ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸಿಎಂ ಉದ್ಧವ್ ಮನೆ ಬಾಗಿಲಿಗೆ ಬಂದ ಕೊರೊನಾ

|
Google Oneindia Kannada News

ಮುಂಬೈ, ಏಪ್ರಿಲ್ 6: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯ ಬಾಗಿಲಿಗೇ ಕೊರೊನಾ ಬಂದಿದೆ.

ಕೊರೊನಾ ದೇಶದ ವಿವಿಧೆಡೆ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ದೇಶದ ಇತರೆ ಭಾಗಗಳಿಗಿಂತ ಹೆಚ್ಚು ಕೊರೊನಾ ಪ್ರಕರಣಗಳಿವೆ.

ಭಾರತದಲ್ಲಿ 24 ಗಂಟೆಗಳಲ್ಲಿ 704 ಕೊರೊನಾ ಸೋಂಕಿತ ಪ್ರಕರಣ ಭಾರತದಲ್ಲಿ 24 ಗಂಟೆಗಳಲ್ಲಿ 704 ಕೊರೊನಾ ಸೋಂಕಿತ ಪ್ರಕರಣ

ಹೀಗಿರುವಾಗ ಉದ್ಧವ್ ಠಾಕ್ರೆ ಮನೆ 'ಮಾತೋಶ್ರೀ' ಎದುರಿಗೆ ಇದ್ದ ಚಹಾ ಅಂಗಡಿಯಲ್ಲಿ ಸಿಎಂ ಮನೆಯ ಸಿಬ್ಬಂದಿ ಅಲ್ಲದೆ ಅವರ ಬೆಂಗಾವಲು ಪಡೆ ಸಿಬ್ಬಂದಿ ಎಲ್ಲರೂ ಚಹಾ ಕುಡಿಯುತ್ತಿದ್ದರು. ಇದೀಗ ಆ ಅಂಗಡಿ ಮಾಲೀಕರನಿಗೆ ಕೊರೊನಾ ಬಂದಿದೆ. ಆ ಪ್ರದೇಶವನ್ನು ನಿರ್ಭಂದಿತ ಪ್ರದೇಶ ಎಂದು ಘೋಷಿಸಲಾಗಿದೆ.

Covid 19 Knocks At Thackeray’s Doorstep

ಚಹಾ ಅಂಗಡಿ ಮಾಲೀಕ ಕೆಲವು ದಿನಗಳಿಂದ ಶೀತ, ಕೆಮ್ಮು, ಕಫದಿಂದ ಬಳಲುತ್ತಿದ್ದರು. ಇದು ಕೊರೊನಾ ಸೋಂಕು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅವರನ್ನು ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾಕ್‌ಡೌನ್ :ದೇಶದ ಶೇ.42ರಷ್ಟು ವಲಸೆ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ ಲಾಕ್‌ಡೌನ್ :ದೇಶದ ಶೇ.42ರಷ್ಟು ವಲಸೆ ಕಾರ್ಮಿಕರಿಗೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ

ರಕ್ತ ಹಾಗೂ ಕಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಿಎಂ ಮನೆಯಿಂದ ಚಹಾ ಅಂಗಡಿಗೆ ಹೋಗಿ ಬಂದವರ ಬಗ್ಗೆ ಮಾಹಿತಿ ಪಡೆದು ಅವರನ್ನು ಚಿಕಿತ್ಸೆಗೊಳಪಡಿಸಲಾಗುತ್ತಿದೆ.

English summary
Covid-19 has apparently reached the doorstep of Maharashtra Chief Minister Uddhav Thackeray’s private residence ‘Matoshri’ in Bandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X