ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕ್ಕೆ 300 ಸಂಪಾದಿಸುವನಿಗೆ ಒಂದು ಕೋಟಿ ದಂಡ ಹಾಕಿದ ಐಟಿ ಇಲಾಖೆ

|
Google Oneindia Kannada News

ಮುಂಬೈ, ಜನವರಿ 17: ದಿನಗೂಲಿ ಮಾಡಿ ಸಂಸಾರ ಸಾಗಿಸುತ್ತಿರುವ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ ನೊಟೀಸ್ ಕಳಿಸಿದ್ದ ಬರೋಬ್ಬರಿ 1.05 ಕೋಟಿ ದಂಡ ಕಟ್ಟುವಂತೆ ಸೂಚಿಸಿದ್ದಾರೆ.

ಮಹಾರಾಷ್ಟ್ರದ ಬುವಾಸಾಹೇಬ್ ಅಹಿರೆ ದಿನಗೂಲಿ ನೌಕರ, ಥಾಣೆಯ ಸ್ಲಂ ಒಂದರಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದಾರೆ. ಆತನ ದಿನದ ಕೂಲಿ 300 ರೂಪಾಯಿ ಆದರೆ ಆತ ತೆರಿಗೆ ವಂಚಿಸಿದ್ದಾನೆಂದು ಐಟಿ ಇಲಾಖೆಯು ದಂಡದ ರೂಪದಲ್ಲಿ 1.05 ಕೋಟಿ ದಂಡ ಪಾವತಿಸುವಂತೆ ನೊಟೀಸ್ ನೀಡಿದೆ.

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ಅಸಲಿ ರಹಸ್ಯ ಏನು?ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ಅಸಲಿ ರಹಸ್ಯ ಏನು?

ನೋಟು ರದ್ಧತಿ ಸಮಯದಲ್ಲಿ ಅಹಿರೆ ಖಾತೆಯಲ್ಲಿ 58 ಲಕ್ಷ ಜಮೆ ಆಗಿದೆ ಎಂದು ನೊಟೀಸ್‌ನಲ್ಲಿ ತಿಳಿಸಿರುವ ಐಟಿ, ತೆರಿಗೆ ವಂಚನೆ ಮಾಡಿದ್ದು ತೆರಿಗೆ ಮತ್ತು ದಂಡ ಸೇರಿಸಿ 1.05 ಕೋಟಿ ದಂಡ ಮೊತ್ತ ಪಾವತಿಸುವಂತೆ ಕಳೆದ ಸೆಪ್ಟೆಂಬರ್‌ ನಲ್ಲಿಯೇ ನೊಟೀಸ್ ಜಾರಿ ಮಾಡಿದೆ.

Daily Wage Employee Get 1.05 Crore Notice From IT Department

ಅನಕ್ಷರಸ್ಥನಾದ ಅಹಿರೆ ಐಟಿ ನೊಟೀಸ್ ಅನ್ನು ಯಾವುದೋ ಸಾಮಾನ್ಯ ನೊಟೀಸೆಂದು ನಿರ್ಲಕ್ಷಿಸಿದ್ದಾರೆ. ನಂತರ ಡಿಸೆಂಬರ್‌ ನಲ್ಲಿ ಅದೇ ನೊಟೀಸ್ ಮತ್ತೆ ಬಂದಿದೆ. ಆಗ ಕೆಲವರನ್ನು ನೊಟೀಸ್ ಬಗ್ಗೆ ಕೇಳಿದಾಗ, ಅಹಿರೆ 1.05 ಕೋಟಿ ಹಣ ಕಟ್ಟಬೇಕಿರುವ ವಿಷಯ ಗೊತ್ತಾಗಿದೆ.

ಕೇಂದ್ರ ಬಜೆಟ್: ಆದಾಯ ತೆರಿಗೆ, ಜಿಎಸ್ಟಿ ಬದಲಾವಣೆ ನಿರೀಕ್ಷೆಕೇಂದ್ರ ಬಜೆಟ್: ಆದಾಯ ತೆರಿಗೆ, ಜಿಎಸ್ಟಿ ಬದಲಾವಣೆ ನಿರೀಕ್ಷೆ

ಗಾಬರಿಯಾದ ಅಹಿರೆ ಬ್ಯಾಂಕ್‌ ಗೆ ಹೋಗಿ ವಿಚಾರಿಸಿದಾಗ ಗೊತ್ತಾಗಿದ್ದು, ಅಹಿರೆ ಹೆಸರಲ್ಲಿ ಆತನ ಪ್ಯಾನ್ ಸಂಖ್ಯೆ ಬಳಸಿ ಬೇರೊಬ್ಬರು ಖಾತೆ ತೆರೆದಿದ್ದಾರೆ. ಖಾತೆ ತೆರೆಯಲು ನೀಡಿರುವ ಎಲ್ಲ ದಾಖಲೆಗಳು ಅಹಿರೆಯವೇ ಆದರೆ ಚಿತ್ರ ಮಾತ್ರ ಬೇರೆಯದ್ದು ನೀಡಲಾಗಿದೆ. ಆ ಫೇಕ್ ಖಾತೆಗೆ ಲಕ್ಷಾಂತರ ಹಣ ಡೆಪಾಸಿಟ್ ಮಾಡಲಾಗಿದೆ.

ಮುಂಬೈಯಲ್ಲಿ ಅತ್ತ ಸರ್ಕಾರ ರಚನೆ ಕಗ್ಗಂಟು: ಇತ್ತ ಸರಣಿ ಐಟಿ ದಾಳಿ!ಮುಂಬೈಯಲ್ಲಿ ಅತ್ತ ಸರ್ಕಾರ ರಚನೆ ಕಗ್ಗಂಟು: ಇತ್ತ ಸರಣಿ ಐಟಿ ದಾಳಿ!

ತನ್ನ ಹೆಸರಲ್ಲಿ ನಕಲಿ ಖಾತೆ ತೆರೆದು ಕೋಟ್ಯಂತರ ವ್ಯವಹಾರ ಮಾಡಿರುವುದು ಗೊತ್ತಾಗುತ್ತಿದ್ದಂತೆ ಅಹಿರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

English summary
Daily wage employee Ahire gets IT notice to pay 1.05 rupees as tax and fine. He ears 300 rs per day. He gave complaint about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X