ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣ: NCB ಎದುರು ವಿಚಾರಣೆಗೆ ಹಾಜರಾದ ಆರ್ಯನ್

|
Google Oneindia Kannada News

ಮುಂಬೈ, ನವೆಂಬರ್ 05: ಮುಂಬೈ ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ವಿಚಾರಣೆಗೆ ಬಾಲಿವುಡ್ ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಹಾಜರಾಗಿದ್ದಾರೆ.

ಬೆ ಹೈಕೋರ್ಟ್ ಜಾಮೀನು ನೀಡಿದ ನಂತರ ಅಕ್ಟೋಬರ್ 30 ರಂದು ಅರ್ತೂರ್ ರಸ್ತೆಯ ಕಾರಾಗೃಹದಿಂದ ಅಕ್ಟೋಬರ್ 30 ರಂದು ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಆರ್ಯನ್ ಖಾನ್ ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾದರು.

ಹೈಕೋರ್ಟ್ ವಿಧಿಸಿರುವ ಷರತ್ತಿನ ಅನ್ವಯ ಇಂದು ಮಧ್ಯಾಹ್ನ ಸುಮಾರು 12-15ಕ್ಕೆ ದಕ್ಷಿಣ ಮುಂಬೈಯ ಬಲ್ಲಾರ್ಡ್ ನಲ್ಲಿರುವ ಎನ್ ಸಿಬಿ ಕಚೇರಿಗೆ ಆರ್ಯನ್ ಖಾನ್ ತಲುಪಿದರು ಎಂದು ಮೂಲಗಳು ಹೇಳಿವೆ. ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ಅಕ್ಟೋಬರ್ 3 ರಂದು ಎನ್ ಸಿಬಿ ದಾಳಿ ನಡೆಸಿದ ನಂತರ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು.

Aryan Khan

ಅಕ್ಟೋಬರ್ 28 ರಂದು ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದಾಗ್ಯೂ, ಆತನ ಬಿಡುಗಡೆಗೆ ಸಂಬಂಧಿಸಿದ ದಾಖಲಾತಿಗಳು ಜೈಲಿಗೆ ತಲುಪದ ಕಾರಣ ಅಕ್ಟೋಬರ್ 30 ರವರೆಗೂ ಜೈಲಿನಿಂದ ಬಿಡುಗಡೆಯಾಗಿರಲಿಲ್ಲ.

1 ಲಕ್ಷ ವೈಯಕ್ತಿಕ ಬಾಂಡ್ , ಒಬ್ಬರು ಅಥವಾ ಇಬ್ಬರು ಶ್ಯೂರಿಟಿಯೊಂದಿಗೆ 14 ಷರತ್ತುಗಳೊಂದಿಗೆ ಕಳೆದ ಶುಕ್ರವಾರ ಹೈಕೋರ್ಟ್ ಆರ್ಯನ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಜಾಮೀನು ಮಂಜೂರು ಮಾಡಿತ್ತು. ಪ್ರತಿ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ಒಳಗಡೆ ಎನ್‌ಸಿಬಿ ಮುಂದೆ ಹಾಜರಾಗಬೇಕೆಂದು ಷರತ್ತು ವಿಧಿಸಲಾಗಿತ್ತು.

ಆರ್ಯನ್‌ ಬಗ್ಗೆ ಶಾರುಖ್ ಖಾನ್‌ಗೆ ಪತ್ರ ಬರೆದ ರಾಹುಲ್ ಗಾಂಧಿಆರ್ಯನ್‌ ಬಗ್ಗೆ ಶಾರುಖ್ ಖಾನ್‌ಗೆ ಪತ್ರ ಬರೆದ ರಾಹುಲ್ ಗಾಂಧಿ

ಆರ್ಯನ್ ಖಾನ್ ಮುಂಬೈ ಬಿಟ್ಟು ಹೋಗುವಂತಿಲ್ಲ. ಆರ್ಯನ್ ಖಾನ್ ತನ್ನ ಪಾಸ್‍‌ಪೋರ್ಟ್ ದಾಖಲೆಗಳನ್ನು ಮುಂಬೈ ಕೋರ್ಟ್‌ಗೆ ಸಲ್ಲಿಸಬೇಕು. ಇನ್ನು ಪ್ರತಿ ಶುಕ್ರವಾರ ಆರ್ಯನ್ ಖಾನ್ NCB ಅಧಿಕಾರಿಗಳ ಮುಂದೆ ಹಾಜರಾಗಬೇಕು.

