ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಗ್ಗೆ ಸುಳ್ಳು ಸುದ್ದಿ, ವದಂತಿ: 115 ಪ್ರಕರಣ ದಾಖಲು.!

|
Google Oneindia Kannada News

ಮುಂಬೈ, ಏಪ್ರಿಲ್ 7: ಲಾಕ್ ಡೌನ್ ವೇಳೆಯಲ್ಲಿ ಕೆಲವರು ವದಂತಿ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಸುಳ್ಳು ಮಾಹಿತಿಗಳಿಂದ ಕೆಲ ಜನ ಅಮಾಯಕರನ್ನು ವಂಚಿಸುತ್ತಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಮಹಾರಾಷ್ಟ್ರ ಸೈಬರ್ ಸೆಲ್ ಇಲ್ಲಿಯವರೆಗೂ ಒಟ್ಟು 115 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಟ ಅಂದರೂ 13 ಎಫ್.ಐ.ಆರ್ ಗಳು ರಿಜಿಸ್ಟರ್ ಆಗಿವೆ.

ಸೂಪರ್ ಸುದ್ದಿ: ಎರಡು ದಿನಗಳಲ್ಲಿ ಕೊರೊನಾನ ಕೊಲ್ಲುತ್ತೆ ಈ ಔಷಧಿ.!ಸೂಪರ್ ಸುದ್ದಿ: ಎರಡು ದಿನಗಳಲ್ಲಿ ಕೊರೊನಾನ ಕೊಲ್ಲುತ್ತೆ ಈ ಔಷಧಿ.!

''ಕೊರೊನಾ ವೈರಸ್ ಗೆ ಸಂಬಂಧ ಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಸಂದೇಶಗಳನ್ನು ಹರಡಿ ಜನರಲ್ಲಿ ಅನಗತ್ಯವಾಗಿ ಭೀತಿ ಸೃಷ್ಟಿಸಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಮಾತುಗಳು ಹೆಚ್ಚಾಗಿವೆ. ವಾಟ್ಸ್ ಆಪ್ ಮತ್ತು ಫೇಸ್‌ ಬುಕ್‌ ಅನ್ನು ಈ ಸುಳ್ಳು ಸುದ್ದಿಗೆ ಹೆಚ್ಚು ಬಳಸಲಾಗುತ್ತಿದೆ'' ಎಂದು ಮಹಾರಾಷ್ಟ್ರ ಸೈಬಲ್ ಸೆಲ್ ನ ಅಧಿಕಾರಿ ಬಾಲ್ ಸಿಂಗ್ ರಾಜ್ ಪುತ್ ತಿಳಿಸಿದ್ದಾರೆ.

Coronavirus: Maharashtra Registers 115 Cases Over Fake News Since Lockdown

ಇಲ್ಲಿಯವರೆಗೂ ಸುಳ್ಳು ಸುದ್ದಿ ಹರಡಿದ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ.

ಕೈಯಲ್ಲಿ ಗ್ಲೌಸ್ ಇದೆ ಅಂತ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ, ಜೋಕೆ!ಕೈಯಲ್ಲಿ ಗ್ಲೌಸ್ ಇದೆ ಅಂತ ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ, ಜೋಕೆ!

ಪುಣೆಯ ಗ್ರಾಮೀಣ ಭಾಗ, ಸತಾರಾ, ಜಲ್ಗಾಂವ್ ಮತ್ತು ಬೀಡ್ ಜಿಲ್ಲೆಗಳಲ್ಲಿ ವದಂತಿ ಹರಿಡಿದ್ದರ ಕುರಿತು ಹೆಚ್ಚು ಪ್ರಕರಣಗಳು ದಾಖಲಾಗಿವೆ.

English summary
Coronavirus: Maharashtra registers 115 cases over fake news since lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X