ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮುಂಬೈ ನಡುವೆ ರೈಲು ಹಾಗೂ ವಿಮಾನ ಸೇವೆ ಸ್ಥಗಿತಕ್ಕೆ ನಿರ್ಧಾರ

|
Google Oneindia Kannada News

ಮುಂಬೈ, ನವೆಂಬರ್ 21: ದೆಹಲಿ ಹಾಗೂ ಮುಂಬೈ ನಡುವೆ ರೈಲು ಹಾಗೂ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಆಲೋಚಿಸಲಾಗಿದೆ.ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಕೊವಿಡ್ 19: ಡಿಸೆಂಬರ್ 31ರವರೆಗೂ ಮುಂಬೈನ ಶಾಲೆಗಳು ಬಂದ್ಕೊವಿಡ್ 19: ಡಿಸೆಂಬರ್ 31ರವರೆಗೂ ಮುಂಬೈನ ಶಾಲೆಗಳು ಬಂದ್

ಮಹಾರಾಷ್ಟ್ರದಲ್ಲಿ ಶುಕ್ರವಾರದ ವೇಳೆಗೆ 1768695 ಕೊವಿಡ್ ಪ್ರಕರಣಗಳು ದಾಖಲಾಗಿವೆ. ಒಂದು ದಿನದಲ್ಲಿ 5460 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಪ್ರಮಾಣ 46,511ಕ್ಕೆ ಏರಿಕೆಯಾಗಿದೆ.

 COVID-19: Maha Eyes Suspension Of Train, Flight Ops To Delhi

ದೆಹಲಿಯಲ್ಲಿ ಶುಕ್ರವಾರ 6608 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 5.17 ಲಕ್ಷಕ್ಕೇರಿದೆ. ಇದೇ ಅವಧಿಯಲ್ಲಿ 118 ಸಾವಿನ ಪ್ರಕರಣಗಳು ವರದಿಯಾಗಿವೆ.

ದೆಹಲಿಯಲ್ಲಿ ಕೊರೊನಾ ಅಲೆ ಮುಂದುವರೆದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದೆ.

ಇದೀಗ ಆ ಕೊರತೆ ನೀಗಿಸಲು ಅಧಿಕಾರಿಗಳು 205 ಐಸಿಯು ಹಾಗೂ 116 ಆಕ್ಸಿಜನ್ ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗಿದೆ.

ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಿಂದ 120 ವೆಂಟಿಲೇಟರ್‌ಗಳ ಆಗಮನವಾಗಿದೆ. ಯಾವ ಆಸ್ಪತ್ರೆಯಲ್ಲಿ ನಿತ್ಯ 32 ಸಾವಿರಕ್ಕೂ ಹೆಚ್ಚು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುವ ಆಸ್ಪತ್ರೆಗಳಿಗೆ ನೀಡಲಿದ್ದಾರೆ.

Recommended Video

Corona ಪ್ರಕರಣಗಳ ಅಸಲಿ ಸಂಖ್ಯೆ ತಿಳಿದರೆ ಭಯವಾಗೋದಂತೂ ಖಂಡಿತ | Oneindia Kannada

ನವೆಂಬರ್ 1ರವರೆಗೆ ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ 205 ಐಸಿಯು ಹಾಸಿಗೆಗಳ ವ್ಯವಸ್ಥೆ ಮಾಡಲಾಗಿತ್ತು. ಹಾಗೆಯೇ ಖಾಸಗಿ ಆಸ್ಪತ್ರೆಗಳಲ್ಲೂ ಇದೇ ಮಾದರಿಯಲ್ಲಿ ಹೆಚ್ಚುವರಿ ಹಾಸಿಗಳ ವ್ಯವಸ್ಥೆ ಮಾಡಲಾಗಿದೆ.

English summary
The Maharashtra government is toying with the idea of suspending train and flight operations to and from Delhi in view of the rising coronavirus cases in the national capital, a senior official said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X