ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳ್ಳೆ ಸುದ್ದಿ: ಕೊರೊನಾ ಹಾಟ್‌ಸ್ಪಾಟ್ ಧಾರಾವಿಯಲ್ಲಿ ಕೇವಲ ಒಂದೇ ಒಂದು ಕೇಸ್

|
Google Oneindia Kannada News

ಮುಂಬೈ, ಜುಲೈ 8: ಕೊರೊನಾ ಹಾಟ್‌ಸ್ಪಾಟ್ ಎಂದೇ ಕುಖ್ಯಾತಿ ಹೊಂದಿರುವ ಮಹಾರಾಷ್ಟ್ರದ ಧಾರಾವಿಯಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ ಒಂದೇ ಒಂದು ಪ್ರಕರಣ ಪತ್ತೆಯಾಗಿದೆ.

ಏಪ್ರಿಲ್ ಮೊದಲ ವಾರದಿಂದ ಧಾರಾವಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಒಂದು ದಿನಕ್ಕೆ ಕೇವಲ ಒಂದೇ ಪ್ರಕರಣ ದೃಢಪಟ್ಟಿದೆ.

ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'

ಧಾರಾವಿಯಲ್ಲಿ ಕಡಿಮೆ ಆದಾಯವಿರುವ ಜನರ ಬದುಕುತ್ತಿದ್ದಾರೆ. ಕಿರಿದಾದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಹೆಚ್ಚವಾಗಿತ್ತು.

Corona Hotspot Dharavi Reports Only One Positive Case In 24 Hours

ಧಾರಾವಿಯಲ್ಲಿ 2.5 ಸ್ಕ್ವೇರ್ ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 6.5 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಜುಲೈ 4 ರಂದು 2 ಪ್ರಕರಣಗಳು ಪತ್ತೆಯಾಗಿತ್ತು.ಇದುವರೆಗೆ 2,335 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. 352 ಪ್ರಕರಣಗಳು ಸಕ್ರಿಯವಾಗಿವೆ. 1735 ಮಂದಿ ಗುಣಮುಖರಾಗಿದ್ದಾರೆ.

ಕೆಲವು ವಾರಗಳ ಹಿಂದೆ ಧಾರಾವಿಯೇ ಮುಂಬೈಗೆ ಭಾರಿ ದೊಡ್ಡ ಪೆಟ್ಟು ನೀಡಲಿದೆ ಎಂದು ಹೇಳಲಾಗಿತ್ತು. ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ, ಒಂದೇ ಶೌಚಾಲಯ ಬಳಕೆ ಮಾಡುತ್ತಾರೆ, ಒಟ್ಟಿಗೆ ಜೀವಿಸುತ್ತಾರೆ. ಕೊರೊನಾ ಸುಲಭವಾಗಿ ಹರಡುತ್ತದೆ.

ಮಂಗಳವಾರದಂದು ಮಹಾರಾಷ್ಟ್ರದಲ್ಲಿ 2134 ಮಂದಿಗೆ ಕೊರೊನಾ ಸೋಂಕು ತಗುಲಿದೆ. 224 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 2,17,121 ಪ್ರಕರಣಗಳಿವೆ. 9250 ಮಂದಿ ಮೃತಪಟ್ಟಿದ್ದಾರೆ.

English summary
sia's largest slum Dharavi which was once a hotspot for the COVID-19 infection has recorded only one coronavirus positive case in the last 24 hours for the first time since the first week of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X