ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತೆ ಸ್ಥಗಿತ

|
Google Oneindia Kannada News

ಮುಂಬೈ, ಏಪ್ರಿಲ್ 15: ಕೋವಿಡ್ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಚತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಟರ್ಮಿನಲ್ 1ಅನ್ನು ಮುಚ್ಚಿದೆ. ಈ ಟರ್ಮಿನಲ್ ಮೂಲಕ ಸಂಚಾರ ನಿರ್ವಹಣೆ ಮಾಡುತ್ತಿದ್ದ ಎಲ್ಲ ದೇಶಿ ಪ್ರಯಾಣಿಕ ವಿಮಾನಗಳನ್ನು ಬೇರೆ ಟರ್ಮಿನಲ್‌ಗೆ ವರ್ಗಾಯಿಸಿದೆ. ಏಪ್ರಿಲ್ 21ರಿಂದ ಎಲ್ಲ ದೇಶಿ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಓಡಾಟವನ್ನು ಟರ್ಮಿನಲ್ 2ರ ಮೂಲಕವೇ ನಡೆಸಲಿದೆ.

ಕೋವಿಡ್ ಕಾರಣದಿಂದ ಮುಚ್ಚಲಾಗಿದ್ದ ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 1ಅನ್ನು ಇತ್ತೀಚೆಗಷ್ಟೇ ಮತ್ತೆ ತೆರೆಯಲಾಗಿತ್ತು. ಗೋಏರ್, ಸ್ಟಾರ್ ಏರ್, ಏರ್ ಏಷ್ಯಾ, ಟ್ರೂಜೆಟ್ ಮತ್ತು ಇಂಡಿಗೋ ದೇಶಿ ವಿಮಾನಗಳು ಟರ್ಮಿನಲ್ 1ಕ್ಕೆ ಮರಳಿದ್ದವು. ಕಳೆದ ವರ್ಷದ ಮೇ 25ರಿಂದಲೂ ಟರ್ಮಿನಲ್ 1ರಿಂದ ದೇಶಿ ಪ್ರಯಾಣಿಕ ಸೇವೆಗಳು ಸ್ಥಗಿತಗೊಂಡಿದ್ದವು.

ಮಂಗಳೂರು-ನವದೆಹಲಿ ನೇರ ವಿಮಾನ ಸ್ಥಗಿತಮಂಗಳೂರು-ನವದೆಹಲಿ ನೇರ ವಿಮಾನ ಸ್ಥಗಿತ

ಏಪ್ರಿಲ್ 21ರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿನ ಎಲ್ಲ ಆಂತರಿಕ ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಚಾರವು ಟರ್ಮಿನಲ್ 2ರಿಂದ ನಡೆಯಲಿದೆ. ಜತೆಗೆ ಕಡ್ಡಾಯ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಪ್ರಯಾಣಿಕರಿಗೆ 1,000 ರೂ ದಂಡ ವಿಧಿಸುವುದನ್ನು ಏ. 1ರಂದ ಆರಂಭಿಸಿದೆ.

CSMIA Airport To Close Terminal 1 Again, Flights Operates From Terminal 2

ಕಳೆದ ವರ್ಷ ಲಾಕ್‌ಡೌನ್ ಬಳಿಕ ಮೇ ತಿಂಗಳಲ್ಲಿ ದೇಶಿ ವಿಮಾನ ಸಂಚಾರ ಆರಂಭವಾದ ನಂತರ ಎಸ್‌ಒಪಿ ಭಾಗವಾಗಿ ಮುಂಬೈ ವಿಮಾನ ನಿಲ್ದಾಣವು ವಿಮಾನ ನಿಲ್ದಾಣದಾದ್ಯಂತ ಸುರಕ್ಷತಾ ಮಾರ್ಗಸೂಚಿಗಳನ್ನು ಅಳವಡಿಸಿತ್ತು.

English summary
CSMIA Airport in Mumbai to close Terminal 1 again and all flights will operates from Terminal 2 starting April 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X