ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಪೊಲೀಸ್‌ಗೆ 8 ಹೋಟೆಲ್ ವ್ಯವಸ್ಥೆ ಮಾಡಿದ ರೋಹಿತ್ ಶೆಟ್ಟಿ

|
Google Oneindia Kannada News

ಮುಂಬೈ, ಏಪ್ರಿಲ್ 22: ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸರಿಗೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ನೆರವಾಗಿದ್ದಾರೆ. ಮುಂಬೈ ನಗರದಲ್ಲಿ ಕೊರೊನಾ ತಡೆಯಲು ರಾತ್ರಿ-ಹಗಲು ಕಷ್ಟ ಪಡುತ್ತಿರುವ ಪೊಲೀಸರಿಗಾಗಿ ಪ್ರತಿಷ್ಟಿತ 8 ಹೋಟೆಲ್‌ಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಕೊರೊನಾ ಲಾಕ್‌ಡೌನ್‌ ಸಂಬಂಧ ಮುಂಬೈ ನಗರವೆಲ್ಲಾ ಸುತ್ತಾಡುವ ಪೊಲೀಸರು, ಅದ್ಯಾವಾಗ ಮನೆಗೆ ಹೋಗ್ತಾರೆ, ಊಟ ಮಾಡ್ತಾರೆ ಎನ್ನುವುದು ಗೊತ್ತಿರಲ್ಲ. ಅಂತಹ ಪೊಲೀಸ್ ಸಿಬ್ಬಂದಿಗೆ ಸಹಾಯವಾಗಲಿ ಎಂಬ ಕಾರಣಕ್ಕೆ ಹೋಟೆಲ್‌ಗಳಲ್ಲಿ ಪೊಲೀಸರು ಉಳಿದುಕೊಳ್ಳಲು, ಸ್ನಾನ ಮಾಡಲು, ಹಾಗೂ ಊಟದ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

Rohit Shetty Helps To Mumbai Police

ವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರುವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರು

ಈ ವಿಚಾರವನ್ನು ಖುದ್ದು ಮುಂಬೈ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆ ಹಂಚಿಕೊಂಡಿದೆ. ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ರೋಹಿತ್ ಶೆಟ್ಟಿ ಧನ್ಯವಾದ ಹೇಳಿದೆ.

ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಅಥವಾ ಚಿತ್ರೋಧ್ಯಮ ಕಾರ್ಮಿಕರಿಗೆ ಸಿನಿ ಸ್ಟಾರ್‌ಗಳು ನೆರವಾಗಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ 25 ಕೋಟಿ ಹಣವನ್ನು ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಸಲ್ಮಾನ್ ಖಾನ್ ಸಿನಿ ಕಾರ್ಮಿಕರಿಗೆ ಸಹಾಯ ಮಾಡ್ತಿದ್ದಾರೆ. ಶಾರೂಖ್ ಖಾನ್ ತನ್ನ ಕಚೇರಿಯನ್ನು ಐಸೋಲೇಷನ್ ಗೆ ಬಿಟ್ಟುಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ.

ಅಮೆರಿಕದಲ್ಲಿ ಕರ್ನಾಟಕದ ಹಿರಿಮೆ ಹೆಚ್ಚಿಸಿದ ವೈದ್ಯೆ: ಸಿಎಂ ಅಭಿನಂದನೆಅಮೆರಿಕದಲ್ಲಿ ಕರ್ನಾಟಕದ ಹಿರಿಮೆ ಹೆಚ್ಚಿಸಿದ ವೈದ್ಯೆ: ಸಿಎಂ ಅಭಿನಂದನೆ

ರೋಹಿತ್ ಶೆಟ್ಟಿ ಚಿತ್ರೋಧ್ಯಮದ ಕಾರ್ಮಿಕರ ಒಕ್ಕೂಟಕ್ಕೆ 51 ಲಕ್ಷ ಹಣ ದೇಣಿಗೆ ನೀಡುವ ಮೂಲಕ, ಅವರ ದೈನಂದಿನ ಜೀವನಕ್ಕೆ ಸಹಾಯ ಮಾಡ್ತಿದ್ದಾರೆ. ಇದೀಗ, ಪೊಲೀಸರಿಗೆ ಹೋಟೆಲ್ ವ್ಯವಸ್ಥೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ರೋಹಿತ್ ಶೆಟ್ಟಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

English summary
Rohit Shetty has facilitated eight hotels across the city for police on-duty Covid Warriors to rest, shower & change with arrangements for breakfast & dinner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X