• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್ ಇಲ್ಲ, ಹದಿನೈದು ದಿನ ಶಿಸ್ತಿನ ಕರ್ಫ್ಯೂ: ಸಿಎಂ ಉದ್ಧವ್ ಠಾಕ್ರೆ

|

ಮುಂಬೈ, ಏಪ್ರಿಲ್ 13: ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಆಗಲಿದೆ ಎಂಬ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದಾರೆ ಸಿಎಂ ಉದ್ಧವ್ ಠಾಕ್ರೆ. ಇಂದು ರಾಜ್ಯವನ್ನುದ್ದೇಶಿಸಿ ವಿಡಿಯೋ ಸಂದೇಶ ನೀಡಿದ ಅವರು, 'ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕೊರೊನಾ ಪ್ರಕರಣಗಳನ್ನು ತಡೆಯಲು ಇತರೆ ಶಿಸ್ತುಕ್ರಮ ಜಾರಿಗೊಳಿಸಿದ್ದಾರೆ.

ಉದ್ಧವ್ ಠಾಕ್ರೆ ಅವರ ವಿಡಿಯೋ ಸಂದೇಶದ ಪ್ರಮುಖ ಅಂಶಗಳು ಇಂತಿವೆ.
* ನಾಳೆ (ಏಪ್ರಿಲ್14) ರ ರಾತ್ರಿ 8 ಗಂಟೆಯಿಂದ ಮೇ 1 ರ ಬೆಳಿಗ್ಗೆ 7 ಗಂಟೆವರೆಗೆ ಹದಿನೈದು ದಿನಗಳ ಕಾಲ ಶಿಸ್ತಿನ ಕರ್ಫ್ಯೂ ಅನ್ನು ರಾಜ್ಯದಾದ್ಯಂತ ವಿಧಿಸಲಾಗಿದೆ. ಹೆಚ್ಚು ಮಂದಿ ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ತುರ್ತು ಸೇವೆಗಳು ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಕಾರ್ಯ ನಿರ್ವಹಿಸಲಿವೆ.
* ರಾಜ್ಯದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇದೆ, ಆಸ್ಪತ್ರೆಗಳು ಬೆಡ್‌ಗಳು ಹಾಗೂ ರೆಮ್‌ಡೇಸ್ವೇರ್‌ ಲಸಿಕೆಗೆ ಬೇಡಿಕೆಯೂ ಹೆಚ್ಚಾಗಿದೆ ಎಂದರು ಸಿಎಂ.

* ಬೇರೆ ರಾಜ್ಯಗಳಿಂದ ಆಮ್ಲಜನಕ ತರಿಸಿಕೊಳ್ಳಲು ಭಾರತೀಯ ವಾಯುಸೇನೆಯ ನೆರವು ಒದಗಿಸಿಕೊಡುವಂತೆ ಪ್ರಧಾನಿ ಮೋದಿ ಅವರ ಬಳಿ ಮಾತನಾಡುವುದಾಗಿ ಭರವಸೆ ನೀಡಿದರು ಠಾಕ್ರೆ.
* ಮಹಾರಾಷ್ಟ್ರದಲ್ಲಿ ಇಂದು60,212 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
* ಕಳೆದ ನವೆಂಬರ್ ಡಿಸೆಂಬರ್ ವರೆಗೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ರಾಜ್ಯದಲ್ಲಿ 1200 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸಲಾಗುತ್ತಿದೆ. ಅದಲ್ಲದೇ ಸಾವಿರ ಮೆಟ್ರಿಕ್ ಟನ್ ಕೋವಿಡ್ ರೋಗಿಗಳಿಗೆ ಖರ್ಚಾಗುತ್ತಿದೆ.
* ಆಮ್ಲಜನಕದ ಕೊರತೆ ಜತೆಗೆ ಅಗತ್ಯ ಪ್ರದೇಶಗಳಿಗೆ ಸಾಗಾಣಿಕೆ ಕೂಡ ತಲೆನೋವಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ವಾಯು ಸೇನೆ ನೆರವನ್ನು ಕೇಳಿದ್ದೇನೆ ಎಂದರು ಠಾಕ್ರೆ.
*ಮುಂಬೈ, ಪುಣೆ, ವಿದರ್ಭಾ ಪ್ರದೇಶಗಳಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ. ಲಸಿಕೆಯನ್ನು ಹೆಚ್ಚೆಚ್ಚು ಕೊಡುವುದೇ, ಕೊರೊನಾ ನಿಯಂತ್ರಿಸಲು ಪ್ರಭಾವಿ ಮಾರ್ಗವಾಗಿದೆ.
*ಸಂಘಟಿತವಾಗಿ ರೋಗದ ವಿರುದ್ಧ ಎಲ್ಲರೂ ಹೋರಾಡಬೇಕು, ರಾಜ್ಯದಲ್ಲಿ ನಿತ್ಯ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

English summary
Maharashtra CM Uddhav Thackeray says We are continuously upgrading our healthcare infrastructure but they are under pressure. There is a shortage of medical oxygen, beds and the demand for Remdesivir has also increased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X