ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡಿ ಕಂಪನಿ'ಗೆ ಆಘಾತ, ದುಬೈನಿಂದ ಭಾರತಕ್ಕೆ ಛೋಟಾ ಶಕೀಲ್ ಆಪ್ತ ಅಹ್ಮದ್ ರಾಜಾ

|
Google Oneindia Kannada News

ಮುಂಬೈ, ಜುಲೈ 17: ಡಿ ಕಂಪನಿಯ ಮುಖ್ಯ ಹವಾಲಾ ವ್ಯವಹಾರ ನೋಡಿಕೊಳ್ಳುತ್ತಿದ್ದ ಅಹ್ಮದ್ ರಾಜಾನನ್ನು ವಿಚಾರಣೆಗಾಗಿ ಭಾರತಕ್ಕೆ ಗಡಿಪಾರು ಮಾಡುತ್ತಿರುವುದಾಗಿ ದುಬೈ ಸರ್ಕಾರ ಹೇಳಿದೆ. ಈ ಮೂಲಕ ಮುಂಬೈ ಪೊಲೀಸ್ ಹಾಗೂ ಭಾರತದ ತನಿಖಾ ಸಂಸ್ಥೆಗಳಿಗೆ ಭಾರಿ ಜಯ ದೊರಕಿದ್ದಂತಾಗಿದೆ.

ಭೂಗತ ಪಾತಕಿ ದಾವೂದ್​ಇಬ್ರಾಹಿಂನ ಡಿ ಕಂಪನಿಯ ಮುಂಬೈ, ಪುಣೆ ವ್ಯವಹಾರಗಳನ್ನು ನಿಭಾಯಿಸುತ್ತಿದ್ದ ಅಹ್ಮದ್ ರಾಜಾ ಅಲಿಯಾಸ್ ಅಫ್ರೋಜ್ ವದಾರಿಯಾರನ್ನು ವಿಚಾರಣೆಗೊಳಪಡಿಸಲು ಮುಂಬೈ ಪೊಲೀಸರು ಬಹುದಿನಗಳಿಂದ ಕಾದಿದ್ದಾರೆ. ಛೋಟಾ ಶಕೀಲ್ ಆಪ್ತ ಸಹಚರನಾದ ಅಹ್ಮದ್ ರಾಜಾನನ್ನು ಕಳೆದ ತಿಂಗಳು ದುಬೈನಲ್ಲಿ ಬಂಧಿಸಲಾಗಿತ್ತು.

ಮತ್ತೊಮ್ಮೆ ಮೋದಿ, ದಾವೂದ್ ಇಬ್ರಾಹಿಂ ಎದೆಯಲ್ಲಿ ಢವಢವ!ಮತ್ತೊಮ್ಮೆ ಮೋದಿ, ದಾವೂದ್ ಇಬ್ರಾಹಿಂ ಎದೆಯಲ್ಲಿ ಢವಢವ!

ತಕ್ಷಣವೇ ಅಹ್ಮದ್ ರಾಜಾನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತದ ತನಿಖಾ ಸಂಸ್ಥೆಗಳು ಮನವಿ ಸಲ್ಲಿಸಿದ್ದರೂ, ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡು, ದುಬೈ ಸರ್ಕಾರ ತೀರ್ಮಾನ ಕೈಗೊಳ್ಳಲು ಕೊಂಚ ತಡವಾಗಿದೆ.

D-Company hawala operator Ahmad Raza deported to India from Dubai

ಮುಂಬೈ, ಥಾಣೆ ಅಲ್ಲದೆ ಸೂರತ್ ನಲ್ಲಿರುವ ವ್ಯಾಪಾರಿಗಳನ್ನು ಗುರಿಯನ್ನಾಗಿಸಿಕೊಂಡು ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದ, ಈತನ ವಿರುದ್ಧ ಹಲವು ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕಾಗಿ ಲುಕ್​ಔಟ್​ ನೋಟಿಸ್ ಹೊರಡಿಸಲಾಗಿತ್ತು.

ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ! ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ!

'ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ' ಎಂದು ಅಮೆರಿಕ ಖಚಿತಪಡಿಸಿದ ನಂತರ, ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ವಿರುದ್ಧ ಕ್ರಮ ಜರುಗಿಸಲು ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಸಭೆಗೆ ಭಾರತ ಮನವಿ ಸಲ್ಲಿಸಿತ್ತು.

ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ ಬಳಿಕ ದಾವೂದ್ ಇಬ್ರಾಹಿಂ ವಿರುದ್ಧ ಆದೇ ರೀತಿ ನಿರ್ಬಂಧ ಹೇರಿಕೆಗಾಗಿ ಭಾರತ ಒತ್ತಾಯಿಸಿದೆ.

ಚೋಟಾ ಶಕೀಲ್ ನ ಮಗನೂ ಪಾಕ್ ನಲ್ಲಿ ಈಗ ಕುರ್ ಆನ್ ಪ್ರವಚನಕಾರಚೋಟಾ ಶಕೀಲ್ ನ ಮಗನೂ ಪಾಕ್ ನಲ್ಲಿ ಈಗ ಕುರ್ ಆನ್ ಪ್ರವಚನಕಾರ

ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಮುಖ್ಯವಾಗಿ ಡಿ ಕಂಪನಿ ಕಾರ್ಯ ನಿರ್ವಹಿಸುತ್ತಿದ್ದು, ನಕಲಿ ನೋಟು ಜಾಲ, ಐಎಸ್ಐನ ಅಕ್ರಮ ಮಾದಕ ದ್ರವ್ಯ ವ್ಯವಹಾರ, ಮನಿ ಲಾಂಡ್ರಿಂಗ್ ಸೇರಿದಂತೆ ಅನೇಕ ಭೂಗತ ಪಾತಕಗಳಲ್ಲಿ ತೊಡಗಿಕೊಂಡಿದೆ.

English summary
Big setback to underworld don Dawood Ibrahim, D-Company's main hawala operator Ahmad Raza alias Afroz Vadaria was deported to India. Raza, a close aide of Chhota Shakeel and Faheem Machmach was handling D-Company's business in Surat, Mumbai and Thane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X