ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸರ್ಗ ಚಂಡಮಾರುತ: ಮಹಾರಾಷ್ಟ್ರದಲ್ಲಿ 15 ಎನ್‌ಡಿಆರ್‌ಎಫ್ ತಂಡಗಳ ನಿಯೋಜನೆ

|
Google Oneindia Kannada News

ನಿಸರ್ಗ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ವಿವಿಧೆಡೆ 15 ಎನ್‌ಡಿಆರ್‌ಎಫ್‌(ರಾಷ್ಟ್ರೀಯ ವಿಪತ್ತು ಪರಿಹಾರ ತಂಡ) ಬೆಟಾಲಿಯನ್‌ ನಿಯೋಜನೆ ಮಾಡಲಾಗಿದೆ. ಮುಂಬೈ, ರಾಯಗಡ್, ಪಾಲ್ವರ್ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಎನ್‌ಡಿಆರ್‌ಫ್ ತಂಡವು ಸಿದ್ಧವಾಗಿದೆ.

Recommended Video

ಆರೋಗ್ಯವನ್ನೇ ಮರೆತ ಅನಾರೋಗ್ಯ ಸಚಿವ..ಇದೇನ್ ಸನ್ಮಾನ ಮಾಡಿಸಿಕೊಳ್ಳೋ ಟೈಮೆನ್ರೀ | Oneindia Kannada

ಮನ್ನೆಚ್ಚರಿಕೆಯ ಕ್ರಮವಾಗಿ ಎನ್‌ಡಿಆರ್‌ಎಫ್ ತಂಡವು ಕಡಲತೀರದ ಪ್ರದೇಶದ ತಪಾಸಣೆ ನಡೆಸಿತು. ಎನ್‌ಡಿಆರ್‌ಎಫ್ ಕಮಾಂಡರ್ ಈಶ್ವರ್ ಮೇಟ್ ಹೈ ಅಲರ್ಟ್ ಇರುವ ಸ್ಥಳಗಳಲ್ಲಿ ಎನ್‌ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಚಂಡಮಾರುತಗಳ ಸಮಯದಲ್ಲಿ ತೊಂದರೆಗಳನ್ನು ಎದುರಿಸಲು ಸ್ಥಳೀಯರಿಗೆ ಎನ್‌ಡಿಆರ್‌ಎಫ್ ತಂಡಗಳು ಸಹಾಯ ಮಾಡುತ್ತವೆ ಎಂದು ತಿಳಿಸಿದ್ದಾರೆ.

ನಿಸರ್ಗ ಚಂಡಮಾರುತ: ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆನಿಸರ್ಗ ಚಂಡಮಾರುತ: ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ

ಚಂಡಮಾರುತದ ಕುರಿತು ಮಾತನಾಡಿದ ಮಹಾರಾಷ್ಟ್ರ ಪುನರ್ವಸತಿ ಸಚಿವ ವಿಜಯ್ ವಟ್ಟಿವಾರ್, ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತದ ಪರಿಣಾಮವನ್ನು ಹೆಚ್ಚು ಕಾಣಬಹುದು, ನಾವು ಈಗಾಗಲೇ ಪ್ರದೇಶದಲ್ಲಿ ಅಲರ್ಟ್ ಜಾರಿಗೊಳಿಸಿದ್ದೇವೆ. ಕೊಂಕಣದ ಮುಂಬೈಯಲ್ಲಿರುವ ಸಮುದ್ರ ತೀರವನ್ನು ಖಾಲಿ ಮಾಡಲು ಮೀನುಗಾರರಿಗೆ ಸೂಚಿಸಲಾಗಿದೆ. ಸಿಂಧುದುರ್ಗ್ ನಂತಹ ಹತ್ತಿರದ ಸಮುದ್ರಗಳಲ್ಲಿ 6 ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Cyclone Nisarga: 15 NDRF Teams Deployed In Maharashtra

ಇದೇ ವೇಳೆ ಭಯಭೀತರಾಗದಂತೆ ಜನರಿಗೆ ಮನವಿ ಮಾಡಿದ ಸಚಿವರು ಪರಿಸ್ಥಿತಿಯನ್ನು ಎದುರಿಸಲು ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದರು.

ಒಟ್ಟು 15 ಎನ್‌ಡಿಎಆರ್ಎಫ್ ತಂಡಗಳು ಮಹಾರಾಷ್ಟ್ರದ ಈ ಕೆಳಗಿನ ಪ್ರದೇಶಗಳಲ್ಲಿ ನಿಯೋಜನೆಗೊಂಡಿವೆ.

1. ಮುಂಬೈ 3 ತಂಡಗಳು
2. ರಾಯಗಡ್ 4 ತಂಡಗಳು
3. ಪಾಲ್ಘರ್ 2 ತಂಡಗಳು
4. ಥಾಣೆ 2 ತಂಡಗಳು
5. ರತ್ನಗಿರಿ 2 ತಂಡಗಳು
6. ಸಿಂಧುದುರ್ಗ್ 1 ತಂಡ
7. ನವೀ ಮುಂಬೈ 1 ತಂಡ

English summary
In the wake of cyclone Nisarga, 15 NDRF teams have been deployed in different districts of Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X