ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ: ಡಬ್ಬಾವಾಲಗಳಿಗೂ ತಟ್ಟಿದ ಕೊರೊನಾ ಭೀತಿ

|
Google Oneindia Kannada News

ಮಂಬೈ, ಮಾರ್ಚ್ 18: ಮುಂಬೈನಲ್ಲಿ ಇಬ್ಬರು ಮಹಿಳೆಯರಿಗೆ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 47ಕ್ಕೇರಿದೆ. ಪ್ರತಿಕೂಲ ಪರಿಸ್ಥಿತಿಯಿಂದ ಪ್ರತಿದಿನ ಕಚೇರಿಗಳಿಗೆ ಊಟದ ಡಬ್ಬಿ ಒದಗಿಸುತ್ತಿದ್ದ ಡಬ್ಬಾವಾಲಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.

ಮಾರ್ಚ್ 31ರ ತನಕ ಡಬ್ಬಾಗಳ ಡೆಲಿವರಿ ಮಾಡುವುದಿಲ್ಲ ಎಂದು ಎಂದು ಮುಂಬೈ ಡಬ್ಬಾವಾಲ ಅಸೋಸಿಯೇಷನ್ ಅಧ್ಯಕ್ಷ ಸುಭಾಷ್ ತಾಳೇಕರ್ ತಿಳಿಸಿದ್ದಾರೆ.

ಮುಂಬೈನಲ್ಲಿ ಸುಮಾರು 2,00,000ಕ್ಕೂ ಅಧಿಕ ಜನರಿಗೆ ಮನೆಯೂಟವನ್ನು ತಲುಪಿಸುವ ಡಬ್ಬಾವಾಲಾಗಳ ನೆಟ್ವರ್ಕ್ ಕೈ ಕೊಟ್ಟರೆ ಅರ್ಧದಷ್ಟು ಮುಂಬೈ ನಿವಾಸಿಗಳು ಉಪವಾಸ ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಹಿಂದೆ 2011 ರಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಲೋಕಪಾಲ್ ಮಸೂದೆ ಖಂಡಿಸಿ ಉಪವಾಸ ಕೂರಲು ನಿರ್ಧರಿಸಿದಾಗ ಬೆಂಬಲಕ್ಕೆ ಡಬ್ಬಾವಾಲಗಳು ನಿಂತು, ಒಂದು ದಿನ ಡಬ್ಬಾ ವಿತರಣೆ ಬಂದ್ ಮಾಡಿದ್ದರು. ಮಿಕ್ಕಂತೆ ಎಂಥದ್ದೇ ಪ್ರತಿಕೂಲ ಪರಿಸ್ಥಿತಿ ಇದ್ದರೂ ಡಬ್ಬಾವಾಲಗಳ ತಮ್ಮ ಕರ್ತವ್ಯ, ವಿತರಣೆ ಸ್ಥಗಿತಗೊಳಿಸಿಸಲ್ಲ

ಕೊರೊನಾವೈರಸ್ ಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾವೈರಸ್ ಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

Coronavirus outbreak: Dabbawalas Suspend Tiffin Delivery Till March 31

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಶಾಲಾ, ಕಾಲೇಜು, ಕಚೇರಿ ಬಂದ್ ಮಾಡುವಂತೆ ಉದ್ಧವ್ ಠಾಕ್ರೆ ಸರ್ಕಾರ ಸೂಚಿಸಿದೆ. ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿವೆ. ಹೀಗಾಗಿ, ಡಬ್ಬಾವಾಲಗಳಿಗೆ ನಿತ್ಯ ಡಬ್ಬಾ ವಿತರಣೆ ಸಂಖ್ಯೆಯೂ ಕಡಿಮೆಯಾಗಿತ್ತು.

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

ಈ ನಡುವೆ ಯುಕೆ ಹಾಗೂ ದುಬೈನಿಂದ ಬಂದ ಇಬ್ಬರು ಮಹಿಳೆಯರಲ್ಲಿ ಕೊವಿಡ್19 ಪಾಸಿಟಿವ್ ಇರುವುದು ಪತ್ತೆಯಾಗಿದೆ. ಯುಕೆಯಿಂದ ಬಂದ 22ವರ್ಷ ವಯಸ್ಸಿನ ಯುವತಿ ಹಾಗೂ ಉಲ್ಹಾಸ್ ನಗರದ ನಿವಾಸಿ 49 ವರ್ಷ ವಯಸ್ಸಿನ ಮಹಿಳೆಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

English summary
Coronavirus outbreak:The dabbawalas in Mumbai who send out tiffin to homes and offices have stopped delivery till March 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X