ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ: ಕೊವಿಡ್ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರ

|
Google Oneindia Kannada News

ಮುಂಬೈ, ಜುಲೈ 18: ಕೊವಿಡ್ 19 ಕ್ವಾರಂಟೈನ್ ಕೇಂದ್ರದಲ್ಲಿ 40 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಪಾನ್‌ವೇಲ್‌ನಲ್ಲಿ ನಡೆದಿದೆ.

ಈ ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರನ್ನು ಇರಿಸಲಾಗಿತ್ತು. ಅತ್ಯಾಚಾರವೆಸಗಿದ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋಗೆ ಕೊರೊನಾಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋಗೆ ಕೊರೊನಾ

20 ವರ್ಷದ ಯುವಕ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಜುಲೈ 15ರಂದು ಆರೋಪಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ತನ್ನ ಅಣ್ಣನಿಗೆ ಊಟ ನೀಡಲು ಬಂದಿದ್ದ. ಆತ ಐದನೇ ಮಹಡಿಯಲ್ಲಿದ್ದ. ಆದರೆ ಆತ ತಿಳಿಯದೇ ಮಹಿಳೆಯ ರೂಮಿಗೆ ತೆರಳಿದ್ದ.

COVID-19 Patient Allegedly Rapes Woman At Quarantine Centre In Panvel

ಬಳಿಕ ಮಹಿಳೆ ಮತ್ತು ಯುವಕನ ನಡುವೆ ಗ್ವಾದ ನಡೆದಿತ್ತು ಆತ ಆ ರೂಮಿನಿಂದ ತೆರಳಿದ್ದ, ಮರುದಿನ ಆತ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಕಾರಣ, ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು.

ಬಳಿಕ ಮರುದಿನ ಸಂಜೆ 7.30ರ ಸುಮಾರಿಗೆ ಆಕೆಯ ರೂಮಿಗೆ ತೆರಳಿದ್ದ ಆತ ತಾನು ವೈದ್ಯ ಎಂದು ಹೇಳಿಕೊಂಡಿದ್ದ. ಆಕೆಯ ಆರೋಗ್ಯವನ್ನು ವಿಚಾರಿಸಿದ್ದ. ಬಳಿಕ ಆಕೆ ಮೈಕೈ ನೋವು ಎಂದು ಹೇಳಿಕೊಂಡಿದ್ದಳು, ಮಸಾಜ್ ಮಾಡುವುದಾಗಿ ಆಕೆಯನ್ನು ವಿವಸ್ತ್ರಗೊಳಿಸಿ ಬಳಿಕ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಬಾತ್‌ರೂಂಗೆ ಆಕೆಯನ್ನು ಎಳೆದುಕೊಂಡು ಹೋಗಿದ್ದ, ಬಾಯಿಯನ್ನು ಮುಚ್ಚಿ ಅತ್ಯಾಚಾರವೆಸಗಿದ್ದ, ಆತ ಮಾಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ, ಲಾಕ್‌ಡೌನ್ ಇದ್ದಿದ್ದರಿಂದ ಆತನಿಗೆ ಕೆಲಸವಿರಲಿಲ್ಲ. ಮಹಿಳೆಯು ಆಟೋ ಚಾಲಕರ ಪತ್ನಿಯಾಗಿದ್ದಾರೆ. ಆತನ ಮೇಲೆ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಅಡಿ ಪ್ರಕರಣ ದಾಖಲಿಸಲಾಗಿದೆ.

English summary
The Panvel Taluka police have booked a 25-year-old COVID-19 patient for allegedly raping a 40-year-old woman at a quarantine facility at Indiabulls at Kon village in Panvel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X