• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಕೇಸ್: ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್ ಬಂಧನ

|
Google Oneindia Kannada News

ಮುಂಬೈ, ಜೂನ್ 24: ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್‌ನನ್ನು ಡ್ರಗ್ಸ್ ಕೇಸಲ್ಲಿ ಬಂಧಿಸಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವು/ಡ್ರಗ್ಸ್ ಕೇಸಿಗೆ ಸಂಬಂಧಿಸಿದ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದ ಆರೋಪ ಇಕ್ಬಾಲ್ ಮೇಲಿದೆ.

ಬಂಧನ ಸುದ್ದಿಯನ್ನು ಮಾದಕ ದ್ರವ್ಯ ನಿಗ್ರಹ ದಳ(ಎನ್‌ಸಿಬಿ)ದವರು ಖಚಿತಪಡಿಸಿದ್ದಾರೆ. ಥಾಣೆಯಲ್ಲಿ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಕರ್ ಬಂಧಿಸಲಾಗಿದೆ. ನಂತರ ಎನ್ ಸಿಬಿ ಅಧಿಕಾರಿಗಳು ಬಲ್ಲಾರ್ಡ್ ಎಸ್ಟೇಟ್ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

15 ಕೆಜಿ ಹಶೀಶ್ ಹೊಂದಿದ್ದ ಕಾರಣಕ್ಕೆ ಕಸ್ಕರ್ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಹಂಚಿಕೊಂಡಿಲ್ಲ. ದಾವೂದ್ ಇಬ್ರಾಹಿಂ ಗ್ಯಾಂಗ್ ಜೊತೆ ಸಂಪರ್ಕ ಹೊಂದಿರುವ ಪೆಡ್ಲರ್ ಪರ್ವೇಜ್ ಖಾನ್ ಅಲಿಯಾಸ್ ಚಿಂಕು ಹಾಗೂ ಡ್ರಗ್ ಪೆಡ್ಲರ್ ಹಾರೀಸ್ ಖಾನ್ ಮೂಲಕ ಡ್ರಗ್ಸ್ ದಂಧೆ ನಡೆಸಲಾಗುತ್ತಿತ್ತು.

ಅಂಧೇರಿ, ಲೋಖಂಡವಾಲ, ಬಾಂದ್ರಾಗಳಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಖಾನ್ ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಚಿಂಕು ಪಠಾಣ್ ಡ್ರಗ್ಸ್ ಕೇಸಿನಲ್ಲಿ ಹಾರೀಸ್ ಬಂಧನವಾಗಿದ್ದು, ಆತ ನೀಡಿದ್ದ ಸುಳಿವಿನ ಮೇರೆಗೆ ದಾವೂದ್ ಸೋದರನಿಗೆ ಬಲೆ ಬೀಸಲಾಗಿದೆ. ಬಾಲಿವುಡ್ ಮಂದಿ ಜೊತೆಗೆ ಹಾರೀಸ್ ನಿಕಟ ಸಂಪರ್ಕ ಹೊಂದಿದ್ದ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲೂ ಈತನ ಹೆಸರು ಕೇಳಿ ಬಂದಿದೆ.

English summary
Mumbai serial blasts case mastermind Dawood Ibrahim's brother Iqbal Kaskar has been arrested by the Narcotics Control Bureau in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X