ಇದರ ನಡುವೆ NCB ಅಧಿಕಾರಿಗಳು ಕರೆದಾಗ ಕಚೇರಿಗೆ ತೆರಳಿ ಅಧಿಕಾರಿಗಳ ಮುಂದೆ ಹಾಜರಾಗಬೇಕು. ಇನ್ನುಅನಿವಾರ್ಯ ಹಾಗೂ ತುರ್ತು ಕಾರಣಗಳನ್ನು ಹೊರತು ಪಡಿಸಿ ಕೋರ್ಟ್ ವಿಚಾರಣೆಗೆ ತಪ್ಪದೆ ಹಾಜರಾಗಬೇಕು.

ಇವಿಷ್ಟು ಷರತ್ತುಗಳು ಆರ್ಯನ್ ಖಾನ್ ಮುಂದಿದೆ. ಅಂದರೆ ಜಾಮೀನು ಸಿಕ್ಕರೂ ಆರ್ಯನ್ ಖಾನ್‌ಗೆ ಸಂಕಷ್ಟ ತಪ್ಪಿಲ್ಲ. ಷರತ್ತು ಇಲ್ಲಿಗೆ ಮುಗಿದಿಲ್ಲ. ಆರ್ಯನ್ ಖಾನ್ ಹಾಗೂ ಮತ್ತಿಬ್ಬರು ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾ ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡುವಂತಿಲ್ಲ. ಸದ್ಯದ ವಿಚಾರಣೆ ಕುರಿತು ಯಾವುದೇ ಮಾಹಿತಿಯನ್ನು ಬಾಯ್ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.

ಆರ್ಯನ್ ಖಾನ್ ಈ ಷರತ್ತುಗಳನ್ನು ಉಲ್ಲಂಘನೆ ಮಾಡಿದರೆ ಜಾಮೀನು ರದ್ದು ಮಾಡಿ ಮತ್ತೆ ಬಂಧನ ಮಾಡಲು ಅವಕಾಶ ಕೋರಿ NCBಗೆ ಕೋರ್ಟ್ ಬಳಿ ಮನವಿ ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ತನ್ನ ಜಾಮೀನು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆರ್ಯನ್ ಖಾನ್ ಸೇರಿ ಮೂವರಿಗೆ 1 ಲಕ್ಷ PR ಬಾಂಡ್ ಹಾಗೂ ಶ್ಯುರಿಟಿ ಆಧಾರದಲ್ಲಿ ಬೇಲ್ ನೀಡಲಾಗಿದೆ.

ಅಕ್ಟೋಬರ್ 3 ರಂದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಮುಂಬೈ ಕರಾಳವಳಿ ತೀರದಲ್ಲಿ ಕ್ರ್ಯೂಸ್ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ NCB ಅಧಿಕಾರಿಗಳು ಮುಫ್ತಿಯಲ್ಲಿ ದಾಳಿ ಮಾಡಿದ್ದರು. ಈ ವೇಳೆ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಇಷ್ಟೇ ಅಲ್ಲ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ದರು.

Recommended Video

ಅಪ್ಪು ನೆನೆದು ಕಣ್ಣೀರಿಟ್ಟ ತಮಿಳು ನಟ ಸೂರ್ಯ ಭಾವುಕರಾಗಿ ಹೇಳಿದ್ದೇನು? | Oneindia Kannada

English summary
This was Aryan Khan’s first appearance at the NCB office after his release from the Arthur Road prison on October 30 following the bail granted by the Bombay High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X