ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಕ್ವಾರೆಂಟೈನ್ ಕೇಂದ್ರಕ್ಕೆ ನವಜೋಡಿಯ ವಿಶೇಷ ಉಡುಗೊರೆ

|
Google Oneindia Kannada News

ಮುಂಬೈ, ಜೂನ್.24: ನೊವೆಲ್ ಕೊರೊನಾವೈರಸ್ ಭೀತಿಗೆ ಭಾರತಕ್ಕೆ ಭಾರತವೇ ಸಿಕ್ಕು ನಲುಗಿದೆ. ದಿನಂಪ್ರತಿ ಸಾವಿರ ಸಾವಿರ ಜನರಿಗೆ ಸೋಂಕು ಅಂಟಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡುವುದಕ್ಕೆ ಸರ್ಕಾರಗಳೇ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ.

Recommended Video

New Married Couples Donated 50 Beds To A Mumbai Quarantine Centre | Oneindia Kannada

ಮಹಾರಾಷ್ಟ್ರ ಮತ್ತು ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಬೆಡ್ ಗಳ ವ್ಯವಸ್ಥೆಯೇ ಇಲ್ಲದಂತಾ ಸಂದಿಗ್ಧ ಸ್ಥಿತಿ ಎದುರಾಗಿದೆ. ಈ ಸಮಸ್ಯೆ ಅರಿತುಕೊಂಡ ನವಜೋಡಿಗಳು ಮಾದರಿ ಕೊಡುಗೆಯೊಂದನ್ನು ನೀಡಿದ್ದಾರೆ.

ಮಹಾರಾಷ್ಟ್ರ ಮುಂಬೈ ಸಮೀಪದ ವಾಸೈ ಪ್ರದೇಶದಲ್ಲಿ ಜೂನ್.23ರ ಮಂಗಳವಾರ ನವಜೀವನಕ್ಕೆ ಕಾಲಿಸಿದ ಎರಿಕ್ ಹಾಗೂ ಮರ್ಲಿನ್ ದಂಪತಿ ಮುಂಬೈನಲ್ಲಿರುವ ಕ್ವಾರೆಂಟೈನ್ ಕೇಂದ್ರವೊಂದಕ್ಕೆ 50 ಬೆಡ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕೋವಿಡ್ - 19 ಸೋಂಕು; ದೇಶದಲ್ಲಿ 2ನೇ ಸ್ಥಾನಕ್ಕೆ ಬಂದ ದೆಹಲಿಕೋವಿಡ್ - 19 ಸೋಂಕು; ದೇಶದಲ್ಲಿ 2ನೇ ಸ್ಥಾನಕ್ಕೆ ಬಂದ ದೆಹಲಿ

A New Couples Donated 50 Beds To A Mumbai Quarantine Centre On Their Wedding Day


ಮಹಾರಾಷ್ಟ್ರಕ್ಕೆ ಕೊರೊನಾವೈರಸ್ ಗಂಡಾಂತರ:

ಮಹಾರಾಷ್ಟ್ರ ಕೊರೊನಾವೈರಸ್ ಅಟ್ಟಹಾಸಕ್ಕೆ ಸಿಕ್ಕು ನಲುಗಿದ್ದು, ದೇಶದಲ್ಲೇ ಅತಿಹೆಚ್ಚು ಸೋಂಕಿತರು ಇದೊಂದೇ ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಕೊರೊನಾವೈರಸ್ ಸೋಂಕಿತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 1,39,010ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 69,631 ಸೋಂಕಿತರು ಗುಣಮುಖರಾಗಿದ್ದರೆ, 62,833ಕ್ಕೂ ಅಧಿಕ ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿಗೆ 6531ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ.

English summary
A New Couples Donated 50 Beds To A Mumbai Quarantine Centre On Their Wedding Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X