ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸರ್ಗ ಚಂಡಮಾರುತ: ಮುಂಬೈನಲ್ಲಿ 19 ವಿಮಾನಗಳು ಮಾತ್ರ ಹಾರಾಟ

|
Google Oneindia Kannada News

ಮುಂಬೈ, ಜೂನ್ 3: 'ನಿಸರ್ಗ' ಚಂಡಮಾರುತ ಇಂದು ಮಹಾರಾಷ್ಟ್ರದ ಅಲಿಬಾಗ್ ಪ್ರದೇಶಕ್ಕೆ ಅಪ್ಪಳಿಸಲಿದ್ದು, ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Recommended Video

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು | virat kohli | Oneindia Kannada

ನಿಸರ್ಗ ಚಂಡಮಾರುತದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಬುಧವಾರ, ಜೂನ್ 3) ಕೇವಲ 19 ವಿಮಾನಗಳು ಮಾತ್ರ ಕಾರ್ಯನಿರ್ವಹಿಸಲಿದೆ.

ಮುಂಬೈಗೆ ಅಪ್ಪಳಿಸಲಿದೆ 'ನಿಸರ್ಗ'; ಕರ್ನಾಟಕದಲ್ಲೂ ಮಳೆಮುಂಬೈಗೆ ಅಪ್ಪಳಿಸಲಿದೆ 'ನಿಸರ್ಗ'; ಕರ್ನಾಟಕದಲ್ಲೂ ಮಳೆ

ನಿಸರ್ಗ ಚಂಡಮಾರುತದ ಪರಿಣಾಮ ಭಾರಿ ಮಳೆ ಮತ್ತು ಗಂಟೆಗೆ 100 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಹಾರಾಟದಲ್ಲಿ ಕಡಿತಗೊಳಿಸಲಾಗಿದೆ.

 Cyclone Nisarga: Only 19 Flights To Operate In Mumbai Airport On June 3rd

''ಸದ್ಯದ ಮಾಹಿತಿ ಪ್ರಕಾರ, ಜೂನ್ 3 ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ 8 ವಿಮಾನಗಳ ಆಗಮನ, 11 ವಿಮಾನಗಳ ನಿರ್ಗಮನದ ವೇಳಾಪಟ್ಟಿ ಇದೆ. ಚಂಡಮಾರುತದ ಕುರಿತು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ'' ಎಂದು ಮುಂಬೈ ವಿಮಾನ ನಿಲ್ದಾಣದ ವಕ್ತಾರ ತಿಳಿಸಿದ್ದಾರೆ.

ನಿಸರ್ಗ ಚಂಡಮಾರುತದಿಂದಾಗಿ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಮುಂಬೈ ಕಾರ್ಯಾಚರಣೆಯನ್ನು ರದ್ದುಗೊಳಿಸಿದೆ. ಜೂನ್ 3 ರಂದು ಮುಂಬೈನಿಂದ ಕೇವಲ ಮೂರು ಇಂಡಿಗೋ ವಿಮಾನಗಳು ಮಾತ್ರ ಹಾರಾಡಲಿವೆ.

English summary
Cyclone Nisarga: Only 19 flights to operate in Mumbai Airport on June 3rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X