ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ರಸ್ತೆಯಲ್ಲಿ ಸೀನಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ

|
Google Oneindia Kannada News

ಮುಂಬೈ, ಮಾರ್ಚ್ 20: ರಸ್ತೆಯಲ್ಲಿ ಸೀನಿದ ಎನ್ನುವ ಕಾರಣಕ್ಕೆ ಸಾರ್ವಜನಿಕರು ವ್ಯಕ್ತಿಯೊಬ್ಬನನ್ನು ಥಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಕೊರೊನಾವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿತ್ಯ ಮಾಸ್ಕ್ ಅಥವಾ ಕರ್ಚಿಫ್ ಕಟ್ಟಿಕೊಳ್ಳದೆ ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ ಅದರಲ್ಲೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.

ಕೊರೊನಾ: ಒತ್ತಡ ಹೇರಿ ಪಿಜಿ, ಹಾಸ್ಟೆಲ್ ಖಾಲಿ ಮಾಡಿಸುವಂತಿಲ್ಲಕೊರೊನಾ: ಒತ್ತಡ ಹೇರಿ ಪಿಜಿ, ಹಾಸ್ಟೆಲ್ ಖಾಲಿ ಮಾಡಿಸುವಂತಿಲ್ಲ

ಹೀಗಾಗಿ ಕರ್ಚಿಫ್ ಬಾಯಿಗೆ ಅಡ್ಡಲಾಗಿ ಹಿಡಿಯದೇ ಸೀನಿದ ಕಾರಣಕ್ಕೆ ವ್ಯಕ್ತಿಯನ್ನು ಥಳಿಸಲಾಗಿದೆ. ಮಹಾರಾಷ್ಟ್ರದ ಗುಜಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 'ಸೀನುವಾಗ ಮುಖಕ್ಕೆ ಅಡ್ಡಲಾಗಿ ಏನಾದರೂ ಇಟ್ಟುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವೇ? ನಿಮ್ಮಂಥವರಿಂದಲೇ ಕೊರೋನಾ ವೈರಸ್ ಹೆಚ್ಚು ಹರಡುತ್ತಿದೆ,' ಎಂದು ಬೈಕ್​ ತಡೆದವರು ಸೀನಿದವನಿಗೆ ಬುದ್ಧಿವಾದ ಹೇಳಿದ್ದಾರೆ.

Corona Fear Man Beaten Up For Sneezing In Maharashtra

ನಂತರ ಸೀನಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಕೆಲ ಕಾಲ ಟ್ರಾಫಿಕ್​ ಜ್ಯಾಮ್​ ಕೂಡ ಉಂಟಾಗಿತ್ತು. ನಂತರ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ 49 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

English summary
Fear of coronavirus has become all-pervasive, a man riding a motorbike was thrashed in Kolhapur city of Maharashtra on Thursday just because he sneezed in public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X