ಪಾತಕಿ, ದಾವೂದ್ ಇಬ್ರಾಹಿಂನ ಒಡೆತನದಲ್ಲಿರುವ ಆಸ್ತಿ ಹರಾಜು ಪ್ರಕ್ರಿಯೆ ಬುಧವಾರ ಆರಂಭವಾಗಿದೆ.

ದಕ್ಷಿಣ ಮುಂಬೈಯಲ್ಲಿರುವ ಹೊಟೇಲ್ ಕಟ್ಟಡ ಸೇರಿದಂತೆ ಏಳು ಸ್ಥಿರಾಸ್ತಿ ಹಾಗೂ ನಗರದ ಹೊರವಲಯದಲ್ಲಿರುವ ನಾಲ್ಕು ಕಟ್ಟಡಗಳು ಹರಾಜಿಗಿಡಲಾಗಿದೆ. [ಇಂಟರ್ ಪೋಲ್ ನಿಂದ ಮೋದಿಗೆ ಭರವಸೆ : ದಾವೂದ್ ಸೆರೆ ಖಚಿತ]

ಮುಂಬೈನ ಮಾತುಂಗಾದಲ್ಲಿನ ಹೊಟೇಲ್ ಹರಾಜಿನಲ್ಲಿ ಪತ್ರಕರ್ತ ಹಾಲಿ ಎನ್ ಜಿಒ ವೊಂದರ ಮುಖ್ಯಸ್ಥ ಎಸ್.ಬಾಲಕೃಷ್ಣನ್, ದೆಹಲಿ ಮೂಲದ ನ್ಯಾಯವಾದಿ ಅಜಯ್ ಶ್ರೀವಾಸ್ತವ, ಹಿಂದೂ ಮಹಾಸಭಾದ ಸ್ವಾಮಿ ಚಕ್ರಪಾಣಿ ಮುಂತಾದವರು ಬಿಡ್ ಮಾಡಿದ್ದಾರೆ.

Dawood Ibrahim's Properties to be Auctioned in Mumbai

ಪೊಲೀಸ್ ಬಿಗಿ ಭದ್ರತೆಯಲ್ಲಿ ಇಲ್ಲಿನ ಪಾಕ್ ಮೋದಿಯಾ ಸ್ಟ್ರೀಟ್‌ನಲ್ಲಿರುವ ಡಿಪ್ಲೊಮೇಟ್ ಹೊಟೇಲ್‌ನಲ್ಲಿ ಹರಾಜು ನಡೆಯುತ್ತಿದ್ದು, ಇಂದು ಹರಾಜಾಗುವ ಆಸ್ತಿಗಳಲ್ಲಿ ದಾವೂದ್ ಇಬ್ರಾಹಿಂಗೆ ಸೇರಿದ ಒಂದು ಹೊಟೇಲ್ ಸೇರಿದೆ.[ದಾವೂದ್ ಇಬ್ರಾಹಿಂ ಪಾಸ್ ಪೋರ್ಟ್ ವಿವರ ಬಹಿರಂಗ]

1980ರಲ್ಲಿ ಇದೇ ಕಟ್ಟಡದಲ್ಲಿ ಪಾತಕಿ ದಾವೂದ್ ನೆಲೆಸಿದ್ದ. ಇದು ಧಾಟ್ಕೋಪಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಸರ್ಕಾರ ಈ ಹರಾಜಿಗೆ ತನ್ನ ಅಧಿಕಾರಿಗಳನ್ನು ನೇಮಿಸಿದ್ದು, 1976ರ ಕಾಳಸಂತೆಕೋರರು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವವರ ಆಸ್ತಿ ಸ್ವಾಧೀನ ಕಾಯ್ದೆ ಅಡಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಹರಾಜಿನಲ್ಲಿ ಪಾಲ್ಗೊಳ್ಳದಂತೆ ಅನೇಕರಿಗೆ ಸಂದೇಶಗಳನ್ನು ಡಿ ಗ್ಯಾಂಗ್ ಈಗಾಗಲೇ ಕಳಿಸಿರುವ ಮಾಹಿತಿ ಬಂದಿದೆ. ಈ ಸುದ್ದಿಯನ್ನು ಖಚಿತ ಪಡಿಸಿದ ಬಾಲಕೃಷ್ಣನ್, ಛೋಟಾ ಶಕೀಲ್ ನಿಂದ ಸಂದೇಶ ಬಂದಿತ್ತು ಎಂದಿದ್ದಾರೆ.

English summary
Underworld don Dawood Ibrahim's seized properties will be auctioned in Mumbai today. Seven properties owned by the fugitive gangster, three in Mumbai and four outside the city will go under the hammer today at a Mumbai hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X