ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಭೀತಿ: ಅಹಮದಾಬಾದ್-ಮುಂಬೈ ನಡುವಿನ ತೇಜಸ್ ಎಕ್ಸ್‌ಪ್ರೆಸ್ ಸೇವೆ ಸ್ಥಗಿತ

|
Google Oneindia Kannada News

ಮುಂಬೈ, ಏಪ್ರಿಲ್ 2: ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಪರಿಸ್ಥಿತಿಯ ಮಧ್ಯೆ, ಪಶ್ಚಿಮ ರೈಲ್ವೆ ವಿಭಾಗ ಅಹಮದಾಬಾದ್-ಮುಂಬೈ-ಅಹಮದಾಬಾದ್ ತೇಜಸ್ ಎಕ್ಸ್‌ಪ್ರೆಸ್ ಸೇವೆಯನ್ನು ಏಪ್ರಿಲ್ 2ರಿಂದ ಒಂದು ತಿಂಗಳವರೆಗೆ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ವೆಸ್ಟರ್ನ್ ರೈಲ್ವೆಯ ಮುಂಬೈ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಗುರುವಾರ ಸಂಜೆ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಈ ಘೋಷಣೆ ಮಾಡಿದ್ದಾರೆ.

ಅಹಮದಾಬಾದ್-ಮುಂಬೈ ಸೆಂಟ್ರಲ್-ಅಹಮದಾಬಾದ್ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 82902/82901 ಅನ್ನು 02-04-2021 ರಿಂದ ಒಂದು ತಿಂಗಳ ವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

Covid-19 2nd Wave: Tejas Express Service Shutdown Between Ahmedabad And Mumbai

'ಈ ರೈಲು ಸಂಪರ್ಕಿಸುವ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ, ಇದು ಸಾಮಾನ್ಯವಾಗಿ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು' ಎಂದು ಭಾರತೀಯ ರೈಲ್ವೆ ಸಂಸ್ಥೆಯ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ತನ್ನ ಸೇವೆಗಳನ್ನು ಪುನರಾರಂಭಿಸಿದ ನಂತರ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಆರ್‌ಸಿಟಿಸಿ ಈ ರೈಲಿನ ಎಲ್ಲಾ ಪ್ರಯಾಣಗಳನ್ನು ಮತ್ತೆ ಕಳೆದ ನವೆಂಬರ್ 24 ರಿಂದ ರದ್ದುಗೊಳಿಸಿತ್ತು.

ಈ ವರ್ಷದ ಫೆಬ್ರವರಿ 14 ರಿಂದ ರೈಲ್ವೆ ಅಧಿಕಾರಿಗಳು ವಾರದಲ್ಲಿ ನಾಲ್ಕು ದಿನಗಳು ಮುಂಬೈ ಸೆಂಟ್ರಲ್-ಅಹಮದಾಬಾದ್ ತೇಜಸ್ ಎಕ್ಸ್‌ಪ್ರೆಸ್ ಸೇವೆಗಳನ್ನು ನಿಯಮಿತವಾಗಿ ಪುನರಾರಂಭಿಸಿದ್ದರು. ಈಗ ಮತ್ತೆ ಸ್ಥಗಿತಗೊಂಡಿದೆ.

English summary
Amidst the escalating situation of Covid-19 positive cases, the Western Railway Department has announced that the Ahmedabad-Mumbai-Ahmedabad Tejas Express will be shut down for a month from April 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X