ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನ ಧಾರಾವಿಯ ಕೊಳೆಗೇರಿ ಕೊರೊನಾ ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆ

|
Google Oneindia Kannada News

ಮುಂಬೈ, ಏಪ್ರಿಲ್ 18: ಮುಂಬೈನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಧಾರಾವಿಯ ಕೊಳಗೇರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.

ಇದುವರೆಗೆ 10 ಮಂದಿ ಮೃತಪಟ್ಟಿದ್ದು, ಶುಕ್ರವಾರ 15 ಹೊಸ ಪ್ರಕರಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 101ಕ್ಕೆ ಏರಿದೆ.

62 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ಪ್ರಕರಗಳು ಮಾತುಂಗ ಲೇಬರ್ ಕ್ಯಾಂಪ್, ಮುಸ್ಲಿಂ ನಾಗಾರಂದ್ ಇಂದಿರಾ ನಗರ, ಸೋಶಿಯಲ್ ನಗರದಲ್ಲಿ ಇಬ್ಬರು, ಡಾ. ಬಾಳಿಗಾ ನಗರ, ಲಕ್ಷ್ಮೀ ಛಾವ್ಲ, ಜನತಾ ಸೊಸೈಟಿ, ಸರ್ವೋದಯ ಸೊಸೈಟಿಯಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.

ಧಾರಾವಿಯಲ್ಲಿ 8 ಲಕ್ಷ ಮಂದಿ ಒಟ್ಟಿಗೆ ವಾಸಿಸುತ್ತಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಿದೆ.

Dharavi

ಯಾರೂ ಮನೆಯಿಂದ ಹೊರಬರಬೇಡಿ ನಿಮಗೆ ಬೇಕಾದ ಅಗತ್ಯವಸ್ತುಗಳನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಮುಂಬೈನಲ್ಲಿ ಇದುವರೆಗೆ 2073 ಕೊರೊನಾ ಪ್ರಕರಣಗಳು ದಾಖಲಾಗಿವೆ.

ಮುಂಬೈ ಕೊಳಗೇರಿ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಪ್ರಕರಣ ದಾಖಲು!ಮುಂಬೈ ಕೊಳಗೇರಿ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಪ್ರಕರಣ ದಾಖಲು!

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಗುರುವಾರ 27 ಸಾವಿರ ಕೊವಿಡ್ 19 ಪರೀಕ್ಷೆಗಳನ್ನು ನಡೆಸಿದೆ.

English summary
The number of coronavirus cases in Mumbai's Dharavi - Asia's largest slum - has crossed the 100-mark. 15 new cases were detected in the sprawling area on Friday, taking the total to 101, including 10 deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X