ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 3ನೇ ಅಲೆ ಮನೆ ಬಾಗಿಲಲ್ಲೇ ಇದೆ; ಹಬ್ಬದ ಆಚರಣೆಗೆ ನಿರ್ಬಂಧ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 6: 'ದೇಶದಲ್ಲಿ ಹಬ್ಬಗಳು ಆರಂಭವಾಗುತ್ತಿದ್ದು, ಕೊರೊನಾ ಮೂರನೇ ಅಲೆ ಭೀತಿ ಇರುವುದರಿಂದ ಸದ್ಯಕ್ಕೆ ನಾಗರೀಕರ ಆರೋಗ್ಯಕ್ಕೆ ಆದ್ಯತೆ ನೀಡಬೇಕಿದೆ. ಹಬ್ಬದ ಆಚರಣೆಯನ್ನು ಆನಂತರವೂ ಮಾಡಬಹುದು. ಆದರೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗುತ್ತಿರುವ ಈ ಸಮಯದಲ್ಲಿ ಎಚ್ಚರಿಕೆಯಿಂದಿರುವುದು ಅವಶ್ಯಕ' ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಸೋಮವಾರ ಆರೋಗ್ಯಾಧಿಕಾರಿಗಳೊಂದಿಗೆ ಉದ್ಧವ್ ಠಾಕ್ರೆ ವಿಪತ್ತು ನಿರ್ವಹಣಾ ಸಭೆ ನಡೆಸಿದ್ದು, 'ಹಬ್ಬಗಳನ್ನು ನಾವು ಆನಂತರವೂ ಆಚರಿಸಬಹುದು. ಸದ್ಯಕ್ಕೆ ಜನರ ಆರೋಗ್ಯಕ್ಕೆ ಆದ್ಯತೆ ನೀಡೋಣ. ರಾಜ್ಯದಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದ್ದು, ಪರಿಸ್ಥಿತಿ ಕೈಮೀರುವ ಸಾಧ್ಯತೆಯಿದೆ' ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಹೇಗಿರಲಿದೆ? ತಜ್ಞರ ಉತ್ತರ...ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಹೇಗಿರಲಿದೆ? ತಜ್ಞರ ಉತ್ತರ...

'ಹಬ್ಬಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಲು ಯಾರು ಬಯಸುತ್ತಾರೆ? ಆದರೆ ಈ ಕ್ಷಣದಲ್ಲಿ ಜನರ ಜೀವವೇ ಮುಖ್ಯವಾಗಿದೆ' ಎಂದು ಹೇಳಿದರು.

CoronavirusThird Wave At Doorstep Maharashtra CM Cancels Religious Gatherings

ಮಹಾರಾಷ್ಟ್ರದಲ್ಲಿ ಜನಸಂದಣಿಯು ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ಎಲ್ಲಾ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ, ಕೂಟಗಳನ್ನು ರದ್ದುಗೊಳಿಸುವಂತೆ ಠಾಕ್ರೆ ನಿರ್ದೇಶಿಸಿದ್ದಾರೆ.

'ಕೊರೊನಾ ಮೂರನೇ ಅಲೆ ನಮ್ಮ ಮನೆ ಬಾಗಿಲ ಬಳಿಯೇ ಇದೆ. ಇದಕ್ಕೆ ಎಲ್ಲರೂ ಸಿದ್ಧರಾಗಿರಬೇಕಿದೆ. ಎರಡನೇ ಅಲೆಯಲ್ಲಿ ಇಡೀ ದೇಶ ಹೇಗೆ ತೊಂದರೆ ಅನುಭವಿಸಿತು ಎಂಬುದು ನಮ್ಮ ಕಣ್ಣಮುಂದೆಯೇ ಇದೆ. ಹೀಗಾಗಿ ಈಗ ಹೆಚ್ಚು ಜಾಗರೂಕವಾಗಿರಬೇಕಿದೆ. ಹಬ್ಬಗಳಿಗೆ ನಿರ್ಬಂಧ ಹೇರಲೇಬೇಕಿದೆ' ಎಂದು ಹೇಳಿದ್ದಾರೆ.

ಮುಂಬರುವ ಹಬ್ಬದ ದಿನಗಳು ನಿರ್ಣಾಯಕ ಹಾಗೂ ಸವಾಲಿನ ಸಂಗತಿಯಾಗಿದೆ. ಕೊರೊನಾ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ ಎಂದು ಠಾಕ್ರೆ ಸೂಚಿಸಿದ್ದಾರೆ.

ಕೇರಳದಲ್ಲಿ ರಾತ್ರಿ ಕರ್ಫ್ಯೂ, ಭಾನುವಾರ ಲಾಕ್‌ಡೌನ್ ಮುಂದುವರಿಕೆಕೇರಳದಲ್ಲಿ ರಾತ್ರಿ ಕರ್ಫ್ಯೂ, ಭಾನುವಾರ ಲಾಕ್‌ಡೌನ್ ಮುಂದುವರಿಕೆ

ಕೇರಳದಲ್ಲಿ ಪ್ರತಿದಿನ 30 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ, ಇದು ಅಪಾಯದ ಸಂಕೇತವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮಹಾರಾಷ್ಟ್ರ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

CoronavirusThird Wave At Doorstep Maharashtra CM Cancels Religious Gatherings

ಕರ್ನಾಟಕದಲ್ಲಿ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ:
ಕರ್ನಾಟಕದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದೆ. ಗರಿಷ್ಠ 5 ದಿನದ ತನಕ ಮಾತ್ರ ಗಣೇಶೋತ್ಸವ ಆಚರಣೆ ಮಾಡಬೇಕು ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಾಲಯದೊಳಗೆ ಮತ್ತು ತಮ್ಮ-ತಮ್ಮ ಮನೆಗಳಲ್ಲಿ ಅಥವ ಸರ್ಕಾರಿ/ ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತಮಿಳುನಾಡಿನಲ್ಲಿ ಹಬ್ಬದ ಆಚರಣೆ ನಿರ್ಬಂಧ ತೆರವು:
ಸಾರ್ವಜನಿಕರ ಒತ್ತಾಯದ ಮೇರೆಗೆ ತಮಿಳುನಾಡಿನಲ್ಲಿ ಗಣೇಶ ಹಬ್ಬದ ಆಚರಣೆ ಮೇಲಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಗಣೇಶ ಹಬ್ಬದ ದಿನದಂದು ಸಣ್ಣ ದೇಗುಲಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ದೇವಸ್ಥಾನದ ಹೊರಗೆ ಗಣೇಶನ ವಿಗ್ರಹ ವಿಸರ್ಜನೆ ಮಾಡಬಹುದು ಎಂದು ಹೇಳಿದೆ. ಕಳೆದ ವಾರ ಭಾನುವಾರದಂದು ಬೀಚ್‌ಗಳಿಗೆ ಸಾರ್ವಜನಿಕರ ಪ್ರವೇಶವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು.

English summary
Maharashtra Chief Minister Uddhav Thackeray said health of citizens was a priority and celebrations could be held later as well, with fears of a third wave,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X