ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆ: ವಿಜ್ಞಾನಿಗಳು ಹೇಳಿದ್ದೇನು?

|
Google Oneindia Kannada News

ಮುಂಬೈ,ಫೆಬ್ರವರಿ 19: ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಜನತೆ ಆತಂಕದಲ್ಲಿದೆ. ಈ ಸಂದರ್ಭದಲ್ಲಿ ಹೆಚ್ಚೆಚ್ಚು ಕೊರೊನಾ ಪರೀಕ್ಷೆಗಳ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಯಾವುದೇ ಕಾರಣಕ್ಕೂ ಕೊರೊನಾ ಪರೀಕ್ಷೆ ಪ್ರಮಾಣವನ್ನು ಕಡಿಮೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ಈ ಸೋಂಕು ವೇಗವಾಗಿ ಅಥವಾ ನಿಧಾನಗತಿಯಲ್ಲಿ ಹೇಗೆ ಹರಡುತ್ತಿದೆ ಎನ್ನುವ ಬಗ್ಗೆ ಅಧ್ಯಯನದ ಅಗತ್ಯವಿದೆ. ಅದನ್ನು ಈಗಲೇ ಕೊರೊನಾ ವೈರಸ್‌ನ ಮತ್ತೊಂದು ತಳಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆರಿಗೆ ಕೊರೊನಾ ಪಾಸಿಟಿವ್ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೊಪೆರಿಗೆ ಕೊರೊನಾ ಪಾಸಿಟಿವ್

ಜೀನ್ ಸೀಕ್ವೆನ್ಸಿಂಗ್ ಮಾಡುತ್ತಿದ್ದು 10-15 ದಿನಗಳೊಳಗಾಗಿ ಫಲಿತಾಂಶ ಹೊರಬರಲಿದೆ.ಬಳಿಕ ಇನ್ನೂ ವಿವರವಾಗಿ ಅಧ್ಯಯನ ಮಾಡಲಾಗುತ್ತದೆ.

ಹೆಚ್ಚು ಕೊರೊನಾ ಪ್ರಕರಣ ದಾಖಲಾದ ರಾಜ್ಯದಲ್ಲೇ ರೂಪಾಂತರಿ ವೈರಸ್

ಹೆಚ್ಚು ಕೊರೊನಾ ಪ್ರಕರಣ ದಾಖಲಾದ ರಾಜ್ಯದಲ್ಲೇ ರೂಪಾಂತರಿ ವೈರಸ್

ಅತಿ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ ಸಾವು ದಾಖಲಾದ ರಾಜ್ಯದಲ್ಲೇ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿರುವುದು ಮತ್ತೊಂದು ಆತಂಕದ ವಿಷಯವಾಗಿದೆ. ಗುರುವಾರ 5 ಸಾವಿರಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. 75 ದಿನಗಳಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾದಂತಾಗಿದೆ. ಮುಂಬೈನಲ್ಲಿ 700ಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಮರಾವತಿ, ಅಂಕೋಲಾ,ಯವತ್ಮಲ್ ಜಿಲ್ಲೆಗಳಲ್ಲಿ ಜೀನ್ ಸೀಕ್ವೆನ್ಸಿಂಗ್ ಪರೀಕ್ಷೆ ಮಾಡಲಾಗುತ್ತಿದೆ.

ದಕ್ಷಿಣ ಆಫ್ರಿಕಾದ ರೂಪಾಂತರಿ ಸೋಂಕು

ದಕ್ಷಿಣ ಆಫ್ರಿಕಾದ ರೂಪಾಂತರಿ ಸೋಂಕು

ಭಾರತಕ್ಕೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರಿ ಕೊರೊನಾ ವೈರಸ್ ಕಾಲಿಟ್ಟಿದೆ. ಇದು ಹೆಚ್ಚು ಸಾಂಕ್ರಾಮಿಕವಾಗಿದ್ದು, ಆ ದೇಶಗಳಿಂದ ಬರುವ ಜನರಿಗೆ ಹೆಚ್ಚು ಒತ್ತು ನೀಡಿ ಪರೀಕ್ಷೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ನಾಲ್ವರಲ್ಲಿ ದಕ್ಷಿಣ ಆಫ್ರಿಕಾದ ಕೊರೊನಾ ವೈರಸ್ ರೂಪಾಂತರ ಪತ್ತೆಯಾಗಿದೆ ಮತ್ತು ಬ್ರೆಜಿಲ್ ರೂಪಾಂತರವು ಒಬ್ಬರಲ್ಲಿ ಕಂಡುಬಂದಿದೆ ಎಂದು ಉನ್ನತ ವೈದ್ಯಕೀಯ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿದೆ. ಈ ಎಲ್ಲಾ ಐದು ಜನರನ್ನು ಪ್ರತ್ಯೇಕಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಬ್ರಿಟನ್ ವೈರಸ್

ಭಾರತದಲ್ಲಿ ಬ್ರಿಟನ್ ವೈರಸ್

ಭಾರತದಲ್ಲಿ ಯುಕೆ ಸ್ಟ್ರೈನ್ ಪ್ರಕರಣಗಳು 187 ಇವೆ. ಅಲ್ಲದೆ, ಅವರ ಎಲ್ಲಾ ಸಂಪರ್ಕಿತರನ್ನು ಪ್ರತ್ಯೇಕಿಸಿ ಪರೀಕ್ಷಿಸಲಾಗಿದೆ .ಯುಕೆಯಿಂದ ಬರುವ ಪ್ರಯಾಣಿಕರಿಗಾಗಿ ಇರುವ ನಿಯಮವನ್ನೇ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್​ನಿಂದ ಬರುವ ವಿಮಾನಗಳ ಪ್ರಯಾಣಿಕರಿಗೆ ಅನುಸರಿಸಲಾಗುತ್ತದೆ.

41 ದೇಶದಗಳಿಗೆ ಹರಡಿದ ರೂಪಾಂತರಿ ವೈರಸ್

41 ದೇಶದಗಳಿಗೆ ಹರಡಿದ ರೂಪಾಂತರಿ ವೈರಸ್

ದಕ್ಷಿಣ ಆಫ್ರಿಕಾದ ರೂಪಾಂತರವು ಯುಎಸ್ ಸೇರಿದಂತೆ ಸದ್ಯ ವಿಶ್ವದ 41 ದೇಶಗಳಲ್ಲಿ ಹರಡಿದೆ. ಭಾರತದಲ್ಲಿ ಈ ರೂಪಾಂತರ ಕೊರೋನಾ ನಾಲ್ವರಲ್ಲಿ ಇದ್ದು, ಇವರು ಅಂಗೋಲಾ, ಟಾಂಜಾನಿಯಾ ಮತ್ತು ದಕ್ಷಿಣ ಆಫ್ರಿಕಾದವರು ಎಂದು ತಿಳಿದುಬಂದಿದೆ. ಇನ್ನು, ಯುಕೆ ರೂಪಾಂತರವು 82 ದೇಶಗಳಿಗೆ ಮತ್ತು ಬ್ರೆಜಿಲಿಯನ್ ಕೋವಿಡ್ ಒಂಭತ್ತು ದೇಶಗಳಿಗೆ ಹರಡಿದೆ.ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಮಹಾರಾಷ್ಟ್ರ ಮತ್ತು ಕೇರಳದಂತಹ ಕೆಲವೇ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ.

English summary
Several cases of coronavirus mutation have been observed in Maharashtra, a senior scientist told NDTV today, underscoring that they are yet to observe behaviour - including how fast or slow it infects people -- and pointed out that it is "too early to call it a strain".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X