ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Big Alert: ಮುಂಬೈನಲ್ಲಿ ಶೇ.79ರಷ್ಟು ಹೆಚ್ಚಾಯ್ತು ಕೊರೊನಾ ಕೇಸ್!

|
Google Oneindia Kannada News

ಮುಂಬೈ, ಆಗಸ್ಟ್ 10: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮತ್ತೊಮ್ಮೆ ದಾಖಲೆ ಬರೆದಿದೆ. ಒಂದೇ ದಿನದಲ್ಲಿ 852 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ.

ಬುಧವಾರ ವರದಿಯಾದ ಕೊರೊನಾ ವೈರಸ್ ಪ್ರಕರಣಗಳು ಜುಲೈ 1ರ ನಂತರದಲ್ಲಿ ಗರಿಷ್ಠ ಸಂಖ್ಯೆಯಾಗಿದೆ. ಕಳೆದೊಂದು ದಿನದಲ್ಲಿ ಸೋಂಕಿನಿಂದ ಒಬ್ಬರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 11,29,285ಕ್ಕೆ ಏರಿಕೆಯಾಗಿದೆ ಎಂದು ನಗರ ನಾಗರಿಕ ಸಂಸ್ಥೆ ತಿಳಿಸಿದೆ.

Explained: ಕ್ಯಾಲಿಪೋರ್ನಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆExplained: ಕ್ಯಾಲಿಪೋರ್ನಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

ಕಳೆದ ಜುಲೈ 1ರಂದು ಮಹಾನಗರದಲ್ಲಿ 978 ಪ್ರಕರಣಗಳು ಪತ್ತೆಯಾಗಿದ್ದು, ಎರಡು ಸಾವಿನ ಪ್ರಕರಣ ವರದಿಯಾಗಿತ್ತು. ತದನಂತರದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿತ್ತು. ಆದರೆ ಆಗಸ್ಟ್ ತಿಂಗಳ ಮೊದಲ ಎರಡು ದಿನಗಳನ್ನು ಹೊರತುಪಡಿಸಿದರೆ ಮುಂಬೈನಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಡುತ್ತಿವೆ.

ಮುಂಬೈನಲ್ಲಿ ಶೇ.79ರಷ್ಟು ಕೋವಿಡ್-19 ಹೆಚ್ಚಳ

ಮುಂಬೈನಲ್ಲಿ ಶೇ.79ರಷ್ಟು ಕೋವಿಡ್-19 ಹೆಚ್ಚಳ

ಮಂಗಳವಾರ ಮುಂಬೈನಲ್ಲಿ 476 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಅದಾಗಿ ಮರುದಿನವೇ ಈ ಸಂಖ್ಯೆ ಬಹುತೇಕ ಡಬಲ್ ಆಗಿದೆ. ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.79ರಷ್ಟು ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ, ಇಂದು 376 ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಇದು ಮುಂಬೈ ನಗರದ ಜನರಲ್ಲಿ ಹೊಸ ಆತಂಕವನ್ನು ಹುಟ್ಟು ಹಾಕುವಂತಿದೆ. ಇದರ ಮಧ್ಯೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,500 ಅಂಕಗಳನ್ನು ದಾಟಿ 3,545 ಕ್ಕೆ ತಲುಪಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಬುಲೆಟಿನ್ ತಿಳಿಸಿದೆ.

ಸೋಂಕಿನ ಲಕ್ಷಣವಿಲ್ಲದವರೇ 816 ಮಂದಿ

ಸೋಂಕಿನ ಲಕ್ಷಣವಿಲ್ಲದವರೇ 816 ಮಂದಿ

ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 852 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಈ ಪೈಕಿ 816 ಮಂದಿಯಲ್ಲಿ ಯಾವುದೇ ರೀತಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ, ಉಳಿದ 36 ರೋಗಿಗಳಲ್ಲಿ ಮಾತ್ರ ರೋಗದ ಲಕ್ಷಣಗಳು ಪತ್ತೆಯಾಗಿವೆ. ಇದರ ಮಧ್ಯೆ ಕಳೆದ 24 ಗಂಟೆಗಳಲ್ಲಿ ಒಟ್ಟು 9,670 ಮಂದಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದುವರೆಗೂ 1,79,04,139 ಜನರನ್ನು ಪರೀಕ್ಷಿಸಲಾಗಿದೆ. ಮಂಗಳವಾರ 6580 ಮಂದಿಯ ಮಾದರಿಯನ್ನು ಪರೀಕ್ಷಿಸಲಾಗಿತ್ತು.

ಮುಂಬೈನಲ್ಲಿ ಗುಣಮುಖರ ಸಂಖ್ಯೆ ಹೇಗಿದೆ?

ಮುಂಬೈನಲ್ಲಿ ಗುಣಮುಖರ ಸಂಖ್ಯೆ ಹೇಗಿದೆ?

ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 433 ರೋಗಿಗಳು ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ. ಮುಂಬೈನಲ್ಲಿ ಒಟ್ಟು ಗುಣಮುಖರ ಸಂಖ್ಯೆಯು 11,06,079ಕ್ಕೆ ಏರಿಕೆಯಾಗಿದೆ. ಮಹಾನಗರದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯು ಶೇ.98ರಷ್ಟಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಬುಲೆಟಿನ್ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಏರಿಳಿತ

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಏರಿಳಿತ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಏರಿಳಿತದ ಮಧ್ಯೆ ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 4,41,90,697ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ ಶೇ. 3.50 ರಿಂದ 4.94ಕ್ಕೆ ಏರಿಕೆಯಾಗಿದೆ. ಅದೇ ರೀತಿ ವಾರದ ಪಾಸಿವಿಟಿವಿಟಿ ದರವು ಶೇ.4.90 ರಷ್ಟಿದೆ. ಕಳೆದ 24 ಗಂಟೆಗಳಲ್ಲೇ 16,047 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅದೇ ರೀತಿ ಸಕ್ರಿಯ ಪ್ರಕರಣಗಳ ಸಂಖ್ಯೆ 128,261ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Corona virus case spike almost 79 per cent in mumbai; 852 cases reported in last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X